ಸುದ್ದಿಗಳು

ಮತ್ತೊಮ್ಮೆ ಕಮಾಲ್ ಮಾಡಲು ಒಂದಾಯಿತು ಈ ಜೋಡಿ…!!!

ಮೂರನೇ ಬಾರಿಗೆ ಒಂದಾಗುತ್ತಿದೆ ‘ಮಠ’ , ‘ಎದ್ದೇಳು ಮಂಜುನಾಥ’ ಜೋಡಿ. ಈ ಬಾರಿ ಭರ್ಜರಿ ಪ್ರೇಕ್ಷಕರಿಗೆ ರಸದೌತಣ ಗ್ಯಾರಂಟಿ

ಈಗಾಗಲೇ ಎರಡು ಚಿತ್ರಗಳ ಮೂಲಕ ಪ್ರೇಕ್ಷಕರಿಗೆ ಭರ್ಜರಿ ರಸದೌತಣ ನೀಡಿದ್ದ ಜೋಡಿ, ಮೂರನೇಯ ಬಾರಿಗೆ ಒಂದಾಗುತ್ತಿದೆ.

ಬೆಂಗಳೂರು, ಆ.22: ನವರಸನಾಯಕ ನಟ ಜಗ್ಗೇಶ್ ನಿಜಕ್ಕೂ ಒಂಥರ ವಿಭಿನ್ನ ನಟ. ಸಿನಿಮಾ ಅಷ್ಟೇ ಅಲ್ಲದೆ ರಾಜಕೀಯದಲ್ಲೂ ಮುಂಚೂಣಿಯಲ್ಲಿದ್ದಾರೆ. ಈಗಾಗಲೇ ಬಹುಕಾಲದಿಂದಲೂ ನಟನೆಯೇ ಸರ್ವಸ್ವ ಅಂದುಕೊಂಡಿರುವ ಈ ನಟ ಇಂದಿಗೂ ಬಣ್ಣದ ರಂಗದಿಂದ ದೂರವಾಗಿಲ್ಲ. ಈಗಾಗಲೇ ಅನೇಕ ಚಿತ್ರಗಳ ಮೂಲಕ ಜನ ಮನ ಗೆದ್ದಿರುವ ಈ ನಟ ಇತ್ತೀಚೆಗೆ “ತೋತಾಪುರಿ” ಅನ್ನುವ ಸಿನಿಮಾ ಕೂಡ ಘೋಷಣೆ ಮಾಡಿದ್ದಾರೆ.

ತೋತಾಪುರಿ

ಹೌದು, ನವರಸ ನಾಯಕ ಮಾಡದಿರುವ ಪಾತ್ರಗಳೇ ಇಲ್ಲ. ಭಿನ್ನ ವಿಭಿನ್ನ ರೀತಿಯ ಪಾತ್ರಗಳನ್ನು ಮಾಡಿ ಜನ ಮನ ಗೆಲ್ಲುತ್ತಿದ್ದಾರೆ. ಆಗಿನ ಕಾಲದ ದೊಡ್ಡ ನಟರಿಂದ ಈಗಿನ ಕಾಲದ ನಟರೆಲ್ಲರೊಂದಿಗೆ ಜೊತೆಗಿರುವ ಇರುವ ನಟ ಜಗ್ಗೇಶ್ ಸಾಮಾಜಿಕ ಕೆಲಸಗಳಲ್ಲೂ ಭಾಗಿಯಾಗಿದ್ದಾರೆ.ಈಗಾಗಲೇ ಅದೆಷ್ಟೋ ಸಿನಿಮಾಗಳನ್ನ ಮಾಡಿರುವ ಈ ನಟ ಸದ್ಯ ರಿಯಾಲಿಟಿ ಶೋ ಜಡ್ಜ್ ಕೂಡ ಆಗಿದ್ದಾರೆ. ಸದ್ಯ ‘ತೋತಾಪರಿ’ ಅನ್ನುವ ಸಿನಿಮಾ ಮುಹೂರ್ತ ಮಾಡಿಕೊಂಡು ಇದೀಗ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಇದೀಗ ಇದರೊಂದಿಗೆ ಇನ್ನೊಂದು ಸಿನಿಮಾ ಮಾಡುವ ಚಿಂತನೆ ಕೂಡ ಇದೆ.

ಮೂರನೇ ಬಾರಿಗೆ ಒಂದಾದ ‘ಮಠ’ ಜೋಡಿ

ಗುರುಪ್ರಸಾದ್ ಹಾಗೂ ಜಗ್ಗೇಶ್ ಅವರ ಜೋಡಿಯಲ್ಲಿ ಬಂದಿದ್ದ ‘ಮಠ’ ಹಾಗೂ ‘ಎದ್ದೇಳು ಮಂಜುನಾಥ್’ ಚಿತ್ರಗಳು ಚಿತ್ರರಂಗಕ್ಕೆ ತಿರುವು ಕೊಟ್ಟ ಸಿನಿಮಾಗಳು. ಈಗ ಮತ್ತೊಮ್ಮೆ ಮೂರನೇಯ ಬಾರಿಗೆ ಈ ಜೋಡಿ ಒಂದಾಗುತ್ತಿದೆ.

ಮಠ-2 ಅಥವಾ ಎದ್ದೇಳು ಮಂಜುನಾಥ-2

ಈ ಜೋಡಿಯ ಮುಂದಿನ ಚಿತ್ರಕ್ಕೆ ‘ಮಠ 2’ ಅಥವಾ ‘ಮಂಜುನಾಥ್ 2’ ಎಂಬ ಹೆಸರನ್ನು ಇಡಲಾಗುತ್ತದೆ ಎಂಬ ಗುಮಾನಿ ಹಬ್ಬಿದೆ. ಅದೇನೆ ಇದ್ದರೂ ಈ ಹೆಸರಿನ ಸಿನಿಮಾ ಬಂದರೆ ಅಭಿಮಾನಿಗಳಲ್ಲಿ ಮತ್ತಷ್ಟು ನಿರೀಕ್ಷೆ ಹೆಚ್ಚಾಗುವುದಂತೂ ಗ್ಯಾರಂಟಿ.

Tags