ಸುದ್ದಿಗಳು

ಆದಿಚುಂಚನ ಗಿರಿಗೆ ಸುಮಲತಾ ಭೇಟಿ!!

ಮಂಡ್ಯ,ಫೆ.10:

ಆದಿ ಚುಂಚನ ಗಿರಿಗೆ ಇಂದು ಸುಮಲತ ಭೇಟಿ ನೀಡಿದ್ದಾರೆ. ಕಾಲಭೈರವೇಶ್ವರನ ದರ್ಶನ ಮಾಡಿದ್ದಾರೆ.

ದೇವರ ಸನ್ನಿಧಾನಕ್ಕೆ ಭೇಟಿ

ಸದ್ಯ ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಭಾಗಿ ಇವೆ. ಇದೀಗ ಈ ಚುನಾವಣೆಗೆ ಕಾಂಗ್ರೆಸ್ ನಿಂದ ಸುಮಲತಾ ಸ್ಪರ್ಧೆ ಮಾಡ್ತಾರೆ ಅನ್ನೋದು ಮಾತುಗಳು ದಟ್ಟವಾಗಿ ಓಡಾಡುತ್ತಿವೆ. ಆದರೆ ಅದು ನಿಜನೋ ಸುಳ್ಳೊ ಗೊತ್ತಿಲ್ಲ. ಅಷ್ಟೆ ಅಲ್ಲ ಮಂಡ್ಯ ಜನ ಏನಂತಾರೋ ಅದಕ್ಕೆ ನಾನು ಬದ್ದ ಅಂತಲೂ ಸುಮಲತ ಹೇಳಿದ್ದಾರೆ. ಇದೀಗ ಈ ಬೆನ್ನಲ್ಲೇ ಈ‌ ನಟಿ ಆದಿಚುಂಚನ ಗಿರಿಗೆ ಭೇಟಿ ನೀಡಿದ್ದಾರೆ.

ಕಾಲಭೈರವನಿಗೆ ಪೂಜೆ

ಹೌದು, ಲೋಕಸಭಾ ಚುನಾವಣೆಗೆ ಸುಮಲತಾ ಸ್ಪರ್ಧೆ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಕಾಲಭೈರವನಿಗೆ ಪೂಜೆ ಮಾಡಿದ್ದಾರೆ ಎನ್ನಲಾಗಿದೆ‌. ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ ಸುಮಲತಾ ಅಂಬರೀಶ್. ಇನ್ನು ಇದೇ ವೇಳೆ ಸುಮಲತಾಗೆ ಪುತ್ರ ಅಭಿಷೇಕ್, ರಾಕ್​ಲೈನ್ ವೆಂಕಟೇಶ್, ದೊಡ್ಡಣ್ಣ ಸಾಥ್ ನೀಡಿದ್ದಾರೆ. ಶ್ರೀಕಾಲಭೈರವನ ಮೊರೆ ಹೋದ್ರೆ ಇಷ್ಟಾರ್ಥ ನೆರವೇರುತ್ತೆ ಎಂಬ ನಂಬಿಕೆ ಈ‌ ಕುಟುಂಬದ್ದು ಹಾಗಾಗಿ ಇಲ್ಲಿಗೆ ಭೇಟಿ‌ ನೀಡಿದ್ದಾರೆ.

ಮಂಡ್ಯದ ಸಂಬಂಧದ ಬಗ್ಗೆ ಸುಮಲತ ಮಾತು

ದೇವಸ್ಥಾನಕ್ಕೆ ಭೇಟಿ ನಂತರ ಸುಮಲತಾ ಮಾತನಾಡಿದ್ದಾರೆ. ಅಂಬರೀಶ್​ ಅವರು ಮಂಡ್ಯದೊಂದಿಗೆ ಹೊಂದಿದ್ದ ಗಾಢವಾದ ಸಂಬಂಧವನ್ನು ಉಳಿಸಿಕೊಳ್ಳಬೇಕು ಎಂಬ ಆಸೆ ತುಂಬಾ ಇದೆ. ಅದನ್ನು ಉಳಿಸಿಕೊಳ್ಳುತ್ತೇವೆ. ಜನರ ಪ್ರೀತಿ ವಿಶ್ವಾಸ ಉಳಿಸಿಕೊಳ್ಳುವ ತವಕ ಇದೆ. ಈಗಾಗಲೇ ನಮ್ಮ ಮೇಲೆ ಅಲ್ಲಿನ ಜನ ಇಟ್ಟಿರುವ ಪ್ರೀತಿ ಎಲ್ಲದಕ್ಕಿಂತ ಮಿಗಿಲಾದದ್ದು, ಅದನ್ನು ಹೇಗೆ ಉಳಿಸಿಕೊಳ್ಳುತ್ತೇವೆ ಎಂಬುದು ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ ಎಂದಿದ್ದಾರೆ.

ನೋಡುಗರ ಮನ ಸೆಳೆದ ‘ಸ್ಟ್ರೈಕರ್’ ಟ್ರೈಲರ್

#balkaninews #sandalwood #sumalathaambareesh

Tags