ಸುದ್ದಿಗಳು

ಕಣ್ಣೀರಿಟ್ಟ ಅದಿತಿ ಪ್ರಭುದೇವ!?

ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಎಲ್ಲಾ ನಾಲ್ವರು ಆರೋಪಿಗಳನ್ನು ಇಂದು ಬೆಳಿಗ್ಗೆ ಹೈದರಾಬಾದ್ ಪೊಲೀಸರು ಎನ್ಕೌಂಟರ್ ನಲ್ಲಿ ಹತ್ಯೆ ಮಾಡಿದ್ದಾರೆ. ವಿಶ್ವನಾಥ್ ಸಜ್ಜನರ್ ಅವರು, ಎನ್’ಕೌಂಟರ್ ನಡೆಸಿದ್ದ ಪೊಲೀಸ್ ತಂಡ ನೇತೃತ್ವ ವಹಿಸಿದ್ದರು.

ಈಗ ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ ಪ್ರಿಯಾಂಕ ರೆಡ್ಡಿಗೆ ಈ ನ್ಯಾಯ ಸಿಕ್ಕಂತಾಯ್ತು ಎಂದು ಸೋಷಿಯಲ್ ಮಿಡಿಯಾದಲ್ಲಿ  ವಿಡಿಯೋ ಹಂಚಿಕೊಂಡಿದ್ದಾರೆ.

“ಹೆಣ್ಣಾಗಿ ಹುಟ್ಟಿದ್ದಕ್ಕೆ ಭಯ ಶುರುವಾಗಿತ್ತು. ಹೆಣ್ಣಾಗಿ ಹುಟ್ಟಿದ್ದು ತಪ್ಪಾ? ಎಂಬ ಪ್ರಶ್ನೆ ನನ್ನ ಕಣ್ಣೆದುರು ಪದೇ ಪದೇ ಬರೋಕೆ ಶುರುವಾಗಿತ್ತು. ದೈಹಿಕ ಅತ್ಯಾಚಾರವಲ್ಲದೆ ಪ್ರತಿನಿತ್ಯ ಮಾನಸಿಕ ಅತ್ಯಾಚಾರ ನಡೆಯುತ್ತಿದೆ. ಏನು ಮಾಡಬೇಕು ಅಂತ ಗೊತ್ತಾಗಲ್ಲ. ನಮ್ಮ ಪ್ರಪಂಚದಲ್ಲಿ ಇರುವಂತಹ ಹೆಣ್ಣು ಹೆತ್ತಂತಹ ಪ್ರತೊಯೊಬ್ಬ ತಂದೆ ತಾಯಿಯ ಶಾಪ, ನೋವು ಕಣ್ಣಿರು, ಕೋಪ ಎಲ್ಲಾ ತಟ್ಟಿತು ಅಂತ ಅನ್ಸುತ್ತೆ. ಆ ಪಿಶಾಚಿಗಳನ್ನು ಅದೇ ಜಾಗದಲ್ಲಿ ಎನ್ ಕೌಂಟರ್ ಮಾಡಿದ್ದಾರೆ. ತುಂಬಾ ಖುಷಿಯಾಗ್ತಾ ಇದೆ. ಇಡೀ ಪೊಲೀಸ್ ತಂಡಕ್ಕೆ ಸೆಲ್ಯೂಟ್ ಮಾಡ್ತೀನಿ.” ಎಂದು ವಿಡಿಯೋ ಮೂಲಕ ಸಂತಸದಿಂದ ಕಂಬನಿ ಮಿಡಿಯುತ್ತಾ ಅದಿತಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ

ರಿಮೇಕ್ ಚಿತ್ರದ ಮೂಲಕ ಬಂದ ಶ್ರೀನಗರ ಕಿಟ್ಟಿ

#priyankareddy #adiriprabhudeva #sandalwood

Tags