ಸುದ್ದಿಗಳು

‘ಗುಲಾಲ್’ ರಂಗಲ್ಲಿ ‘ಬಿಗ್ ಬಾಸ್’ ಸೋನು ಪಾಟೀಲ್

ಕನ್ನಡ ಬಿಗ್ ಬಾಸ್ 6 ರ ಸ್ಪರ್ಧಿಯಾಗಿದ್ದ ಉತ್ತರ ಕರ್ನಾಟಕದ ಸೋನು ಪಾಟೀಲ್ ಇದೀಗ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ವಿಶೇಷವೆಂದರೆ ಇವರೀಗ ‘ಗುಲಾಲ್. ಕಾಮ್’ ಚಿತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರದಲ್ಲಿ ಸೋನು ಉತ್ತರ ಕರ್ನಾಟಕದ ಹುಡುಗಿಯಾಗಿಯೇ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ. ಚಿತ್ರದಲ್ಲಿ ದಿವಾಕರ್, ನೇತ್ರಾ, ಮೋಹನ್ ಜುನೆಜಾ, ಶೋಭರಾಜ್ ಸೇರಿದಂತೆ ಅನೇಕರು ನಟಿಸಿದ್ದಾರೆ.

‘ಗೌರವ ಸೂಚಕವಾಗಿ ಗುಲಾಲ್ ಬಣ್ಣವನ್ನು ಹಾಕುತ್ತಾರೆ. ಬದುಕಿನಲ್ಲಿ ಕಷ್ಟಸುಖಗಳು ಹೇಗಿರುತ್ತವೆ ಎನ್ನುವುದನ್ನು ಈ ಸಿನಿಮಾ ತೋರಿಸಲಿದೆ. ಚಿತ್ರದಲ್ಲಿ 120ಕ್ಕೂ ಹೆಚ್ಚಿನ ಕಲಾವಿದರು ನಟಿಸಿದ್ದಾರೆ’ ಎನ್ನುತ್ತಾರೆ ಸೋನು ಪಾಟೀಲ್. ಅಂದ ಹಾಗೆ ಅವರು ನಟಿಸಿರುವ ‘ಯರ್ರಾಬಿರ್ರಿ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ.

ಪತ್ನಿಯ ಜೊತೆಗಿರುವ ಫೋಟೋ ಶೇರ್ ಮಾಡಿದ ಕೋಮಲ್

#SonuPatil #SonuPatilMovie  #Gulal #Gulal.com #KannadaSuddigalu

Tags