ಸುದ್ದಿಗಳು

ಸಿಂಡ್ರೆಲಾ ಲುಕ್ ನಲ್ಲಿ ರಾಯ್ ಲಕ್ಷ್ಮಿ

ಬೆಂಗಳೂರು, ಏ.15:

ದಕ್ಷಿಣ ಭಾರತದ ಗ್ಲಾಮರಸ್‌ ನಟಿ ರಾಯ್‌ ಲಕ್ಷ್ಮಿ ಇದೀಗ ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕೂದಲಿಗೆ ಪಿಂಕ್‌ ಕಲರ್‌ ಡೈ ಮಾಡಿರುವ ರಾಯ್‌ ಲಕ್ಷ್ಮಿ ಫೋಟೋ ಇದೀಗ ವೈರಲ್ ಆಗಿದೆ.

ಹೆಚ್ಚಾಗಿ ಕಣ್ಣು ಕುಕ್ಕುವಂತಹ ಗಾಢ ಬಣ್ಣವನ್ನು ಕೂದಲಿಗೆ ಹಾಕಲು ಯಾರೂ ಇಷ್ಟ ಪಡುವುದಿಲ್ಲ. ಆದರೆ, ಗ್ಲಾಮರಸ್ ಬೆಡಗಿ ರಾಯ್‌ ಲಕ್ಷ್ಮಿ ಬ್ಯೂಟಿಫುಲ್‌ ಪಿಂಕ್ ಬಣ್ಣಕ್ಕೆ ಮಾರುಹೋಗಿದ್ದಾರೆ. ಬ್ರೌನ್‌, ಗ್ರೇ ಮತ್ತು ಕೂಲ್‌ ಪಿಂಕ್‌ ಕಲರ್‌ ಈ ಮೂರು ಕಾಂಬಿನೇಷನ್‌ ನ ಹೇರ್‌ ಕಲರ್‌ ರಾಯ್ ಲಕ್ಷ್ಮಿ ಮಾಡಿಸಿಕೊಂಡಿದ್ದಾರೆ. ಜೊತೆಗೆ ಸಮ್ಮರ್‌ ಸರ್‌ ಪ್ರೈಸ್‌ ಎಂದು ಟ್ವೀಟ್‌ ಮಾಡಿದ್ದಾರೆ. ಜೊತೆಗೆ ಫೋಟೋ ಜತೆ ಸಿಂಡ್ರೆಲಾ ಎಂದು ಟ್ಯಾಗ್‌ ಮಾಡಿದ್ದಾರೆ.

ಇದೀಗ ತಮಿಳು ಭಾಷೆಯ ‘ಸಿಂಡ್ರೆಲಾ’ ಎಂಬ ಚಿತ್ರದಲ್ಲಿ ರಾಯ್ ಲಕ್ಷ್ಮಿ ಅಭಿನಯಿಸುತ್ತಿದ್ದು ಈ ಫೋಟೋ ನೋಡಿದವರಿಗೆಲ್ಲಾ ಇದೇ ಚಿತ್ರದ ಲುಕ್‌ ಎಂಬ ಕುತೂಹಲ ಮೂಡಿದೆ. ಇದರ ಜೊತೆಗೆ ‘ನೀಯಾ 2’ ಚಿತ್ರದ ಶೂಟಿಂಗ್‌ ನಲ್ಲೂ ಬಿಝಿಯಾಗಿದ್ದಾರೆ.

ಚಂದನವನದಲ್ಲೂ ಬಣ್ಣ ಹಚ್ಚಿರುವ ರಾಯ್ ಲಕ್ಷ್ಮಿ ಸದ್ಯ ‘ಝಾನ್ಸಿ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಪೊಲೀಸ್‌ ಆಫೀಸರ್‌ ಪಾತ್ರದಲ್ಲಿ ರಾಯ್ ಲಕ್ಷ್ಮಿ  ಕಾಣಿಸಿಕೊಂಡಿದ್ದಾರೆ.

 

View this post on Instagram

 

Surprise !!!😍💖 Shades of grey & innocence of pink 😍 #latest #firsttime #exclusive #CINDERELLA 👗👠 Yay or nay ?

A post shared by Raai Laxmi (@iamraailaxmi) on

ಮುದ ನೀಡುವ ಅಕ್ವೇರಿಯಂ

#balkaninews #sandalwood #bollywood #raailaxmimovies #raailaxmiinstagram #raailaxmitwitter

Tags