ಸುದ್ದಿಗಳು

15 ವರ್ಷಗಳ ಬಳಿಕ ಸ್ನೇಹಿತೆಯನ್ನು ಭೇಟಿ ಮಾಡಿದ ಖುಷಿಯಲ್ಲಿ ರೋರಿಂಗ್ ಸ್ಟಾರ್

ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲ್ಲಿ ಎನ್ನುವ ಸಾಲುಗಳು ಎಷ್ಟು ಅಕ್ಷರಶಃ ನಿಜವೇಂದರೇ, ನಮ್ಮ ಜೀವನದಲ್ಲಿ ಕೆಲವೊಮ್ಮೆ ಆ ಸಾಲುಗಳು ಬಹಳ ಪರಿಣಾಮ ಬೀರುತ್ತದೆ. ಹೌದು, ನಾವಿಂದು ಶ್ರೀಮುರುಳಿ ಹಾಗೂ ನಟಿ ಮಾನ್ಯ ನಾಯ್ಡುರವರ ಸ್ನೇಹದ ಬಗ್ಗೆ ಮಾತನಾಡುತ್ತಿದ್ದೇವೆ.Image may contain: 2 people, people smiling, people standing, sky, cloud, ocean and outdoor

2004ರಲ್ಲಿ ತೆರೆಕಂಡ ಶ್ರೀಮುರಳಿ ಹಾಗೂ ಮಾನ್ಯ ನಾಯ್ಡು ಅಭಿನಯದ ‘ಶಂಭು’ ಚಿತ್ರ ತೆರೆಕಂಡಿತ್ತು. ಈ ಚಿತ್ರದಲ್ಲಿ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದ ಇವರಿಬ್ಬರ ಜೋಡಿ ಪ್ರೇಕ್ಷಕರಿಗೆ ಮೋಡಿಮಾಡಿತ್ತು. ಇವರಿಬ್ಬರು ಕಲಾವಿದರಿಗಿಂತ ಹೆಚ್ಚಾಗಿ ಒಳ್ಳೆಯ ಸ್ನೇಹಿತರಾಗಿದ್ದಾರೆ. 2004ರಲ್ಲಿ ಶುರುವಾದ ಇವರಿಬ್ಬರ ಪಯಣ 2019ರಲ್ಲಿಯೂ ಕೂಡ ಹಸಿರಾಗಿಯೇ ಇದೆ.Image may contain: 2 people, people smiling, food and indoor

ಹೌದು, ಸತತ ಸಿನಿಮಾಗಳಲ್ಲಿ ನಿರತರಾಗಿರುವ ಶ್ರೀಮುರುಳಿರವರು ಬಿಡುವು ಮಾಡಿಕೊಂಡು ನಟಿ ಹಾಗೂ ಸ್ನೇಹಿತೆಯಾಗಿರುವ ಮಾನ್ಯರವರನ್ನು ಇತ್ತೀಚೆಗಷ್ಟೇ ಅಮೇರಿಕಾದಲ್ಲಿ ಭೇಟಿಯಾಗಿದ್ದಾರೆ. ಇಷ್ಟೇ ಅಲ್ಲದೇ ಇವರಿಬ್ಬರ ಸ್ನೇಹಕ್ಕೆ ಇದೀಗ 15 ವರ್ಷಗಳ ಸಂಭ್ರಮ. ಸದ್ಯ ಮಾನ್ಯ ತಮ್ಮ ಕುಟುಂಬದವರೊಂದಿಗೆ ಅಮೇರಿಕಾದಲ್ಲಿ ವಾಸಿಸುತ್ತಿದ್ದು, ಇದೀಗ ಶ್ರೀಮುರುಳಿ ಮಾನ್ಯರವರ ಕುಟುಂಬದವರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದ್ದಾರೆ. ಇಷ್ಟೇ ಅಲ್ಲದೇ ಭೇಟಿ ಮಾಡಿದ ಕೆಲವೊಂದಿಷ್ಟು ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಾನ್ಯ ಹಂಚಿಕೊಂಡಿದ್ದಾರೆ.

Image may contain: 4 people, including Veerû B SriMurali, people smiling, people sitting

Image may contain: 4 people, including Veerû B SriMurali, people smiling, people standing

ಶ್ರೀ ಮುರಳಿ ಪತ್ನಿ ಎದುರೇ ಸಿಹಿಮುತ್ತು ನೀಡಿದ್ದು ಯಾರು?

#VidyaSriMurali #VidyaSriMuraliinstagram #sriimurali #ManyaNaidu #ManyaNaiduinstagram #ManyaNaiduandsriimurali

 

Tags