ಬಾಲ್ಕನಿಯಿಂದಸಂದರ್ಶನಸುದ್ದಿಗಳು

ನಟನಾ ಕ್ಷೇತ್ರದಲ್ಲಿ ‘ಮಿಂಚು’ತ್ತಿರುವ ರಾಧಿಕಾ!!

ಧಾರಾವಾಹಿ ಮೂಲಕ ಗಮನ ಸೆಳೆದ ನಟಿ

ಬೆಂಗಳೂರು.ಮಾ.18: ಸಾಂಸ್ಕೃತಿಕ ನಗರಿ ಮೈಸೂರಿನ ಈ ಚೆಂದುಳ್ಳಿ ಚೆಲುವೆ ಇಂದು ನಟನಾ ಲೋಕದಲ್ಲಿ ‘ಮಿಂಚು’ತ್ತಿರುವ ಸುಂದರಿ. ಈಕೆಗೆ ತಾನೊಬ್ಬಳು ನಟಿಯಾಗಬೇಕು, ಬಣ್ಣದ ಲೋಕದಲ್ಲಿ ತಾನೂ ಕೂಡ ಮಿನುಗಬೇಕು ಎಂಬ ಯಾವೊಂದು ಆಸೆ ಇರಲಿಲ್ಲ. ಬಹುಶಃ ಅದೃಷ್ಟ ಎಂದರೆ ಇದೇ ಇರಬೇಕೇನೋ? ಬಯಸದೇ ಬಂದ ಅವಕಾಶವನ್ನು ಬದಿಗೊತ್ತದೇ ಸದುಪಯೋಗ ಪಡಿಸಿಕೊಂಡು ನಟನಾ ಲೋಕದಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡಿರುವ ಅರಮನೆ ನಗರದ ಬೆಡಗಿ ಹೆಸರು ರಾಧಿಕಾ ಮಿಂಚು.

ಎಂ.ಕಾಂ ಪದವೀಧರೆಯಾಗಿರುವ ರಾಧಿಕಾ ಮಿಂಚು ನಟನಾ ಕ್ಷೇತಕ್ಕೆ ಪಾದಾರ್ಪಣೆ ಮಾಡಿದ್ದು ಆಕಸ್ಮಿಕ. ಅದು ಸಾಮಾಜಿಕ ತಾಣ ಫೇಸ್ ಬುಕ್ ಮೂಲಕ. ಸ್ವಲ್ಪ ಮಟ್ಟಿಗೆ ಫೇಸ್ ಬುಕ್ ಉಪಯೋಗಿಸುವ ರಾಧಿಕಾ ಒಂದಷ್ಟು ಫೋಟೋಗಳನ್ನು ಅಪ್ ಲೋಡ್ ಮಾಡಿದ್ದರು. ಅದುವೇ ಅವರಿಗೆ ವರದಾನವಾಯ್ತು!! ಅವರ ಫೋಟೋ ನೋಡಿದ ನಿರ್ದೇಶಕ ಸಂಜೀವ ತಗಡೂರು ಪೋನ್ ಮಾಡಿ ‘ ಫೇಸ್ ಬುಕ್ ನಲ್ಲಿ ನಿಮ್ಮ ಫೋಟೋ ನೀಡಿದೆ. ನಟನೆಯ ಬಗ್ಗೆ ನಿಮಗೆ ಆಸಕ್ತಿ ಇದ್ದರೆ ಒಮ್ಮೆ ನನ್ನನ್ನು ಬಂದು ಮೀಟ್ ಮಾಡಿ. ನಮ್ಮ ಸೀರಿಯಲ್ ನಲ್ಲಿ ಒಂದು ಪಾತ್ರ ಇದೆ” ಎಂದರಂತೆ. ಅವರ ಮಾತಿನಂತೆ ಕಸ್ತೂರಿ ಚಾನೆಲ್ ನಲ್ಲಿ ‘ಎರಡು ಕನಸು’ ಎನ್ನುವ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು.

