ಸುದ್ದಿಗಳು

ಸಸ್ಪೆನ್ಸ್, ಥ್ರಿಲ್ಲರ್ ಕಥೆಯನ್ನೊಳಗೊಂಡ ‘ಅಡಚಣೆಗಾಗಿ ಕ್ಷಮಿಸಿ’ ಟ್ರೇಲರ್ ರಿಲೀಸ್

ಬೆಂಗಳೂರು, ಮಾ.14:

‘ಅಡಚಣೆಗಾಗಿ ಕ್ಷಮಿಸಿ’ ಸಿನಿಮಾ ವಿಭಿನ್ನ ಟೈಟಲ್ ನಿಂದಲೇ ಸದ್ದು ಮಾಡ್ತಾ ಇದೆ. ಸಾಮಾನ್ಯವಾಗಿ ಅಡಚಣೆಗಾಗಿ ಕ್ಷಮಿಸಿ ಅನ್ನೋ ಪದ ಹಿಂದೆ ಟಿವಿಗಳಲ್ಲಿ ನೋಡಲಾಗುತ್ತಿತ್ತು. ಅಥವಾ ಸರ್ಕಾರ, ನಗರ ಪಾಲಿಕೆ ಕೆಲಸಗಳಿಗೆ ಈ ಪದ ಬಳಸಲಾಗುತ್ತಿತ್ತು. ಆದರೆ ಇದೀಗ ಈ ಪದಗಳನ್ನೇ ಸಿನಿಮಾ ಟೈಟಲ್ ಬಳಸಿಕೊಳ್ಳಲಾಗಿದೆ. ಈಗಾಗಲೇ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ರೆಡಿಯಾಗಿರುವ ಈ ಸಿನಿಮಾ ನಿನ್ನೆಯಷ್ಟೆ ಟ್ರೇಲರ್ ಹಾಗೂ ಆಡಿಯೋ ಲಾಂಚ್ ಮಾಡಿದೆ.

ಹಾರರ್ ಕಥೆಯ ಸಿನಿಮಾ

ಹೌದು, ಕನ್ನಡದಲ್ಲಿ ಈಗಾಗಲೇ ಬಹುತೇಕ ಥ್ರಿಲ್ಲರ್, ಸಸ್ಪೆನ್ಸ್ ಜಾನರ್‌ ನ ಸಿನಿಮಾಗಳು ಬಂದಿದೆ. ಅಂತಹುದೇ ಪ್ರಧಾನ ಅಂಶಗಳನ್ನಿಟ್ಟುಕೊಂಡು ತಯಾರಾಗಿರುವ ಹೊಸಬರ ಸಿನಿಮಾವೇ ಅಡಚಣೆಗಾಗಿ ಕ್ಷಮಿಸಿ. ಅಡಚಣೆಗಾಗಿ ಕ್ಷಮಿಸಿ ಚಿತ್ರವನ್ನು ಭರತ್ ಎಸ್ ನಾವುಂದ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಪೋಸ್ಟರ್ ಗಳ ಮೂಲಕ ಸದ್ದು ಮಾಡ್ತಾ ಇದ್ದ ಈ ಸಿನಿಮಾ ಇದೀಗ ಟ್ರೇಲರ್ ಮೂಲಕ ಸದ್ದು ಮಾಡ್ತಾ ಇದೆ.

22ರಂದು ತೆರೆಗೆ

ಹೌದು, ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್ ನಲ್ಲೂ ಸಸ್ಪೆನ್ಸ್, ಹಾರರ್, ಥ್ರಿಲ್ಲರ್ ಒಳಗೊಂಡಿದೆ. ಒಮ್ಮೆ ಟ್ರೇಲರ್ ನೋಡಿದ್ರೆ ಸಾಕು ಯಾವುದೋ ಹೊಸ ಜಗತ್ತು ಅನಾವರಣವಾದಂತಿದೆ. ಇನ್ನು ಟ್ರೇಲರ್ ನಲ್ಲಿಯೇ ಹಾರರ್ ಟಚ್ ಇರೋದ್ರಿಂದ ಸಿನಿಮಾ ಮೇಲಿನ ನಿರೀಕ್ಷೆ ಸಾಮಾನ್ಯವಾಗಿ ಹೆಚ್ಚಾಗಿದೆ. ಇನ್ನು ಈ‌ ಸಿನಿಮಾ ಹಾಡುಗಳು ಕೂಡ ವಿಭಿನ್ನವಾಗಿ ಮೂಡಿ ಬಂದಿದೆ. ನಾಯಕನಾಗಿ ಪ್ರದೀಪ್ ವರ್ಮ ಕಾಣಿಸಿಕೊಂಡಿದ್ದಾರೆ. ಮೇಘ, ಅರ್ಪಿತ ಗೌಡ ಹಾಗೂ ಪ್ರೀತಿ ಎಂಬ ಮೂವರು ನಾಯಕಿಯರಾಗಿ ನಟಿಸಿದ್ದಾರೆ. ಇನ್ನೂ ಈ ಸಿನಿಮಾದಲ್ಲಿ 9 ಪಾತ್ರಗಳು ಮುಖ್ಯವಾಗಿದ್ದು, ಆ 9 ಪಾತ್ರಗಳ ಸುತ್ತ ಸುತ್ತುತ್ತೆ. ಇದೇ 22 ರಂದು ಸಿನಿಮಾ ತೆರೆಗೆ ಬರೋದಿಕ್ಕೆ ರೆಡಿಯಾಗಿದೆ ಯಾವ ರೀತಿ ಭಯ ಹುಟ್ಟುಹಾಕುತ್ತೆ ಕಾದು ನೋಡಬೇಕು.

ಕಾಲುಂಗುರ ಧರಿಸುವ ಮಹತ್ವವೇನು?

#adhachanegagikshamisikannadamovie #balkaninews #kannadamovies #sandalwood #trailer

Tags

Related Articles