ಸುದ್ದಿಗಳು

ಎಬಿಸಿಯಿಂದ ಅನುಮೋದನೆ ಪಡೆದುಕೊಂಡ ’ಏಜೆಂಟ್ಸ್ ಆಫ್ S.H.I.E.L.D.’

ಹಾಲಿವುಡ್ ನ ಬಹುನಿರೀಕ್ಷಿತ ಚಿತ್ರ

ನವೆಂಬರ್, 19: ಎ.ಬಿ.ಸಿ ನೆಟ್ವರ್ಕ್ ‘ಎಸ್.ಹೆಚ್.ಐ.ಇ.ಎಲ್.ಡಿ. ಆಫ್ ಏಜೆಂಟ್ಸ್’ ನ ಏಳನೇ  ಸೀಸನ್ ಗೆ ಆರಂಭದಲ್ಲೇ ಅನುಮೋದನೆ ನೀಡಿರುವುದರಿಂದ ಮಾರ್ವೆಲ್ ಅಭಿಮಾನಿಗಳು ಬಹಳ ಉತ್ಸುಕರಾಗಿದ್ದಾರೆ.

ಅಮೆರಿಕನ್ ಸೂಪರ್ ಹೀರೋ ನಾಟಕದ ತಯಾರಕರು ಅಧಿಕೃತವಾಗಿ ಟ್ವಿಟರ್ ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. “ಈ ಬೇಸಿಗೆಯಲ್ಲಿ ನೀವು ಮಾರ್ವೆಲ್ ನ # ಏಜೆಂಟ್ಸ್ ಆಫ್ S.H.I.E.L.D. ನ ಸೀಸನ್ 6 ಅನ್ನು ವೀಕ್ಷಿಸುತ್ತಿದ್ದೀರಿ. ಇನ್ನು ಮುಂದೆ 7ನೇ ಸೀಸನ್ ನ ಪ್ರದರ್ಶನವನ್ನು ನೋಡಲು ಸಿದ್ಧರಾಗಿರಿ” ಎಂದು ಬರೆದುಕೊಂಡಿದ್ದಾರೆ.

‘ಏಜೆಂಟ್ಸ್ ಆಫ್ S.H.I.E.L.D.’  ನ 7ನೇ ಸರಣಿ ಪ್ರದರ್ಶನಕ್ಕೆ ಸಿದ್ಧವಾದ ಮಾರ್ವೆಲ್ಸ್

ಡೆಡ್ಲೈನ್ ಪ್ರಕಾರ, ಸರಣಿಯ ಏಳನೇ ಸೀಸನ್ ನಲ್ಲಿ 13 ಸಂಚಿಕೆಗಳನ್ನು ಒಳಗೊಂಡಿರುತ್ತದೆ. ಆರನೇ ಸೀಸನ್ ನ ಪ್ರದರ್ಶನ ನಡೆಯುತ್ತಿರುವ ಸಂದರ್ಭದಲ್ಲೇ 7ನೇ ಸೀಸನ್ ನ ಪ್ರಥಮ ಪ್ರದರ್ಶನ ನಡೆಸಲು ಯೋಜಿಸಲಾಗಿದೆ.

‘ಏಜೆಂಟ್ಸ್ ಆಫ್ S.H.I.E.L.D.’ ನಲ್ಲಿ ಮಿಂಗ್-ನಾ ವೆನ್, ಕ್ಲೋಯ್ ಬೆನ್ನೆಟ್, ಇಯಾನ್ ಡೆ ಕೀಸ್ಟೆಕರ್, ಎಲಿಜಬೆತ್ ಹೆನ್ಸ್ಟ್ರಿಡ್ಜ್, ಹೆನ್ರಿ ಸಿಮ್ಮನ್ಸ್, ನಟಾಲಿಯಾ ಕಾರ್ಡೊವಾ-ಬಕ್ಲಿ ಮತ್ತು ಜೆಫ್ ವಾರ್ಡ್ ಪಾತ್ರ ವರ್ಗದಲ್ಲಿ ಇದ್ದಾರೆ.

ಜಾಸ್ ವೆಡನ್, ಜೆಡ್ ವೆಡನ್ ಮತ್ತು ಮೌರಿಸ್ಸಾ ಟ್ಯಾಂಚರೋನ್ ಅವರು ಈ ಸರಣಿಯನ್ನು ಸಹ-ರಚನೆ ಮಾಡಿದ್ದಾರೆ. ಜೆಫ್ರಿ ಬೆಲ್ ಮತ್ತು ಜೆಫ್ ಲೋಬ್ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಇದನ್ನು ಎಬಿಸಿ ಸ್ಟುಡಿಯೋಸ್ ಮತ್ತು ಮಾರ್ವೆಲ್ ಟೆಲಿವಿಷನ್ ಎಬಿಸಿಗಾಗಿ ತಯಾರಿಸಿದೆ.

Tags