ಸುದ್ದಿಗಳು

‘ಒಂದು ಸ್ಮೈಲ್ ಕೊಡಿ’ ಎಂದ ರಶ್ಮಿಕಾ ಮಂದಣ್ಣ

‘ಕಿರಿಕ್’ ಬೆಡಗಿ ಎಂದೇ ಜನಪ್ರಿಯಗೊಂಡಿರುವ ನಟಿ ರಶ್ಮಿಕಾ ಏನೇ ಮಾಡಿದರೂ ಸಹ ಸದಾ ಸುದ್ದಿಯಲ್ಲಿರುತ್ತಾರೆ. ಅಂದ ಹಾಗೆ ಅವರು ಇತ್ತಿಚೆಗಷ್ಟೇ ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗವಹಿಸಿದ್ದರು. ಈ ಕ್ಷಣವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಈ  ಕಾರ್ಯಕ್ರಮದ ಬಗ್ಗೆ ನೆನಪುಗಳನ್ನು ಮಾಡಿಕೊಂಡ ರಶ್ಮಿಕಾ, ಈ ತಾವು ಮಿಂಚಿದ ಫೋಟೋ ಶೇರ್ ಮಾಡಿದ್ದಾರೆ. ಹಾಗೆಯೇ ‘ನಿಮ್ಮ ಮುಂದೆ ಯಾರಾದರೂ ನಗುವಿಲ್ಲದೆ ಬೇಸರದಿಂದಿದ್ದರೆ ನಿಮ್ಮ ನಗುವನ್ನು ಅವರಿಗೆ ಕೊಡಿ. ಅಂದ್ರೆ ನೀವು ಕೂಡ ನಕ್ಕುಬಿಡಿ’ ಎನ್ನುವ ಡಾಲಿ ಪಾರ್ಟೊನ್ ವ್ಯಾಖ್ಯಾನವನ್ನು ಬರೆದಿದ್ದಾರೆ. ಸದ್ಯ ಅವರು ತೆಲುಗು ಭಾಷೆಯಲ್ಲಿ ಮಿಂಚುತ್ತಿದ್ದು, ಕನ್ನಡದ ‘ಪೊಗರು’ ಚಿತ್ರಕ್ಕೆ ನಾಯಕಿಯಾಗಿದ್ದಾರೆ.

ಜನ್ಮದಿನದ ಸಂಭ್ರಮದಲ್ಲಿ ರಾಕಿಂಗ್ ದಂಪತಿಗಳ ಪುತ್ರಿ

#RashmikaMandanna #RashmikaMandannaMovies #RashmikaMandannaInstagram  #KannadaSuddigalu

Tags