ಸುದ್ದಿಗಳು

‘ಯೂ ಟರ್ನ್’ ಬೆಡಗಿಯ ನ್ಯೂ ಫೋಟೊಶೂಟ್

ಬೆಂಗಳೂರು, ಏ.24:

ಪವನ್ ಕುಮಾರ್ ನಿರ್ದೇಶಿಸಿದ್ದ ‘ಯೂ ಟರ್ನ್’ ಚಿತ್ರದ ಮೂಲಕ ಕನ್ನಡದ ಪ್ರೇಕ್ಷಕರಿಗೆ ಚಿರಪರಿಚಿತರಾದ ಪ್ರತಿಭಾವಂತ ನಟಿ ಶ್ರದ್ದಾ ಶ್ರೀನಾಥ್. ನಟಿಸಿದ ಮೊದಲ ಚಿತ್ರದಲ್ಲಿ ಎಲ್ಲರ ಮನಸ್ಸನ್ನು ಕದ್ದ ಈ ಚೆಲುವೆ ಆನಂತರ ‘ಊರ್ವಿ’, ‘ಆಫರೇಷನ್ ಅಲುಮೇಲಮ್ಮ’ ಚಿತ್ರಗಳಲ್ಲಿ ನಟಿಸಿದ್ದರು. ಇಷ್ಟೇ ಅಲ್ಲದೇ ತೆಲುಗು  ತಮಿಳು ಚಿತ್ರರಂಗದಲ್ಲಿ ಇವರ ಗೆಲುವಿನ ಆಟ ಮುಂದುವರೆಸಿದ್ದು, ಇತ್ತೀಚೆಗೆಷ್ಟೇ ಇವರು ಪೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಬಹುಬೇಡಿಕೆಯ ನಟಿ

ಚಿತ್ರರಂಗದ ಬಹುಬೇಡಿಕೆಯ ನಟಿ ಶ್ರದ್ದಾ ಇತ್ತೀಚೆಗಷ್ಟೇ ಪೋಟೊಶೂಟ್ ಮಾಡಿಸಿಕೊಂಡಿದ್ದು, ಈ ಪೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ. ಹೌದು, ಈ ನಟಿ ಬಣ್ಣ ಬಣ್ಣದ ಉಡುಗೆಯನ್ನು ಧರಿಸಿ, ಪೋಟೊಗೆ ಪೋಸ್ ನೀಡಿದ್ದಾರೆ.

ನಮ್ಮ ಚಿತ್ರರಂಗದಲ್ಲಿ ಹೆಚ್ಚಾಗಿ ಪರಭಾಷೆಯ ನಟಿಯರು ಬರುವುದು ಜಾಸ್ತಿಯಾಗಿದೆ. ಆದರೆ ಶ್ರದ್ದಾ ಶ್ರೀನಾಥ್ ವಿಷಯದಲ್ಲಿ ಇದು ಉಲ್ಟಾ ಆಗಿದೆ. ನಮ್ಮ ಕನ್ನಡತಿ ಈಗ ಪರಭಾಷೆಯ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಸದ್ಯ ಶಿವಣ್ಣನೊಂದಿಗೆ ‘ರುಸ್ತುಂ’ ಹಾಗೂ ಸತೀಶ್ ನೀನಾಸಂರವರ ಜೊತೆಗೆ ‘ಗೋದ್ರಾ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇಷ್ಟೇ ಅಲ್ಲದೇ ಟಾಲಿವುಡ್ ನ ಜನಪ್ರಿಯ ನಟ ನಾನಿ ಜೊತೆಗೆ ‘ಜೆರ್ಸಿ’ ಚಿತ್ರದಲ್ಲಿ ನಟಿಸಿದ್ದು, ಬಿಡುಗಡೆಯಾಗಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ.

Image may contain: 1 person, sitting and indoor

Image may contain: 1 person

Image may contain: 2 people, people standing

Image may contain: 1 person, smiling, standing

Image may contain: 1 person, standing

Image may contain: 1 person, standing and outdoor

Image may contain: 1 person, standing and closeup

Image may contain: 1 person, smiling

Image may contain: 1 person, standing

Image may contain: 1 person, indoor

ಕಿರುತೆರೆಯ ಚಾಕಲೇಟ್ ಹುಡುಗ ಚಂದನ್ ಕುಮಾರ್ !!

#balkaninews #photoshoot #sandalwood #shraddhasrinath #shraddhasrinathmovies #shraddhasrinathhits

Tags