ಸುದ್ದಿಗಳು

ನನಗೆ ನಾಯಕಿಯಾಗುವ ಮುನ್ನ ಕಲಾವಿದೆಯಾಗುವ ಆಸೆ: ರಕ್ಷಾ ಸೋಮಶೇಖರ್

ಬೆಂಗಳೂರು, ಆ. 21: ಇದೇ ಶುಕ್ರವಾರ ತೆರೆ ಕಾಣಲು ಸಿದ್ದತೆ ನಡೆಸಿರುವ ‘ಮೇ ಫಸ್ಟ್’ ಚಿತ್ರದಲ್ಲಿ ನಾಯಕ ಜೆ.ಕೆ ಅವರಿಗೆ ಜೋಡಿಯಾಗಿ ರಕ್ಷಾ ಅಭಿನಯಿಸಿದ್ದಾರೆ.

ಮೊದಲು ಕಲಾವಿದೆಯಾಗುವ ಆಸೆ

‘ಒಂದು ಚಿತ್ರಕ್ಕೆ ನಾಯಕಿಯಾಗುವ ಮೊದಲು ನನಗೆ ಕಲಾವಿದೆಯಾಗುವ ಆಸೆಯಿದೆ. ಪ್ರೇಕ್ಷಕರಿಗೆ ಕಲಾವಿದೆಯಾಗಿ ಪರಿಚಯಗೊಳ್ಳಬೇಕು. ನಂತರ ನಾನು ನಾಯಕಿಯಾಗಬಹುದು’ ಎಂದು ಈ ಚಿತ್ರದ ನಟಿ ರಕ್ಷಾ ಹೇಳುತ್ತಾರೆ.

ಜೆ.ಕೆಗೆ ಹೆಂಡತಿ

ಈ ಚಿತ್ರದಲ್ಲಿ ನಟ ಜಯರಾಮ್ ಕಾರ್ತಿಕ್ ಗೆ ಹೆಂಡತಿಯಾಗಿ ರಕ್ಷಾ ಅಭಿನಯಿಸುತ್ತಿದ್ದಾರೆ. ಹೀಗಾಗಿ ಮೊದಲ ಚಿತ್ರದಲ್ಲೇ ಸಿಕ್ಕ ಗೃಹಿಣಿ ಪಾತ್ರವನ್ನು ಖುಷಿಯಿಂದಲೇ ನಿಭಾಯಿಸುತ್ತಿರುವ ಅವರಿಗೆ ಸಂತಸವಾಗಿದೆ.

“ನಾನು ಡಿ-ಗ್ಲಾಮರ್ ಪಾತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವುದರಿಂದ ನನಗೆ ಸಂತಸವಾಗಿದೆ. ಈ ಚಿತ್ರದಲ್ಲಿ ನನ್ನದು ಜವಾಬ್ದಾರಿಯುತ ಮಹಿಳೆಯ ಪಾತ್ರ ಹಾಗೂ ನಟನೆಗೆ ಪ್ರಾಮುಖ್ಯತೆ ಇರುವ ಪಾತ್ರ. ಹೀಗಾಗಿ ನಟಿಸಲು ಒಪ್ಪಿಕೊಂಡೆ. ಇದರೊಂದಿಗೆ ನಟನೆಗೆ ಪ್ರಾಮುಖ್ಯತೆ ಇರುವ ಯಾವುದೇ ಸಿನಿಮಾ ಸಿಕ್ಕರೂ ಬಣ್ಣಹಚ್ಚುತ್ತೇನೆ” ಎಂದು ನವ ನಟಿ ರಕ್ಷಾ ಹೇಳುತ್ತಾರೆ.

ಚಿತ್ರದ ಕಥೆ

‘ಮೇ ಫಸ್ಟ್’ ಎಂಬ ಹೆಸರು ಆಪ್ತವಾಗಿದ್ದು, ಚಿತ್ರದಲ್ಲಿ ಮೀರಾ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ ರಕ್ಷಾ. ಈ ಮೀರಾಳಿಗೆ ತನ್ನ ಚಿಕ್ಕ ಕುಟುಂಬವೇ ಪ್ರಪಂಚ. ಹೀಗಿರುವಾಗ ಮೇ 1ರಂದು ನಡೆಯುವ ಘಟನೆಯಿಂದ ಆ ಸುಂದರ ಸಂಸಾರದಲ್ಲಿ ಏನೆಲ್ಲ ಪರಿಣಾಮ ಉಂಟಾಗುತ್ತದೆ? ಆ ಘಟನೆ ಏನು ಎಂಬುದನ್ನು ಈ ಚಿತ್ರದಲ್ಲಿ ತೋರಿಲಾಗಿದೆಯಂತೆ.

ಜಸ್ಟ್ ಲವ್

ಈ ಹಿಂದೆ ನಿರ್ದೇಶಕ ನಾಗೇಂದ್ರ ಅರಸ್ ಮತ್ತು ನಾಯಕ ಜಯರಾಮ್ ಕಾರ್ತಿಕ್ ಅವರು ಸೇರಿಕೊಂಡು ‘ಜಸ್ಟ್ ಲವ್’ ಚಿತ್ರವನ್ನು ಮಾಡಿದ್ದರು. ಈಗ ಮತ್ತೊಮ್ಮೆ ಈ ಜೋಡಿ ‘ಮೇ ಫಸ್ಟ್’ ಮೂಲಕ ಒಂದಾಗಿದೆ.

Tags

Related Articles