ಸುದ್ದಿಗಳು

ನಟನಾ ಲೋಕದಲ್ಲಿ ಪ್ರೇಮ ಪರ್ವ

‘ಸವ್ಯಸಾಚಿ’ ಚಿತ್ರದ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಪ್ರೇಮಾರಿಗೆ ಹೆಸರು ತಂದು ಕೊಟ್ಟ ಚಿತ್ರ ಓಂ. ಈ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿರುವ ಚೆಲುವೆ ಮುಂದೆ ಆಟ ಹುಡುಗಾಟ, ನಮ್ಮೂರ ಮಂದಾರ ಹೂವೆ, ಚಂದ್ರಮುಖಿ ಪ್ರಾಣಸಖಿ, ನಾನು ನನ್ನ ಹೆಂಡ್ತೀರು, ಯಜಮಾನ, ಕನಸುಗಾರ, ಪರ್ವ, ಸಿಂಗಾರವ್ವ, ಕೌರವ, ಕಂಬಲಹಳ್ಳಿ, ಮರ್ಮ, ನಾಗದೇವತೆ, ಆಪ್ತಮಿತ್ರ, ಜಮೀನ್ದಾರು,ಪೋಲೀಸ್ ಪವರ್, ಗಾಜಿನ ಮನೆ, ಎಲ್ಲರಂಥಲ್ಲ ನನ್ನ ಗಂಡ, ತುತ್ತಾ ಮುತ್ತಾ, ಶಾಂತಿ ಶಾಂತಿ ಶಾಂತಿ, ಚಂದ್ರೋದಯ, ಮಾಯಾ ಬಝಾರ್, ನನ್ನವಳು ನನ್ನವಳು, ಉತ್ತರ ಧ್ರುವಧಿಂ ದಕ್ಷಿಣ ಧ್ರುವಕೂ, ಅಂಜಲಿ ಗೀತಾಂಜಲಿ, ಪ್ರೇಮಿ ನಂ 1, ಕೋತಿಗಳು ಸಾರ್ ಕೋತಿಗಳು, ಗ್ರಾಮ ದೇವತೆ, ಚೆಲ್ವಿ, ಪ್ರೇಮ, ಮೂರು ಮನಸ್ಸು ನೂರು ಕನಸು, ಶ್ರೀ ರೇಣುಕಾ ದೇವಿ, ವಿಜಯ ದಶಮಿ, ಲವ್ವೇ ಪಾಸಾಗಲಿ, ಅ ಆ ಇ ಈ, ಕ್ಷಣ ಕ್ಷಣ, ಏಕದಂತ, ಶಿಶಿರ ಚಿತ್ರಗಳಲ್ಲಿ ಅಭಿನಯಿಸಿರುವ ಕೊಡಗಿನ ಬೆಡಗಿ ಕನ್ನಡದ ಜೊತೆಗೆ ಬೇರೆ ಭಾಷೆಯಲ್ಲಿಯೂ ತಮ್ಮ ನಟನಾ ಕಂಪನ್ನು ಪಸರಿಸಿದವರು.

ಸ್ವಲ್ಪ ಸಮಯದ ಬ್ರೇಕ್ ನ ನಂತರ ಮಂಜಿನ ನಗರಿಯ ಚೆಲುವೆ ಪ್ರೇಮಾ ಮಗದೊಮ್ಮೆ ತಮ್ಮ ಸಿನಿ ಯಾನ ಆರಂಭಿಸಿದ್ದಾರೆ. ಉಪೇಂದ್ರ ಮತ್ತೆ ಬಾ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಪ್ರೇಮಾ ಕನ್ನಡದ ಜೊತಗೆ ಪರಭಾಷೆಯಲ್ಲೂ ಮಿಂಚಿದವರು.

ಮಲೆಯಾಳಂ ನ ದಿ ಪ್ರಿನ್ಸ್ ಚಿತ್ರದಲ್ಲಿ ಮೋಹನ್ ಲಾಲ್ ಗೆ ನಾಯಕಿಯಾಗಿ ನಟಿಸಿರುವ ಚೆಂದುಳ್ಳಿ ಚೆಲುವೆ ಮುಂದೆ ಅದೇ ಭಾಷೆಯ ದೈವತಿಂಟೆ ಮಗನ್ ಚಿತ್ರದಲ್ಲಿ ಅಭಿನಯಿಸಿದ್ದರು. ಮುಂದೆ ತೆಲುಗಿನ ದೇವಿ, ದೇವಿ ಅಭಯಮ್, ಜಗದೇಕ ವೀರುಡು, ಓಂಕಾರಮಂ, ದೇವಿ, ಅಮ್ಮ ನಾಗಮ್ಮ, ಧರ್ಮಚಕ್ರಮ್, ಮಾ ಆವಿದ ಕಲೆಕ್ಟರ್ ಚಿತ್ರದಲ್ಲಿಯೂ ನಟಿಸಿರುತ್ತಾರೆ.

