ಸುದ್ದಿಗಳು

ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಕೊಂಡಾಡಿದ ಶೃತಿ ಹಾಸನ್

ಸಿನಿಮಾ ಚಿತ್ರೀಕರಣಕ್ಕಾಗಿ ಧರ್ಮಸ್ಥಳಕ್ಕೆ ಆಗಮಿಸಿರುವ ನಟಿ ಶೃತಿ ಹಾಸನ್, ಶೂಟಿಂಗ್ ಸ್ಪಾಟ್ ಗೆ ಸಮೀಪವಿರುವ ವಿಹಾರಕ್ಕೆ ಭೇಟಿ ನೀಡಿ ಭೌದ್ಧ ಭಿಕ್ಷುಗಳನ್ನುಜೊತೆ ಪರಸ್ಪರ ಮಾತುಕತೆ ನಡೆಸಿದ್ದಾರೆ.

ಈ ಕುರಿತು ಪೋಸ್ಟ್ ಮಾಡಿರುವ ಶೃತಿ, ಭೌದ್ಧ ಭಿಕ್ಷುಗಳ ಜೊತೆ ನಡೆಸಿದ ಸಂಭಾಷಣೆ, ಮಾತನಾಡುವುದಕ್ಕೆ ಸಿಕ್ಕ ಅವಕಾಶ, ಹಾಗೆಯೇ ಅವರ ಜೀವನ, ಕಲಿಕೆ ಮುಂತಾದವುಗಳ ಬಗ್ಗೆ ಮಾತುಕತೆ ನಡೆಸಿರುವುದರ ಬಗ್ಗೆ ಹಂಚಿಕೊಂಡಿದ್ದಾರೆ.

Shruti Haasan with monks

ಅಷ್ಟೇ ಅಲ್ಲ , ಧರ್ಮಸ್ಥಳದ ಕುರಿತು ಪ್ರಶಂಸೆ ವ್ಯಕ್ತಪಡಿಸಿರುವ ಶೃತಿ, “ನಾನು ಯಾವಾಗಲೂ ಧರ್ಮಸ್ಥಳಕ್ಕೆ ಬರಲು ಇಷ್ಟಪಡುತ್ತೇನೆ. ಈ ಸ್ಥಳದ ಸೌಂದರ್ಯ, ಸಂಸ್ಕೃತಿ ಶ್ರೀಮಂತವಾಗಿದೆ. ಇಲ್ಲಿ ಚಿತ್ರೀಕರಣ ನಡೆಯುತ್ತಿರುವುದಕ್ಕೆ ನನಗೆ ಬಹಳ ಖುಷಿಯಾಗಿದೆ” ಎಂದು ತಿಳಿಸಿದ್ದಾರೆ.

ಸದ್ಯ ಚೊಚ್ಚಲ ಅಂತಾರಾಷ್ಟ್ರೀಯ ಸಿರೀಸ್ ‘ಟ್ರೇಡ್ ಸ್ಟೋನ್’, ಮುಂಬರುತ್ತಿರುವ ಚಿತ್ರ ಲಾಭಂ, ಇಂಟರ್ ನ್ಯಾಷನಲ್ ಮ್ಯೂಸಿಕ್ ಆಲ್ಬಂನಲ್ಲಿ ಬ್ಯೂಸಿಯಾಗಿರುವ ಶೃತಿ, ಯುಕೆ ಪ್ರವಾಸ ಸಹ ಕೈಗೊಂಡಿದ್ದಾರೆ. ಒಟ್ಟಿನಲ್ಲಿ ಶೃತಿ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದು, ಅವರನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ನಯನಾ ತಾರ ಈ ವರ್ಷ ಮದುವೆಯಾಗುತ್ತಾರಂತೆ, ಭವಿಷ್ಯ ನುಡಿದ ಜ್ಯೋತಿಷಿ

#balkaninews #shrutihaasan # shrutihaasanmovies #dharamshala

Tags