ಸುದ್ದಿಗಳು

ಕಾಜಲ್ ಗೆ ಸೆಡ್ಡು ಹೊಡೆಯಲು ಕಾಲಿವುಡ್ ಗೆ ಕಾಲಿಟ್ಟ “ಕಿರಿಕ್” ಬೆಡಗಿ

“ಕಿರಿಕ್ ಪಾರ್ಟಿ” ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದವರು ಸಂಯುಕ್ತಾ ಹೆಗಡೆ. ‘ಕಿರಿಕ್ ಪಾರ್ಟಿ’ ಚಿತ್ರದಲ್ಲಿನ ಸಂಯುಕ್ತಾ ನಟನೆ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿತ್ತು. ಇಷ್ಟೇ ಅಲ್ಲದೇ ‘ಕಿರಿಕ್’ ಪಾರ್ಟಿ ತೆಲುಗು ರಿಮೇಕ್ ನಲ್ಲಿಯೂ ಸಹ ಸಂಯುಕ್ತಾ ಅಭಿನಯಿಸಿದ್ದರು. ಕನ್ನಡ, ತೆಲುಗು ಬಳಿಕ ಸಂಯುಕ್ತಾ ಇದೀಗ ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಹೌದು, ನಿನ್ನೇಯಷ್ಟೇ (ಜುಲೈ 17) ಸಂಯುಕ್ತಾ ಹೆಗಡೆಯವರ ಹುಟ್ಟುಹಬ್ಬವಿತ್ತು. ಇದರ ಸಲುವಾಗಿ ಇವರ ಮುಂಬರುತ್ತಿರುವ ತಮಿಳು ಚಿತ್ರವಾದ ‘ಕೋಮಲಿ’ ಚಿತ್ರದ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಿದ್ದಾರೆ. ಪ್ರದೀಪ್ ರಂಗನಾಥನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಕೋಮಲಿ’ ಚಿತ್ರದಲ್ಲಿ ಜಯಂ ರವಿ ಹಾಗೂ ಕಾಜಲ್ ಅಗರ್ ವಾಲ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ‘ಕೋಮಲಿ’ ಚಿತ್ರದಲ್ಲಿ ಸಂಯುಕ್ತಾರವರದು ಬಹುಮುಖ್ಯ ಪಾತ್ರ ಎನ್ನಲಾಗಿದೆ.

Image result for comali tamil movie

ಜಯಂ ರವಿ ಹಾಗೂ ಕಾಜಲ್ ಅಗರ್ ವಾಲ್ ರವರ ಜೊತೆ ನಟಿಸಿದ್ದು, ಬಹಳ ಖುಷಿಯಾಗುತ್ತಿದೆ. ಅವರೊಂದಿಗೆ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿರುವುದು ಖುಷಿಯ ಸಂಗತಿ ಎಂದಿದ್ದಾರೆ. ಇದರ ಜೊತೆಗೆ ಚಿತ್ರದ ನಿರ್ದೇಶಕರಿಗೂ ಕೂಡ ಧನ್ಯವಾದ ತಿಳಿಸಿದ್ದಾರೆ.

ಹುಟ್ಟುಹಬ್ಬದ ವಿಶೇಷವಾಗಿ ‘ಕೋಮಲಿ’ ಪೋಸ್ಟರ್ ಬಿಡುಗಡೆಯಾಗಿದ್ದು, ಸಂಯುಕ್ತಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ತಮಿಳು ಚಿತ್ರದ ಹೊರತುಪಡಿಸಿ ಕನ್ನಡದಲ್ಲಿ ‘ಒಮ್ಮೆ ನಿಶ್ಯಬ್ಧ ಒಮ್ಮೆ ಯುದ್ಧ’ ಚಿತ್ರದಲ್ಲಿ ನಟಿಸುತ್ತಿದ್ದು, ಶೀಘ್ರದಲ್ಲಿ ಬಿಡುಗಡೆಯಾಗಲಿದೆ.

ಕಿರಿಕ್ ಹುಡುಗಿಯ ಹಾಟ್ ಡ್ಯಾನ್ಸ್ ಪ್ರಾಕ್ಟೀಸ್.

#samyukthahegde  #samyukthahegdemovies #samyukthahegdeinstagram #samyukthahegdetwitter #samyukthahegdefacebook #samyukthahegdetamilmovie #samyukthahegdetelugumovie #samyukthahegdephotos

Tags