ಚರ್ತುಭಾಷಾ ತಾರೆಯಾಗಿ ಮನೆ ಮಾತಾಗಿರುವ ಪ್ರೇಮಾ ಖ್ಯಾತ ನಟರಾಗಿರುವ ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್ ಕುಮಾರ್, ರಮೇಶ್ ಅರವಿಂದ್, ಉಪೇಂದ್ರ, ಮೋಹನ್ ಲಾಲ್, ವೆಂಕಟೇಶ್, ಜಗಪತಿ ಬಾಬು, ಮೋಹನ್ ಬಾಬು ಅವರೊಂದಿಗೆ ನಟಿಸಿರುವ ಕೀರ್ತಿಗೆ ಪಾತ್ರರಾಗಿದ್ದಾರೆ.

ಪ್ರೇಮಾರ ಅಮೋಘವಾದ ಅಭಿನಯಕ್ಕೆ ಅವರಿಗೆ ಸಂದ ಪ್ರಶಸ್ತಿಗಳೇ ಸಾಕ್ಷಿ. ಓಂ ಚಿತ್ರಕ್ಕೆ ಅತ್ಯುತ್ತಮ ನಟಿ, ಕನಸುಗಾರ ಚಿತ್ರಕ್ಕೆ ಫಿಲಂಫೇರ್ ಕೊಡಮಾಡುವ ಅತ್ಯುತ್ತಮ ನಟಿ, ಸ್ಕ್ರೀನ್ ವಿಡಿಯೋಕಾನ್ ಪ್ರಶಸ್ತಿ, ದೇವಿಕಾರಾಣಿ ಪ್ರಶಸ್ತಿ, ಚಿತ್ರಪ್ರೇಮಿಗಳ ಸಂಘದ ಪ್ರಶಸ್ತಿ, ಸಿನಿಮಾ ಎಕ್ಸ್ ಪ್ರೆಸ್ ಪ್ರಶಸ್ತಿಗಳು ಕೂಡಾ ಲಭಿಸಿವೆ.

ನಟನೆಯ ಹೊರತಾಗಿ ಪ್ರೇಮಾ ಆಟೋಟಗಳಲ್ಲಿಯೂ ಗುರುತಿಸಿಕೊಂಡವರು. ಕಾಲೇಜಿನ ದಿನಗಳಲ್ಲಿ ಆಟೋಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದ ಪ್ರೇಮಾ ಹೈ ಜಂಪ್ ಮತ್ತು ವಾಲಿ ಬಾಲ್ ನಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚಿದ ಪ್ರತಿಭೆ.

ಇಂತಿಪ್ಪ ಮಂಜಿನ ನಗರಿ ಚೆಲುವೆ ಪ್ರೇಮಾ ಬರುವ ವಾರ ಕಿರೆತೆರೆಯಲ್ಲಿ ಹಾಜರ್ ಆಗಲಿದ್ದಾರೆ. ನಿಮ್ಮ ಕಣ್ಣ ಮುಂದೆ ಬರಲಿದ್ದಾರೆ. ಅವರ ಬಾಳ ಪುಟದ ಸವಿನೆನಪುಗಳು ನಿಮ್ಮ ಮುಂದೆ ಅನಾವರಣಗೊಳ್ಳಲಿದೆ.. ಅದು ನಿಮ್ಮ ಪ್ರೀತಿಯ ರಮೇಶ್ ಅರವಿಂದ್ ಮೂಲಕ!!! ವೀಕೆಂಡ್ ವಿದ್ ರಮೇಶ್ ಕಾರ್ಯಕ್ರಮದ ಮೂಲಕ ನಮ್ಮೂರ ಮಂದಾರ ಹೂವೇ ಯ ಈ ಜೋಡಿ ಮತ್ತೆ ಜೊತೆಯಾಗಲಿದೆ..

ನಟನಾ ರಂಗದಲ್ಲಿ ಸಂತಸದಿಂದ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ಕೊಡಗಿನ ಕುವರಿ ಪ್ರೇಮಾ ಗೆ ನಮ್ಮ ಬಾಲ್ಕನಿ ತಂಡದ ಪರವಾಗಿ ಶುಭ ಹಾರೈಕೆಗಳು.

ಸರತಿ ಸಾಲಿನಲ್ಲಿ ನಿಂತು ಪತ್ನಿಯೊಂದಿಗೆ ಮತ ಚಲಾಯಿಸಿದ ಡಿ-ಬಾಸ್ ದರ್ಶನ್

#actressprema, #balkaninews #filmnews #kannadasuddigalu,

Tags