ಸುದ್ದಿಗಳು

ಅಭಿಮಾನಿಗಳಿಗೆ ಹೊಸ ಚಾಲೆಂಜ್ ಕೊಟ್ಟ ಸಮಂತಾ ಅಕ್ಕಿನೇನಿ

ಎಲ್ಲರೂ ಜುಲೈ 21 ರಂದು ಭಾನುವಾರ ಇಡೀ ದಿನ ಒಂದು ಬಕೆಟ್ ನೀರು ಮಾತ್ರ ಉಪಯೋಗಿಸಿ ಎಂದು ತಮಿಳು ಮತ್ತು ತೆಲುಗು ನಟರು ಅಭಿಮಾನಿಗಳಿಗೆ ಒತ್ತಾಯಿಸಿದ್ದಾರೆ.

ಅಂದಹಾಗೆ ಟ್ವಿಟ್ಟರ್ ನಲ್ಲಿ ಈ ಹೊಸ ಚಾಲೆಂಜ್ ನ ನೇತೃತ್ವ ವಹಿಸಿರುವವರು ನಟಿ ಸಮಂತಾ ಅಕ್ಕಿನೇನಿ. ದೇಶದಲ್ಲಿ ನೀರಿನ ಸಮಸ್ಯೆ ಎದುರಾಗಿರುವುದರಿಂದ ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ‘ಒನ್ ಬಕೆಟ್’ ಚಾಲೆಂಜ್ ಹಾಕಿರುವ ಸಮಂತಾ, ಈ ಕುರಿತು ಪೋಸ್ಟ್ ಶೇರ್ ಮಾಡಿದ್ದು, ಅದರಲ್ಲಿ ” ಮುಖ ತೊಳೆಯುವಾಗ, ವಾಹನಗಳನ್ನು ತೊಳೆಯುವಾಗ ಅಥವಾ ಟ್ಯಾಪ್ ಆನ್ ಮಾಡಿದಾಗ ಕೇವಲ ಒಂದು ಬಕೆಟ್ ನೀರು ಮಾತ್ರ ಉಪಯೋಗಿಸಿ, ಹೆಚ್ಚು ನೀರಿನ ಬಳಕೆ ಬೇಡ” ಎಂದು ಬರೆದಿದ್ದಾರೆ.

ತನ್ನ ಫಾಲೋವರ್ಸ್ ಗಳಿಗೆ ಈ ರೀತಿಯ ಒಂದು ಚಾಲೆಂಜ್ ಹಾಕಿರುವ ಸಮಂತಾ, ಇದರಲ್ಲಿ ಯಾವುದೇ ಮೋಸವಿರಬಾರದು ಎಂದು ಹೇಳಿದ್ದಾರೆ. ಸಮಂತಾಳ ಈ ಚಾಲೆಂಜ್ ಅನ್ನು ಪ್ರತಿಯೊಬ್ಬರು ಸ್ವೀಕರಿಸುತ್ತಿದ್ದು, ಇಂತಹ ಒಂದು ಹೊಸ ಪ್ರಯತ್ನಕ್ಕೆ ಶುಭ ಹಾರೈಸಿರುವುದಲ್ಲದೇ, ಶ್ಲಾಘಿಸಿದ್ದಾರೆ.

 

ಲೇಡಿ ಸಲ್ಮಾನ್ ಖಾನ್ ಆದ ಸಾಯಿಪಲ್ಲವಿ; ಯಾವ ಕಾರಣಕ್ಕೆ ಗೊತ್ತಾ?

#balkaninews #samanthaakkineni # onebucketchallenge #water #sunday #samanthaakkinenitwitter

Tags