‘ಎರಡು ಕನಸು’ ಧಾರಾವಾಹಿಯಲ್ಲಿ ಸುನಯನ ಪಾತ್ರಕ್ಕೆ ಜೀವ ತುಂಬಿದ ರಾಧಿಕಾ ಮುಂದೆ ‘ಅಳಗುಳಿಮನೆ’, ‘ರಾಧಾ ಕಲ್ಯಾಣ’, ‘ಖುಷಿ ಕಣಜ’, ‘ಕಾದಂಬರಿ’, ‘ಮುಂಗಾರುಮಳೆ’, ‘ಸ್ವಾತಿಮುತ್ತು’, ‘ಪುಟ್ಮಲ್ಲಿ’ ಧಾರಾವಾಹಿಯಲ್ಲಿ ನಟಿಸಿ ಮನೆ ಮಾತಾಗಿ, ಸದ್ಯ ‘ಪುಟ್ಟ ಗೌರಿ ಮದುವೆ’ ಮತ್ತು ‘ಆತ್ಮ ಬಂಧನ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಹೆಚ್ಚಾಗಿ ನೆಗೆಟಿವ್ ಪಾತ್ರಗಳಲ್ಲೇ ನಟಿಸಿರುವ ರಾಧಿಕಾ ಅವರಿಗೆ ಪುಟ್ಟ ಗೌರಿ ಮದುವೆಯ ಸೌಂದರ್ಯ ಪಾತ್ರ ಜನಪ್ರಿಯತೆಯನ್ನು ತಂದು ಕೊಟ್ಟಿದೆ. ಸೌಂದರ್ಯ ಉಡುವ ಸಾರಿ, ಅವಳು ಧರಿಸುವ ತರತರಹದ ವಿನ್ಯಾಸದ ಆಭರಣಗಳಿಗೆ ಸಾಕಷ್ಟು ಜನ ಫಿದಾ ಆಗಿದ್ದಾರೆ. ಇದರ ಜೊತೆಗೆ ತಮಿಳು ಸೀರಿಯಲ್ ನಲ್ಲಿ ನಟಿಸಿವ ಮೂಲಕ ಪರಭಾಷೆಗೂ ಪಾದಾರ್ಪಣೆ ಮಾಡಿದ್ದಾರೆ.

ನಟನೆಯ ಜೊತೆಗೆ ಮೈಸೂರ್ ಸಿಲ್ಕ್ಸ್, ಚೈನ್ನೈ ಸಿಲ್ಕ್ಸ್ , ಶಕ್ತಿ ಮಸಾಲಾ, ಜ್ಯುವೆಲ್ಲರಿ ಜಾಹೀರಾತಯಗಳಿಗೆ ರೂಪದರ್ಶಿಯಾಗಿ ರಾಧಿಕಾ ಮಿಂಚಿದ್ದಾರೆ. ‘ನನಗೆ ಡ್ಯಾನ್ಸ್, ಡ್ರಾಮಾ, ನಟನೆಯ ಗಂಧ ಗಾಳಿಯೂ ಗೊತ್ತಿರಲಿಲ್ಲ’ ಎನ್ನುವ ರಾಧಿಕಾ ಇಂದು ನಟನಾ ಗರಡಿಯಲ್ಲಿ ಪಳಗಿ ಕಿರುತೆರೆ ಪ್ರಿಯರ ಮನ ಸೆಳೆದಿದ್ದಾರೆ ಎಂದರೆ ಅದಕ್ಕೆ ಅವರ ಅಮ್ಮ ಮಣಿ ಅವರೇ ಕಾರಣ. “ನನ್ನ ಅಮ್ಮನ ಪ್ರೋತ್ಸಾಹದಿಂದಲೇ ನಾನಿಂದು ಇಲ್ಲಿ ಮಿಂಚುತ್ತಿದ್ದೇನೆ” ಎನ್ನುತ್ತಾರೆ ರಾಧಿಕಾ.

ಬಲ್ಲಿರಾ ಬ್ರಾಹ್ಮಿ ಉಪಯೋಗ….?

– ಅನಿತಾ ಬನಾರಿ

#actress #radhikaminchu, #balkaninews #kannadasuddigalu

Tags