ಸುದ್ದಿಗಳು

ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಶ್ರುತಿ ಹರಿಹರನ್

ನಟಿ ಶ್ರುತಿ ಹರಿಹರನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಕೇರಳದ ಖಾಸಗಿ ಆಸ್ಪತ್ರೆಯಲ್ಲಿ ಶ್ರುತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಶೃತಿ ಒಂದೆಡೆ ಮಗುವಿಗೆ ಜನ್ಮ ನೀಡಿದ ಖುಷಿಯಲ್ಲಿದ್ದರೆ, ಇನ್ನೊಂದೆಡೆ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ಪಡೆದ ಸಂಭ್ರಮದಲ್ಲಿದ್ದಾರೆ. ಹೌದು, 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿದ್ದು, ಶ್ರುತಿ ಹರಿಹರನ್ ಅಭಿನಯದ ಕನ್ನಡದ ‘ನಾತಿಚರಾಮಿ’ ಚಿತ್ರ ಅತ್ಯುತ್ತಮ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದೆ.

ಕಳೆದ ತಿಂಗಳು ಶ್ರುತಿ ಹರಿಹರನ್ ಗರ್ಭಿಣಿಯಾಗಿರುವ ಸುದ್ದಿಯನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ತಮ್ಮ ಬೇಬಿ ಬಂಪ್ ಗೆ ಸಂಬಂಧಿಸಿದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದ ಶ್ರುತಿ, ‘ನನ್ನೊಳಗಿನ ಹೃದಯ ಬಡಿತವನ್ನು ಜೀವನದಲ್ಲಿ ಆಲಿಸುವಾಗ, ಹೊಸ ಜೀವನದ ಪ್ರಾರಂಭವಾಗುತ್ತಿದೆ ಎಂಬುದು ಅರಿವಾಗುವಾಗ, ಈ ಕ್ಷಣವನ್ನು ಅನುಭವಿಸುವಾಗ, ನಿನ್ನನ್ನು ನೋಡಲು ಹೆಚ್ಚು ಕಾಯಲು ಆಗುತ್ತಿಲ್ಲ’ ಎಂದು ಬರೆದುಕೊಂಡಿದ್ದರು.

‘ನಾತಿಚರಾಮಿ’ ಬೆಸ್ಟ್ ಕನ್ನಡ ಸಿನಿಮಾ: ವಿಶೇಷ ಮೆಚ್ಚುಗೆ ಪಡೆದ ಶೃತಿ ಹರಿಹರನ್ ಅಭಿನಯ

#balkaninews #shrutihariharan #babygirl #kerala

Tags