ಸುದ್ದಿಗಳು

ಅಣ್ಣನೊಂದಿಗೆ ಬ್ಯಾಡ್ಮಿಂಟನ್ ಆಡಿದ ಹರಿಪ್ರಿಯಾ

ಕನ್ನಡ ಚಿತ್ರರಂಗದ ಮುದ್ದಾದ ಪೋರಿಯರಲ್ಲಿ ಹರಿಪ್ರಿಯಾ ಕೂಡಾ ಒಬ್ಬರು. ಗ್ರಾಮರು, ಗ್ಲ್ಯಾಮರು, ಎರಡನ್ನೂ ಹೊಂದಿರುವ ಹರಿಪ್ರಿಯಾ, ಇತ್ತೀಚಿಗೆ ರಂಗೋಲಿ ಬಿಡಿಸಿ ಸುದ್ದಿಯಾಗಿದ್ದರು. ಅದರಂತೆ ಮೊನ್ನೆ ಸಹ ಮಲ್ಲಿಗೆ ಹೂವಿನ ಮಾಲೆಯನ್ನು ಕಟ್ಟುವ ಮೂಲಕ ಪುನ‍ಃ ಅಭಿಮಾನಿಗಳನ್ನು ಬೆರಗುಗೊಳಿಸಿದ್ದರು.

ಇದೀಗ ಹರಿಪ್ರಿಯಾ ನಟಿ ಮಾತ್ರ ಅಲ್ಲ, ಆಟಗಾರ್ತಿ ಕೂಡಾ. ಇದು ಯಾವುದೋ ಸಿನಿಮಾಗಾಗಿ ಅಲ್ಲ. ನಿಜ ಜೀವನದಲ್ಲಿ. ಹರಿಪ್ರಿಯಾ ಬ್ಯಾಂಡ್ಮಿಂಟನ್ ಆಟಗಾರ್ತಿ ವೆಂಬ ವಿಚಾರ ಈಗ ಬೆಳಕಿಗೆ ಬಂದಿದೆ. ರೆಗ್ಯುಲರ್ ಎಕ್ಸ್ಸೈಸ್ ನಲ್ಲಿ ಶಟಲ್ ಬ್ಯಾಡ್ಮಿಂಟನ್ ಕೂಡಾ ಆಡುತ್ತಿದ್ದಾರೆ. ೀ ಬ್ಗಗೆ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ ಹರಿಪ್ರಿಯಾ.
ಹರಿಪ್ರಿಯಾ ಅವರು ಅಣ್ಣ ಕೀರ್ತಿ ಚಂದ್ರನ ಜೊತೆ ಮಧ್ಯರಾತ್ರಿ ಬ್ಯಾಟ್ ಹಿಡಿದು ಮನೆಯಿಂದ ಹೋಗಿ ಬ್ಯಾಡ್ಮಿಂಟನ್ ಆಡುತ್ತಾರಂತೆ. ಆರ್ ಆರ್ ನಗರದಲ್ಲಿರುವ ಒಳಾಂಗಣ ಬ್ಯಾಡ್ಮಿಂಟನ್ ಕೋರ್ಟ್ ನಿರ್ಮಾಣ ಆಗಿರೋದು ಅವರಿಗೆ ಆಡಲು ಇನ್ನಷ್ಟು ಅನುಕೂಲವಾಗಿದೆಯಂತೆ.

“ನನಗೆ ಮೊದಲಿನಿಂದ ಬ್ಯಾಡ್ಮಿಂಟನ್ನಲ್ಲಿ ಆಸಕ್ತಿ. ಶಾಲೆಯಲ್ಲಿ ಓದುತ್ತಿರುವಾಗಲಿಂದಲೂ ಆಡುತ್ತಿದ್ದೆ. ನನ್ನ ಅಣ್ಣ ನನಗಿಂತ ನಾಲ್ಕು ವರ್ಷ ದೊಡ್ಡವನು. ಅವನೇ ನನಗೆ ಬೆಸ್ಟ್ ಕಂಪನಿ. ಮನೆಯ ಹತ್ತಿರವೇ ಇಂಡೋರ್ ಕೋರ್ಟ್ ಆಗಿರೋದ್ರಿಂದ ಈಗ ಇನ್ನೂ ಹೆಚ್ಚು ಆಡುತ್ತಿದ್ದೇನೆ. ಶೂಟಿಂಗ್ ಇದ್ದರೆ, ಸಮಯ ಸಿಕ್ಕಾಗ ಆಡುತ್ತೇನೆ. ಒಮ್ಮೊಮ್ಮೆ ಮಧ್ಯರಾತ್ರಿ ನಾನು ನನ್ನ ಅಣ್ಣ ಇಬ್ಬರೂ ಹೋಗಿ ಆಡುತ್ತೇವೆ. ನನ್ನ ಅಣ್ಣನೇ ಜತೆಯಲ್ಲಿರೋದ್ರಿಂದ ನನಗೆ ಯಾವ ಆತಂಕವೂ ಇರೋಲ್ಲ” ಎನ್ನುತ್ತಾರೆ ಹರಿಪ್ರಿಯಾ.

ಸ್ವಿಮ್ಮಿಂಗ್, ಸೈಕ್ಲಿಂಗ್, ಯೋಗ ಮಾಡುವ ಹರಿಪ್ರಿಯಾ ಬ್ಯಾಡ್ಮಿಂಟನ್ ಸಹ ಆಡುತ್ತಾರಂತೆ. ಜೊತೆಗೆ ಈ ಕ್ಲಬ್ ನಲ್ಲಿ ಏರಿಯಾದವರೂ ಆಡುವುದರಿಂದ ಹಲವರ ಪರಿಚಯ ಆಗುತ್ತದೆ. ಬೆಟ್ ಕಟ್ಟಿ ಆಡುತ್ತೇವೆ. ಟೂರ್ನ್ ಮೆಂಟ್ ಗಳಲ್ಲೂ ಆಡುತ್ತಿದ್ದೇನೆ’ ಎನ್ನುತ್ತಾರೆ.

ಈಗಾಗಲೇ ಅನೇಕ ಚಿತ್ರಗಳಲ್ಲಿ ಬ್ಯೂಸಿಯಾಗಿರುವ ಹರಿಪ್ರಿಯಾರ 25 ನೇ ಚಿತ್ರದ ಚಿತ್ರೀಕರಣ ಭರದಿ0ದ ಸಾಗುತ್ತಿದೆ.

Tags

Related Articles

Leave a Reply

Your email address will not be published. Required fields are marked *