ಸುದ್ದಿಗಳು

‘ಒಂದು ಶಿಕಾರಿಯ ಕಥೆ’ ಹೇಳಲಿರುವ ‘ಯುಗಳ ಗೀತೆ’ ಯ ನಾಯಕಿ ಸಿರಿ ಪ್ರಹ್ಲಾದ್

ಬೆಂಗಳೂರು, ಏ.20:

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಯುಗಳ ಗೀತೆ’ ಧಾರಾವಾಹಿಯಲ್ಲಿ ಪಂಚಮಿ ಪಾತ್ರಧಾರಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಚೆಂದುಳ್ಳಿ ಚೆಲುವೆಯ ಹೆಸರು ಸಿರಿ ಪ್ರಹ್ಲಾದ್. ಯುಗಳ ಗೀತೆ ಧಾರಾವಾಹಿಯಲ್ಲಿ ಮನೋಜ್ಞವಾಗಿ ಅಭಿನಯಿಸುವ ಮೂಲಕ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಸಿರಿ ಪ್ರಹ್ಲಾದ್ ಇದೀಗ ದೊಡ್ಡ ಪರದೆಯಲ್ಲಿ ಮಿಂಚಲು ತಯಾರಾಗಿದ್ದಾರೆ. ಅರ್ಥಾತ್ ಬೆಳ್ಳಿತೆರೆಗೆ ಕಾಲಿಡಲಿದ್ದಾರೆ.

ನಟನೆಯ ಮೂಲಕ ಕಿರುತೆರೆ ವೀಕ್ಣಕರ ಮನ ಕದ್ದಿರುವ ಸಿರಿ ಪ್ರಹ್ಲಾದ್ ಇದೀಗ ಸಿನಿ ಪ್ರಿಯರ ಮನದಲ್ಲಿ ಸ್ಥಾನ ಪಡೆಯಲು ತಯಾರಾಗಿದ್ದಾರೆ. ಸಚಿನ್ ಶೆಟ್ಟಿ ಅವರ ಚೊಚ್ಚಲ ನಿರ್ದೇಶನದ ಚಿತ್ರ ” ಒಂದು ಶಿಕಾರಿಯ ಕಥೆ” ಚಿತ್ರದಲ್ಲಿ ಅಭಿನಯಿಸುವ ಮೂಲಕ ಸಿರಿ ಚಂದನವನಕ್ಕೆ ಕಾಲಿಡುತ್ತಿದ್ದಾರೆ.

 

“ಇದು ಕ್ರೈಂ ಥ್ರಿಲ್ಲರ್ ಕಥಾ ಹಂದರವನ್ನು ಒಳಗೊಂಡ ಸಿನಿಮಾ ಎಂದರೆ ತಪ್ಪೇನಿಲ್ಲ. ನಿರ್ದೇಶಕರು ಕಥೆಯ ಕುರಿತು ಹೇಳಿದಾಗ ನನಗೆ ತುಂಬಾ ಇಷ್ಟವಾಯಿತು. ಇನ್ನು ಚಿತ್ರದ ಶೀರ್ಷಿಕೆಯು ಅಷ್ಟೇ.. ತುಂಬಾ ಸೊಗಸಾಗಿದೆ. ಅಪರಾಧ ನಡೆದಾಗ ಅದರಿಂದ ಐದು ಜನರು ಅದು ಯಾವ ರೀತಿ ಪಾರಾಗುತ್ತಾರೆ ಎನ್ನುವುದನ್ನು ಈ ಸಿನಿಮಾ ತೋರಿಸಲಿದೆ “ಎನ್ನುತ್ತಾರೆ ಸಿರಿ.

” ಈಗಾಗಲೇ ಕಿರುತೆರೆಯಲ್ಲಿ ಬಣ್ಣ ಹಚ್ಚಿರುವ ಇವರು ಇದೇ ಮೊದಲ ಬಾರಿಗೆ ಬಿಗ್ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಬಾರಿಗೆ ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಳ್ಳುವ ಕಾರಣ ಕುತೂಹಲವಿರುವುದು ಸಹಜ. ಇನ್ನು ಒಂದು ಶಿಕಾರಿಯ ಕಥೆ ಚಿತ್ರದ ಜೊತೆಗೆ ರಘು ಸಮರ್ಥ್ ನಿರ್ದೇಶನದ ಚಿತ್ರ ‘ಲಾ’ ಹಾಗೂ. ಅರ್ಜುನ್ ಯೋಗಿ ಅಭಿನಯದ ‘ಇಷ್ಕ್’ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ.

Image may contain: 3 people, people smiling

Image may contain: 2 people, people smiling, people standing

Image may contain: 2 people, people smiling, text

ಫಲಿತಾಂಶಕ್ಕೂ ಮೊದಲೇ ಸಂಸದರಾದ ನಿಖಿಲ್ ಕುಮಾರಸ್ವಾಮಿ..!!?!!

#SiriPrahlad #SiriPrahladmovies #SiriPrahladyugalageetheserial #SiriPrahladserials #SiriPrahladfacebook

Tags