ಸುದ್ದಿಗಳು

ನಾಯಕಿಗಾಗಿ ಎಂಟ್ರಿ ಕೊಟ್ಟ ಕೊಡಗಿನ ಕುವರಿ ಸೌಮ್ಯ

ಪ್ರಕಾಶ್ ಹೆಬ್ಬಾಳ್ ನಿರ್ದೇಶನದ ‘ಹಫ್ತಾ’ ಚಿತ್ರವು ಇದೇ ತಿಂಗಳ 21 ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈಗಾಗಲೇ ಸುದ್ದಿಯಾಗಿರುವಂತೆ ಈ ಚಿತ್ರಕ್ಕೆ ನಾಯಕನಾಗಿ ವರ್ಧನ್ ತೀರ್ಥಹಳ್ಳಿ ನಟಿಸಿದ್ದು, ನಾಯಕಿಯಾಗಿ ಕೊಡಗಿನ ಕುವರಿ ಸೌಮ್ಯ ನಟಿಸಿದ್ದಾರೆ.

ಹೌದು, ಈ ಚಿತ್ರದಲ್ಲಿ ರಾಘವ್ ನಾಗ್ ಹಾಗೂ ಬಿಂಬಶ್ರೀ ಕಲಾವಿದರು ಸಹ ನಟಿಸಿದ್ದಾರೆ. ಈ ಹಿಂದೆ ಇವರಿಬ್ಬರೂ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ವರ್ಧನ್ ಹಾಗೂ ಸೌಮ್ಯ ಇದೇ ಮೊದಲ ಬಾರಿಗೆ ಪ್ರಮುಖ ಪಾತ್ರಧಾರಿಗಳಾಗಿ ಕಾಣಿಸಿಕೊಂಡಿದ್ದಾರೆ.

ಅಂದ ಹಾಗೆ ಸೌಮ್ಯ ಮೂಲತಃ ಮಾಡೆಲಿಂಗ್ ಕ್ಷೇತ್ರದಿಂದ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಇವರು 2018ರ ಮಿಸ್ ಇಂಡಿಯಾ ಸ್ಪರ್ಧೆಯ ಫೈನಲಿಸ್ಟ್ ಆಗಿದ್ದವರು. ತಮಿಳು ಕಿರುತೆರೆ ರಿಯಾಲಿಟಿ ಶೋ ಸ್ವರ್ಣ ಸುಂದರಿ ಮೂಲಕ ಎಲ್ಲರ ಗಮನ ಸೆಳೆದ ಇವರು ಈಗಾಗಲೇ ತಮಿಳು ಚಿತ್ರವೊಂದರಲ್ಲಿ ನಟಿಸಿದ್ದಾರೆ.

ಈಗಾಗಲೇ ಈ ಚಿತ್ರದ ಹಾಡುಗಳು, ಟ್ರೈಲರ್ ಹಿಟ್ ಆಗಿದ್ದು, ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ. ಇದೊಂದು ರೌಡಿಸಂ ಸುತ್ತ ಕತೆ ನಡೆಯುವ ಕಥೆಯನ್ನು ಒಳಗೊಂಡಿದ್ದು, ಚಿತ್ರದಲ್ಲಿ ಸಮಾಜದಿಂದ ತಿರಸ್ಕೃತರಾದ ಹೆಣ್ಣೊಬ್ಬಳ ಪಾತ್ರದಲ್ಲಿ ಸೌಮ್ಯ ನಟಿಸಿದ್ದಾರೆ.

ಈ ಹಿಂದೆ ದಯಾಳ್ ಮತ್ತು ರಮೇಶ್ ಅರವಿಂದ್ ಅವರ ಜೊತೆ ಕೆಲಸ ಮಾಡಿರುವ ಪ್ರಕಾಶ್ ನಿರ್ದೇಶನದ ಮೊದಲ ಚಿತ್ರ ಇದಾಗಿದೆ. ‘ಕೆಟ್ಟವರನ್ನು ಸಂಹಾರ ಮಾಡಲು ಕೆಟ್ಟವನೇ ಬರಬೇಕು’ ಎಂಬುದು ಚಿತ್ರದ ಕಥೆಯ ಒಂದು ಎಳೆ ಎನ್ನುತ್ತದೆ ಚಿತ್ರತಂಡ. ಮೈತ್ರಿ ಪ್ರೊಡಕ್ಷನ್ ಬ್ಯಾನರ್​ ನಡಿ ಸಿನಿಮಾ ಮೂಡಿ ಬರ್ತಿದ್ದು, ಮಂಜುನಾಥ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಮೈಸೂರಿನಲ್ಲಿ ಭೇಟಿಯಾದ ಅಪ್ಪು ಆ್ಯಂಡ್ ಯಶ್

#hafta, #sowmyatheetira, #balkaninews #filmnews, #kannadasuddigalu #soumya

Tags