ಸುದ್ದಿಗಳು

ಅಮಲಾ ಬೋಲ್ಡ್ ಟೀಸರ್ ನೋಡಿ ಇಂಪ್ರೆಸ್ ಆದ ಸೆಲೆಬ್ರಿಟಿಗಳು!

ನಿನ್ನೆ ಯೂಟ್ಯೂಬ್ ನಲ್ಲಿ ಅಮಲಾ ಪೌಲ್ ಅಭಿನಯದ ‘ಅಡೈ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದ ಟೀಸರ್ ಬಿಡುಗಡೆಯಾದ ಮೇಲೆ ಸೆಲೆಬ್ರಿಟಿಗಳಿಂದ ಸಾಕಷ್ಟು ಪತ್ರಿಕ್ರಿಯೆಗಳು ಬರುತ್ತಿವೆ.

ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಪ್ರತಿ ಬಾರಿ ಹೊಸಬರ ಪ್ರೊಮೊಗಳು, ಟೀಸರ್ ಬಿಡುಗಡೆಯಾದಾಗ ಅವರನ್ನು ಪ್ರೋತ್ಸಾಹಿಸಿ, ಚಿತ್ರವನ್ನು ವಿಮರ್ಶಿಸುವುದರ ಜೊತೆಗೆ ತಮಗನಿಸಿದ್ದನ್ನು ನೇರವಾಗಿ ಹಂಚಿಕೊಳ್ಳುತ್ತಾರೆ. ಇದೀಗ ಟ್ವಿಟರ್ ನಲ್ಲಿ ‘ಅಡೈ’ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿರುವ ವರ್ಮಾ, “ಟೀಸರ್ ನಲ್ಲಿ ಅಮಲಾ ನಗ್ನಳಾಗಿರುವ ದೃಶ್ಯವು ಹೃದಯ ಸ್ಪರ್ಶಿಯಾಗಿದೆ. ಇದು ನಿರ್ದೇಶಕರ ಸಮಗ್ರತೆ ತೋರಿಸುತ್ತದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಮಲ ಪೌಲ್, ಧನ್ಯವಾದಗಳು ಸರ್, ನಿಮ್ಮ ಹೇಳಿಕೆ ನಮ್ಮ ಕೆಲಸಕ್ಕೆ ಇನ್ನಷ್ಟು ಹುರುಪು ತುಂಬಿದೆ ಎಂದಿದ್ದಾರೆ.

ಇನ್ನು ನಟಿ ಸಮಂತಾ ಅಕ್ಕಿನೇನಿ, ಅಮಲಾ, “ಟೀಸರ್ ಬಹಳ ಚೆನ್ನಾಗಿ ಮೂಡಿಬಂದಿದೆ. ಕುತೂಹಲ ಹೆಚ್ಚಿಸುತ್ತದೆ. ನಿನಗೆ ಒಳ್ಳೆಯದಾಗಲಿ” ಎಂದು ಆಶಿಸಿದ್ದಾರೆ. ಪೂರಿ ಜಗನ್ನಾಥ್ ‘ಸೂಪರ್’ ಎಂದು ಪ್ರತಿಕ್ರಿಯಿಸಿದರೆ, ತಾಪ್ಸಿ ಪನ್ನು “ತಂಡಕ್ಕೆ ಒಳ್ಳೆಯದಾಗಲಿ, ನಿಮ್ಮ ಕೆಚ್ಚೆದೆಯ ಪ್ರಯತ್ನಕ್ಕೆ ಶುಭವಾಗಲಿ” ಎಂದು ವಿಶ್ ಮಾಡಿದ್ದಾರೆ.

ಟೀಸರ್ ನೋಡಿದ ಸೆಲೆಬ್ರಿಟಿಗಳಿಂದ ಪ್ರಶಂಸೆಯ ಸುರಿಮಳೆಯೇ ಹರಿದುಬರುತ್ತಿದ್ದು, ತಮ್ಮ ಪ್ರಯತ್ನಕ್ಕೆ ಶುಭ ಕೋರಿದ ಪ್ರತಿಯೊಬ್ಬರಿಗೂ ಅಮಲಾ ಧನ್ಯವಾದಗಳನ್ನು ತಿಳಿಸಿದ್ದಾರೆ. ಈಗಾಗಲೇ 7 ಲಕ್ಷಕ್ಕೂ ಅಧಿಕ ಹಿಟ್ಸ್ ಪಡೆದುಕೊಂಡಿರುವ ಈ ಟೀಸರ್ ನಲ್ಲಿ ಅಮಲಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ಈ ಟೀಸರನ್ನು ನಿರ್ಮಾಪಕ ಕಮ್ ನಿರ್ದೇಶಕ ಕರಣ್ ಜೋಹರ್ ರಿಲೀಸ್ ಮಾಡಿದ್ದಾರೆ. ಕಾಣೆಯಾದ ಮಗುವನ್ನು ಹುಡುಕುವ ತಾಯಿ ಏನೆಲ್ಲಾ ಕಷ್ಟ ನಷ್ಟಗಳನ್ನು ಅನುಭವಿಸುತ್ತಾಳೆ ಎಂಬುದೇ ಆಡೈ ಕಥಾ ಹಂದರ.

ನಟಿ ಅಮಲಾ ಪೌಲ್ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್

#balkaninews #amalapaul #teaser #amalapaulinstagram #amalapaultwitter #ramgopalvarma

Tags