ಸುದ್ದಿಗಳು

ತೆಲುಗು ಚಿತ್ರರಂಗವನ್ನು ಮೀರಿಸುವಂತಿದೆ ‘ಕುರುಕ್ಷೇತ್ರ’ ಸಿನಿಮಾ: ನಟಿ ಉಮಾಶ್ರೀ

ಸ್ಯಾಂಡಲ್ ವುಡ್ ನಲ್ಲಿ ಧೂಳ್ ಎಬ್ಬಿಸುತ್ತಿರುವ ಪೌರಾಣಿಕ ಸಿನಿಮಾ ‘ಕುರುಕ್ಷೇತ್ರ’.ಈ ಚಿತ್ರವು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಎನ್ನುವ ವಿಶೇಷತೆ ಒಂಡೆದೆಯಾದರೆ, ದೊಡ್ಡ ತಾರಾಬಳಗ, 3ಡಿ ಎಫೆಕ್ಟ್, ಅದ್ದೂರಿ ಗ್ರಾಫಿಕ್ಸ್ ಚಿತ್ರದ ಮತ್ತೊಂದು ಹೈಲೆಟ್.

ಮಹಾಭಾರತ ಕಥೆಯನ್ನು ಸಿನಿಮಾ ಮೂಲಕ ಇಂದಿನ ಯುವಜನತೆಯ ಮುಂದಿಟ್ಟು ಯುವಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ನಿರ್ಮಾಪಕ ಮುನಿರತ್ನ. ಈ ಚಿತ್ರಕ್ಕೆ ಎಲ್ಲಾ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಅಂದ ಹಾಗೆ ಇತ್ತೀಚಿಗಷ್ಟೆ ಚಿತ್ರತಂಡದವರು ಓರಾಯನ್ ಮಾಲ್ ನಲ್ಲಿ ಸೆಲೆಬ್ರಿಟಿ ಶೋ ಆಯೋಜಿಸಿದ್ದರು. ಅನೇಕ ಕಲಾವಿದರು ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ನಟಿ ಉಮಾಶ್ರೀ ಚಿತ್ರದ ಕುರಿತು ಹೀಗೆ ಮಾತನಾಡಿದ್ದಾರೆ.

‘ನಾವು ಕುಟುಂಬ ಸಮೇತರಾಗಿ ಹಾಗೂ ಸ್ನೇಹಿತರೊಂದಿಗೆ ಈ ಸಿನಿಮಾ ನೋಡಿದೆವು. ಎಲ್ಲಾ ಕಡೆಯಲ್ಲೂ ನಿರೀಕ್ಷೆ ಮೀರಿದ ಪ್ರಶಂಸೆ ಈ ಚಿತ್ರಕ್ಕೆ ಸಿಕ್ಕದೆ. ಅಲ್ಲದೇ ತೆಲುಗು ಚಿತ್ರಗಳ ಸಮಾನಾಂತರವಾಗಿ ಬರಬಹುದೇ ಎಂಬ ನಿರೀಕ್ಷೆಯಿತ್ತು. ಆದರೆ, ನಮ್ಮ ಭಾಷೆಯ ಸಿನಿಮಾಗಳು ಎಲ್ಲಾ ಚಿತ್ರರಂಗವನ್ನೂ ಮೀರಿಸುವಂತಿವೆ. ಎಲ್ಲಾ ಕಲಾವಿದರೂ ಅದ್ಭುತವಾಗಿ ನಟಿಸಿದ್ದಾರೆ. ಎಲ್ಲರೂ ಈ ಚಿತ್ರವನ್ನು ನೋಡಬೇಕು. ನಮ್ಮ ಕಣ್ಣಮುಂದೆಯೇ ಮಹಾಭಾರತವನ್ನು ಇಲ್ಲಿ ಕಟ್ಟಿಕೊಟ್ಟಲಾಗಿದೆ. ಇಂತಹ ಚಿತ್ರವನ್ನು ಕೊಟ್ಟಂತ ನಿರ್ಮಾಪಕರಿಗೆ, ನಿರ್ದೇಶಕರಿಗೆ ವಂದನೆಗಳು’

ಡೈರೆಕ್ಟರ್ ದಿನಕರ್ ತೂಗುದೀಪ ದಂಪತಿಗಳಿಗೆ ಇಂದು ಮರೆಯಲಾಗದ ದಿನ

#Umashree #kurukshetra #kurukshetraMovie #darshan, #munirathna

Tags