ಸುದ್ದಿಗಳು

ಸಂಗೀತಾ ಭಟ್ ಗೆ ಅಶ್ಲೀಲವಾಗಿ ಕಾಮೆಂಟ್ ಮಾಡುತ್ತಿರುವ ಯಶ್ ಅಭಿಮಾನಿಗಳು..!

ಕಳೆದ ವರ್ಷ ಮಿಟೂ ಅಭಿಯಾನದ ಮೂಲಕ ಗಮನ ಸೆಳೆದವರಲ್ಲಿ ಸಂಗೀತಾ ಭಟ್ ಕೂಡಾ ಒಬ್ಬರು. ಅಚ್ಚರಿಯೆಂದರೆ ಇದೀಗ ಅವರಿಗೆ ಮತ್ತು ಅವರ ಪತಿಗೆ ಯಶ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಮನಸಿಗೆ ಬಂದ ರೀತಿಯಲ್ಲಿ, ಅಶ್ಲೀಲವಾಗಿ,  ಕೆಟ್ಟ ರೀತಿಯಲ್ಲಿ ಬೈಯ್ಯುತ್ತಿದ್ದಾರೆ.

ಅಂದಹಾಗೆ ಸಂಗೀತಾ ಭಟ್ ಅವರ ಪತಿ ಸುದರ್ಶನ್ ರಂಗಪ್ರಸಾದ್ ರವರು 2 ವರ್ಷಗಳ ಹಿಂದೆ ನಟ ಯಶ್ ಅವರ ಡೈಲಾಗ್ ಬಳಿಸಿ ಒಂದು ಕಾಮಿಡಿ ಸ್ಕೆಚ್ ಮಾಡಿದ್ದರು. ಆದರೆ ಈಗ ಈ ಕಾಮಿಡಿ ವಿಡಿಯೋವನ್ನು ನೋಡಿ ಸಹಿಸದ ಯಶ್ ಅಭಿಮಾನಿಗಳು ಬಾಯಿಗೆ ಬಂದ ರೀತಿಯಲ್ಲಿ ಅಶ್ಲೀಲವಾಗಿ ಕಾಮೆಂಟ್ ಮಾಡುತ್ತಿದ್ದಾರೆ.

ಸಾಮಾನ್ಯವಾಗಿ ಚಿತ್ರರಂಗದಲ್ಲಿ ಅಭಿಮಾನಿಗಳ ನಡುವೆ ಸ್ಟಾರ್ ವಾರ್, ವಾದ-ವಿವಾದಗಳು ನಡೆಯುತ್ತವೆ. ಆದರೆ ಇದೀಗ ಒಬ್ಬ ನಟಿ ಮತ್ತು ಫ್ಯಾನ್ಸ್ ನಡುವೆ ವಾರ್ ನಡೆಯುತ್ತಿದೆ. ಹೀಗಾಗಿ ಸಂಗೀತಾ ಭಟ್, ತಮಗೆ ಬಂದ ಅಷ್ಟೂ ಅಶ್ಲೀಲ ಮೆಸೆಜ್ ಮತ್ತು ಕಾಮೆಂಟ್ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

ಸದ್ಯ ಸಂಗೀತಾ ಅಭಿನಯದ ‘ಕಪಟ ನಾಟಕ ಪಾತ್ರಧಾರಿ’ ಚಿತ್ರವು ತೆರೆಗೆ ಬರಲು ಸಿದ್ದವಾಗಿದೆ. ಇದೇ ವೇಳೆ ಅವರು ತಮ್ಮ ಪತಿಯೊಂದಿಗೆ ಜರ್ಮನಿಯಲ್ಲಿದ್ದಾರೆ. ಸುದರ್ಶನ್ ಅವರ ವಿರುದ್ಧ ಕಿಡಿಕಾರಿದ್ದ ಯಶ್ ಅಭಿಮಾನಿಗಳು ಇದೀಗ ಸಂಗೀತಾ ಭಟ್ ಅವರನ್ನೂ ಟಾರ್ಗೆಟ್ ಮಾಡಿದ್ದಾರೆ. ನಮ್ಮ ಬಾಸ್ ವಿಷಯಕ್ಕೆ ಬಂದರೆ ನಿನ್ನನ್ನೂ, ನಿನ್ನ ಗಂಡನನ್ನೂ ಬಿಡೋದಿಲ್ಲ ಎಂದು ಬೆದರಿಕೆಯನ್ನೂ ಹಾಕಿದ್ದಾರೆ.

ರಾಕ್ ಸ್ಟಾರ್ ಅವತಾರದಲ್ಲಿ ಲಕ್ಷ್ಮಿ ರೈ

#SangeethaBhat #Yash #SocialMedia #sandalwoodmovies  ‍#kannadaSuddigalu #YashFans

Tags