ಸುದ್ದಿಗಳು

ಮಹಿಳಾ ಸಂಘದ ರಾಜ್ಯಾಧ್ಯಕ್ಷೆ ಮಾಡುವುದಾಗಿ ಹೇಳಿ, ನಟಿಗೆ ಲಕ್ಷಾಂತರ ರೂ. ವಂಚನೆ

ಕಿರುತೆರೆ ನಟಿ ಸುಶ್ಮಿತಾಗೆ ರಘುಚಂದ್ರಪ್ಪ ಹಾಗೂ ಸಂಗೀತ ಎಂಬುವವರಿಂದ ವಂಚನೆ

ಬೆಂಗಳೂರು, ಸ.11: ಕೆಲವೊಮ್ಮೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅನೇಕರು ವಂಚನೆಗೆ ಒಳಗಾಗುತ್ತಿದ್ದಾರೆ. ಇದೀಗ ಅಂಥದ್ದೇ ಒಂದು ವಂಚನೆಯ ಪ್ರಕರಣ ಕನ್ನಡ ಚಿತ್ರರಂಗದಲ್ಲಿ ಬೆಳಕಿಗೆ ಬಂದಿದೆ. ಹೌದು, ಮಹಿಳಾ ಸಂಘದ ರಾಜ್ಯಾಧ್ಯಕ್ಷೆ ಮಾಡುವುದಾಗಿ ಹೇಳಿ ಕಿರುತೆರೆ ನಟಿಯಾದ ಸುಶ್ಮಿತಾಗೆ ರಘುಚಂದ್ರಪ್ಪ ಹಾಗೂ ಸಂಗೀತ ಎಂಬುವವರು ಲಕ್ಷಾಂತರ ರೂ. ವಂಚನೆ ಮಾಡಿದ್ದಾರೆ.

ವಂಚನೆಯ ಪ್ರಕರಣ

ಕನ್ನಡದ ಹಲವು ಧಾರವಾಹಿಗಳಲ್ಲಿ ಸಹ ನಟಿಯಾಗಿ ನಟಿಸಿರುವ ಸುಶ್ಮಿತಾ ಅವರು, ಅಧ್ಯಕ್ಷ ಗಾದಿಗೆ ಆಸೆ ಬಿದ್ದು ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದಾರೆ. ರಘು ಚಂದ್ರಪ್ಪ ಹಾಗೂ ಸಂಗೀತಾ ಹಣ ಪಡೆದು ಅವರನ್ನು ವಂಚಿಸಿದ್ದಾರೆ.

ಈಗ ಹಣ ಕೇಳಿದರೆ ರಘು, ನಟಿ ಸುಶ್ಮಿತಾ ಹಾಗೂ ಸರೋಜ ಇಬ್ಬರಿಗೂ ಜೀವ ಬೆದರಿಕೆ ಹಾಕುತ್ತಿದ್ದಾನೆ. ಸದ್ಯ ಸರೋಜ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಐಪಿಸಿ 420, 418, ಹಾಗೂ 506 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೂರು ದಾಖಲಿಸಿದ ನಟಿ

“ನನಗೆ ನನ್ನ ಚಿಕ್ಕಮ್ಮನ ಮಗಳ ಕಡೆಯಿಂದ ಪರಿಚಯವಾದ ರಘು ಚಂದ್ರಪ್ಪ ನನ್ನನ್ನು ಹಾಗೂ ನನ್ನ ಸ್ನೇಹಿತೆ ಸುಶ್ಮಿತಾ ಗೆ ಆದಿಶಕ್ತಿ ಮಹಿಳಾ ಸಂಘಕ್ಕೆ ರಾಜ್ಯಾಧ್ಯಾಕ್ಷರನ್ನಾಗಿ ಮಾಡುತ್ತೇನೆಂದು ನಂಬಿಸಿದ್ದಾನೆ. ಅಲ್ಲದೇ ನನ್ನ ಬಳಿ 1 ಲಕ್ಷ ರೂ. ಹಣವನ್ನು ಪಡೆದು, ಸುಶ್ಮಿತಾ ಅವರಿಂದ 3,50,000 ರೂ. ಹಣವನ್ನು ಪಡೆದು ಹಿಂದಿರುಗಿಸದೇ ನಂಬಿಸಿ ಮೋಸ ಮಾಡಿದ್ದಾನೆ. ಶನಿವಾರ ರಘು ಬಿಡಿಎ ಕಾಂಪ್ಲೆಕ್ಸ್ ಬಳಿ ಬರಲು ಹೇಳಿದ್ದನು. ಆಗ ನಾನು ಹಾಗೂ ನನ್ನ ಸ್ನೇಹಿತೆ ಸುಶ್ಮಿತಾ ಹೋದಾಗ ಬಿಡಿಎ ಕಾಂಪ್ಲೆಕ್ಸ್ ಬಳಿ ಇದ್ದ ರಘು ಹಾಗೂ ಆತನ ಸ್ನೇಹಿತೆ ಸಂಗೀತ ಇಬ್ಬರು ಹಣ ನೀಡದೇ ಪ್ರಾಣ ಬೆದರಿಕೆ ಹಾಕಿದ್ದಾರೆ. ಸದ್ಯ ರಘು ಹಾಗೂ ಸಂಗೀತ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು” ಎಂದು ಸರೋಜರವರು ಈ ದೂರಿನಲ್ಲಿ ದಾಖಲಿಸಿದ್ದಾರೆ.

 

 

Tags