ಸುದ್ದಿಗಳು

ದುರ್ಯೋಧನ ಹಾಗೂ ಭೀಷ್ಮ ಪಾತ್ರಗಳಿಗಾಗಿ ಕಾಯುತ್ತಿರುವೆ: ಸುಮಲತಾ ಅಂಬರೀಶ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಕುರುಕ್ಷೇತ್ರ’. ಬಹುತಾರಾಗಣದಿಂದ ಕೂಡಿರುವ ‘ಕುರುಕ್ಷೇತ್ರ’ ಚಿತ್ರವನ್ನು ಇದೀಗ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ರವರು ನೋಡಲು ಕಾತುರದಿಂದ ಕಾಯುತ್ತಿದ್ದೇನೆ ಎಂದಿದ್ದಾರೆ.

ಹೌದು, ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ರವರು ತಮ್ಮ ಟ್ವಿಟರ್ ಖಾತೆಯಲ್ಲಿ ನಾನು ‘ಕುರುಕ್ಷೇತ್ರ’ ಚಿತ್ರದಲ್ಲಿನ ದುರ್ಯೋಧನ ಹಾಗೂ ಭೀಷ್ಮ ಪಾತ್ರಧಾರಿಗಳನ್ನು ತೆರೆಯ ಮೇಲೆ ನೋಡಲು ಕಾತುರದಿಂದ ಕಾಯುತ್ತಿರುವೇ ಎನ್ನುವ ಪೋಸ್ಟ್ ವೊಂದನ್ನು ಮಾಡಿದ್ದಾರೆ. ಈ ಮೂಲಕ ತಮ್ಮ ಟ್ವೀಟ್ ನನ್ನು ದರ್ಶನ್ ರವರಿಗೆ ಟ್ಯಾಗ್ ಕೂಡ ಮಾಡಿದ್ದಾರೆ.

ಚಿತ್ರದ ಬಗ್ಗೆ ಹೇಳುವುದಾದರೆ, ಮುನಿರತ್ನ ನಿರ್ಮಾಣದಲ್ಲಿ, ನಾಗಣ್ಣ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ವಿ. ಹರಿಕೃಷ್ಣರವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದ್ದು, ಆಗಸ್ಟ್ 2 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಈಗಾಗಲೇ ಬಿಡುಗಡೆಯಾಗಿರುವ ಟೀಸರ್, ಟ್ರೇಲರ್ ಮತ್ತು ಹಾಡುಗಳು ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಸಾಯಿ ಕುಮಾರ್, ಸ್ನೇಹಾ, ಮೇಘನಾ ರಾಜ್, ಹರಿಪ್ರಿಯಾ, ಸೋನು ಸೂದ್, ಶಶಿಕುಮಾರ್, ರವಿಚಂದ್ರನ್, ರಮೇಶ್ ಭಟ್, ಶ್ರೀನಿವಾಸ ಮೂರ್ತಿ, ನಿಖಿಲ್ ಕುಮಾರ್ ಹೀಗೆ ಬಹುತಾರಾಗಣದಿಂದ ಈ ಚಿತ್ರ ಅದ್ಭುತವಾಗಿ ಮೂಡಿಬಂದಿದೆ.

‘ಆಕೆಯ ಕಣ್ಣುಗಳು ಬಹಳ ಸುಂದರ…’ ತಮನ್ನಾ ಹೀಗೆ ಹೇಳಿದ್ದು ಯಾವ ನಟಿಗೆ?

#kurukshetra  #kurukshetrakannadamovie #kurukshetramoviesongs #kurukshetramovieindarshan #darshanandambareesh

Tags