ಸುದ್ದಿಗಳು

‘ಅಮ್ಮಾ.. ನಾ ಸೇಲಾದೆ.. ಅಮೇರಿಕಾ ಪಾಲಾದೆ’ ಎಂದು ಹಾಡಿ-ಕುಣಿದ ಶರಣ್

‘ಅಮ್ಮ ನಾ ಸೇಲಾದೆ…ಅಮೆರಿಕಾ ಪಾಲಾದೆ..’ ಎಂದು ಆಗ ಕಾಶೀನಾಥ್ ‘ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು’ ಚಿತ್ರಕ್ಕಾಗಿ ಹಾಡಿ ಕುಣಿದಿದ್ದರು. ವಿಶೇಷವೆಂದರೆ, ಇದೀಗ ಇದೇ ಸಾಲುಗಳು ಮರು ಜೀವ ಪಡೆದುಕೊಂಡ ವಿಡಿಯೋ ಹಾಡು ಬಿಡುಗಡೆಯಾಗಿದೆ. ಅಂದ ಹಾಗೆ ಈ ಬಾರಿ ಸೇಲ್ ಆಗಿರುವುದು ನಟ ಶರಣ್.

ಹೌದು, ‘ವಿಕ್ಟರಿ-2’ ಚಿತ್ರದ ಬಳಿಕ ನಟ ಶರಣ್ ಅಭಿನಯದ ‘ಅಧ್ಯಕ್ಷ ಇನ್ ಅಮೇರಿಕಾ’ ಚಿತ್ರದಲ್ಲಿ ನಟಿಸಿದ್ದು, ಸದ್ಯ ಚಿತ್ರದ ‘ಅಮ್ಮಾ.. ನಾ ಸೇಲಾದೆ.. ಅಮೇರಿಕಾ ಪಾಲಾದೆ’ ವಿಡಿಯೋ ಹಾಡು ಬಿಡುಗಡೆಯಾಗಿದೆ.

ಹೊಸ ಶೈಲಿಯ ‘ಅಮ್ಮ ನಾ ಸೇಲಾದೆ… ಅಮೆರಿಕಾ ಪಾಲಾದೆ…’ ಹಾಡು ಡಿ-ಬಿಟ್ಸ್ ಯುಟ್ಯೂಬ್ ಚಾನಲ್ ನಿಂದ ಈಗಷ್ಟೇ ಬಿಡುಗಡೆಯಾಗಿದ್ದು, ಮೋಡಿ ಮಾಡುತ್ತಿದೆ. ಇನ್ನು ಈ ಹಾಡನ್ನು ನಾಗೇಂದ್ರ ಪ್ರಸಾದ್ ಬರೆದಿದ್ದು, ಮೊದಲ ಎರಡು ಸಾಲುಗಳನ್ನು ಮಾತ್ರ ಕಾಶೀನಾಥ್ ರ ಚಿತ್ರದ ಹಾಡಿನಿಂದ ಬಳಸಿಕೊಳ್ಳಲಾಗಿದೆ.

ಇನ್ನು ಈ ಹಾಡಿಗೆ ಟಿಪ್ಪು ಧ್ವನಿ ನೀಡಿದ್ದು, ಹರಿಕೃಷ್ಣ ಸಂಗೀತ ನೀಡಿದ್ದಾರೆ. ಹಾಡಿನಲ್ಲಿ ಶರಣ್ ಜೊತೆಗೆ ರಾಗಿಣಿ ದ್ವಿವೇದಿ ಹೆಜ್ಜೆ ಹಾಕಿದ್ದಾರೆ. ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ಯೋಗನಂದ್ ಮುದ್ದಾನ್ ಅವರದ್ದಾಗಿದೆ. ಇನ್ನು ಈ ಚಿತ್ರವು ಮುಂದಿನ ತಿಂಗಳ ಮೊದಲ ವಾರ ಬಿಡುಗಡೆಯಾಗಲಿದೆ.

ಈ 7 ಫೋಟೋಗಳಲ್ಲಿ ಅನುಪಮಾ ಗೌಡ ಲುಕ್ ಸೂಪರೋ ಸೂಪರ್

#adhyakshainamerica #adhyakshainamericasong #Sharan , #sharanmovies #sandalwoodmovies  ‍#kannadasuddigalu

Tags