ಸುದ್ದಿಗಳು

‘ಜೇಮ್ಸ್’ ಚಿತ್ರಕ್ಕೆ ನಾಯಕಿಯಾಗಲಿದ್ದಾರಾ ಶ್ರೀಲೀಲಾ…?

ಕಳೆದ ಶುಕ್ರವಾರ ರಾಜ್ಯಾದ್ಯಂತ ತೆರೆ ಕಂಡಿದ್ದ ‘ಭರಾಟೆ’ ಚಿತ್ರವು ಪ್ರೇಕ್ಷಕರ ಮೆಚ್ಚುಗೆಯೊಂದಿಗೆ ಬಾಕ್ಸ್ ಆಫೀಸ್ ಗಳಿಕೆಯಲ್ಲೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಇದೇ ವೇಳೆ ಚಿತ್ರತಂಡದವರು ಚಿತ್ರದ ಸಕ್ಸಸ್ ಪ್ರೇಸ್ ಮೀಟ್ ಮಾಡಿದ್ದರು.

‘ಎಲ್ಲಾ ಪ್ರೇಕ್ಷಕರಿಗೂ ಧನ್ಯವಾದಗಳು’ ಎಂದು ಧನ್ಯವಾದಗಳನ್ನು ಅರ್ಪಿಸಿದ ಚಿತ್ರದ ನಟಿ ಶ್ರೀಲೀಲಾ, ತಮ್ಮ ನಟನೆಯ ‘ಕಿಸ್’ ಹಾಗೂ ‘ಭರಾಟೆ’ ಚಿತ್ರಗಳನ್ನು ಮೆಚ್ಚಿದ ಪ್ರೇಕ್ಷಕರಿಗೆ ಮತ್ತು ಚಿತ್ರತಂಡದವರಿಗೆ ಹಾರ್ದಿಕ ಅಭಿನಂದನೆಗಳನ್ನು ತಿಳಿಸಿದ್ದಾರೆ.

‘ನನ್ನ ಎರಡು ಸಿನಿಮಾಗಳು ಭರ್ಜರಿ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಚಿತ್ರದಲ್ಲಿ ಪ್ರತಿಯೊಂದು ಪಾತ್ರಕ್ಕೂ ಮಹತ್ವವಿದೆ. ಸದ್ಯಕ್ಕೆ ಹೊಸ ಹೊಸ ಸಿನಿಮಾಗಳ ಅವಕಾಶಗಳು ಬರುತ್ತಿವೆ. ಆದಷ್ಟು ಬೇಗ ಹೇಳ್ತಿನಿ. ಖಂಡಿತಾ ನನ್ನ ಮೂರನೇಯ ಸಿನಿಮಾ ಕನ್ನಡದ್ದೇ ಆಗಿರುತ್ತದೆ.’ ಎಂದು ಮಾತನಾಡಿದ ಶ್ರೀಲೀಲಾ ಅವರಿಗೆ ‘ಜೇಮ್ಸ್’ ಚಿತ್ರದ ಕುರಿತಂತೆ ಪ್ರಶ್ನಿಸಲಾಯಿತು.

‘ಖಂಡಿತಾ ‘ಜೇಮ್ಸ್’ಗೆ ಶುಭವಾಗಲಿ. ನಮ್ಮ ನಿರ್ದೇಶಕ ಚೇತನ್ ಸರ್ ಗೆ ಶುಭವಾಗಲಿ. ಆದರೆ, ನನಗೆ ಈ ಚಿತ್ರದಲ್ಲಿ ನಟಿಸಲು ಆಫರ್ ಬಂದಿಲ್ಲ. ಮುಂದಕ್ಕೆ ನೋಡೋಣಾ. ಈಗೇನಿದ್ದರೂ ‘ಭರಾಟೆ’’ ಎಂದಿದ್ದಾರೆ. ಆದರೆ, ಈ ಅವರು ‘ಜೇಮ್ಸ್’ ಚಿತ್ರಕ್ಕೆ ನಾಯಕಿಯಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಚುಲ್ ಬುಲ್ ಪಾಂಡೆ ಕನ್ನಡಕ್ಕೆ ಕಿಚ್ಚ ಫಿದಾ !

# Shrileela #Bharaate  #SriMuruli  #James #KannadaSuddigalu  #FilmNews #Kiss

Tags