ಸುದ್ದಿಗಳು

ವಿಭಿನ್ನ ಶೀರ್ಷಿಕೆಯ ಮೂಲಕ ಗಮನ ಸೆಳೆದ ಚಿತ್ರತಂಡ

‘ಎ ಫಿಲ್ಮ್ ಬೈ ಪ್ರವೀಣ್’, ಇದೇ ಸಿನಿಮಾ ಟೈಟಲ್

ಬೆಂಗಳೂರು.ಮಾ.20: ಚಂದನವನದಲ್ಲಿ ದಿನದಿಂದ ದಿನಕ್ಕೆ ಹೊಸಬರು ಹೊಸ ಹೊಸ ಪ್ರಯತ್ನಗಳ ಮೂಲಕ ಬರುತ್ತಿದ್ದಾರೆ. ಹಾಗೆಯೇ ಇಲ್ಲೊಂದು ಹೊಸಬರ ತಂಡವೊಂಡು ವಿಭಿನ್ನ ಟೈಟಲ್ ಮೂಲಕ ಸಿನಿಮಾರಂಗಕ್ಕೆ ಬರುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಹೌದು, ಇಲ್ಲೊಂದು ಚಿತ್ರದ ಹೆಸರಿದೆ, ಅದುವೇ ‘ಎ ಫಿಲ್ಮ್ ಬೈ ಪ್ರವೀಣ್..’ ಸಾಮಾನ್ಯವಾಗಿ ಸಾಮಾನ್ಯವಾಗಿ ಚಿತ್ರದ ಪೋಸ್ಟರ್ ನಲ್ಲಿ “ಎ ಫಿಲ್ಮ್ ಬೈ…’ ಎಂದು ನಿರ್ದೇಶಕರುಗಳು ತಮ್ಮ ಹೆಸರನ್ನು ಹಾಕಿಕೊಂಡಿರುವುದನ್ನು ನೋಡಿರುತ್ತೀರಿ. ಈಗ ಅದೇ ಚಿತ್ರದ ಶೀರ್ಷಿಕೆಯಾಗಿದೆ ಎನ್ನುವುದು ವಿಶೇಷ. ಹೌದು ‘ಎ ಫಿಲ್ಮ್ ಬೈ ಪ್ರವೀಣ್’ ಎಂಬ ಹೆಸರಿನ ಚಿತ್ರವೊಂದು ಸೆಟ್ಟೇರಲು ಅಣಿಯಾಗುತ್ತಿದೆ.

ಇನ್ನು ಚಿತ್ರದ ಬಗ್ಗೆ ಹೇಳಬೇಕು ಎಂದರೆ, ಇದೊಂದು ಸಂಪೂರ್ಣ ಹೊಸಬರ ತಂಡದವರಾಗಿದ್ದರೂ ಸಹ ಸಾಕಷ್ಟು ಅನುಭವ ಹೊಂದಿದ್ದಾರೆ. ಪ್ರವೀಣ್ ಎಂಬುವವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಕಥೆ, ಚಿತ್ರಕಥೆಯ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ಅಂದ ಹಾಗೆ ಈ ಚಿತ್ರವು ಸಿನಿಮಾದೊಳಗಿನ ಸಿನಿಮಾ ನಿರ್ದೇಶಕನ ಕಥೆಯನ್ನು ಒಳಗೊಂಡಿದ್ದು, ಅದು ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಸಾಗಲಿದೆ. ಹಾಗೆಯೇ ಹಾರರ್ ಅಂಶಗಳು ಸಹ ಚಿತ್ರದಲ್ಲಿದ್ದು, ಅದರೊಂದಿಗೆ ಹಾಸ್ಯವೂ ಇಲ್ಲಿ ಬೆರೆತಿದೆಯಂತೆ.

ಇನ್ನು ಚಿತ್ರಕ್ಕೆ “ರಾಂಗ್ ಕಾಲ್’ ಚಂದ್ರು ನಾಯಕರಾದರೆ, ಅವರಿಗೆ ಖುಷಿ ಎಂಬ ಹೊಸ ಪ್ರತಿಭೆ ನಾಯಕಿಯಾಗಿದ್ದಾರೆ.
ಚಿತ್ರದ ನಾಯಕ ತಾನೊಬ್ಬ ಚಿತ್ರ ನಿರ್ದೇಶಕ ಆಗಬೇಕೆಂಬ ಮನಸ್ಥಿತಿಯುಳ್ಳವನು, ಆ ಸಂದರ್ಭದಲ್ಲಿ ಅವನಿಗೊಂದು ‘ಎ ಫಿಲ್ಮ್ ಬೈ ಪ್ರವೀಣ್’ ಎಂಬ ಪುಸ್ತಕ ಸಿಗುತ್ತದೆ. ಆ ಪುಸ್ತಕ ಇಟ್ಟುಕೊಂಡು ತನ್ನ ಗೆಳೆಯರ ಜೊತೆ ನಿರ್ಮಾಪಕರ ಬಳಿ ಹೋಗಿ ಸಿನಿಮಾ ಮಾಡುವಂತೆ ಕೇಳುತ್ತಾನೆ. ಅಲ್ಲಿಂದ ಹೆಣ್ಣು ಪ್ರೇತಾತ್ಮದ ಕಾಟ ಶುರುವಾಗುತ್ತದೆ. ಹೀಗೆ ಮುಂದೇನು ಆಗಲಿದೆ ಎಂಬುದನ್ನು ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ನಿರ್ದೇಶಕರು ತೋರಿಸಲಿದ್ದಾರೆ.

ಇನ್ನು ಈ ಚಿತ್ರವು ಬರುವ ಏಪ್ರಿಲ್ 10 ರಂದು ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಮುಹೂರ್ತ ನೆರವೇರಲಿದೆ. ಉಳಿದಂತೆ ಚಿತ್ರದಲ್ಲಿ ರೋಬೋ ಗಣೇಶ್, ಕೆಂಪೇಗೌಡ, ಮಜಾ ಟಾಕೀಸ್ ಪವನ್ಕುಮಾರ್, ನಿರಂಜನ್ ಕುಮಾರ್ ದಾವಣಗೆರೆ, ದರ್ಶನ್ ಸೇರಿದಂತೆ ಇತರರು ನಟಿಸುತ್ತಿದ್ದಾರೆ.

ಟಾಪ್ ಮೋಸ್ಟ್ ಪವರ್ ಫುಲ್ ವುಮೆನ್ 50ರ ಪಟ್ಟಿಯಲ್ಲಿ ಪಿಗ್ಗಿ!

#Afilmbypraveen, #filmnews, #balkaninews #kannadasuddigalu ,#praveen

Tags