ಸುದ್ದಿಗಳು

ಕದ್ದು ಮುಚ್ಚಿ ಮದುವೆಯಾದ್ರಾ? ‘ಅಗ್ನಿಸಾಕ್ಷಿ’ ಸೀರಿಯಲ್ ಬೆಡಗಿ!!?!!

ಮನೆಮಂದಿಯೆಲ್ಲರ ಅಚ್ಚುಮೆಚ್ಚಿನ ಧಾರಾವಾಹಿ ’ಅಗ್ನಿಸಾಕ್ಷಿ’.. ಈ ಧಾರಾವಾಹಿ ಎಷ್ಟೇ ಬೋರ್ ಆದ್ರೂ ಸರಿ, ಮುಂದೇನಾಯ್ತು ನೋಡೇ ಬಿಡೋಣ ಎಂದು ಸೀರಿಯಲ್ ಪ್ರೇಮಿಗಳು ಕಾಯುತ್ತಿರುತ್ತಾರೆ.. ಅಗ್ನಿಸಾಕ್ಷಿ ಧಾರಾವಾಹಿಯ ಮೇಲೆ ವೀಕ್ಷಕರಿಗೆ ಹೆಚ್ಚು ಪ್ರೀತಿ. ಒಂದು ದಿನ ಮಿಸ್ ಆದ್ರೆ, ಅಂದೇ ರಾತ್ರಿ ಮರುಪ್ರಸಾರ ಆಗುವ ಸಂಚಿಕೆಯನ್ನ ನೋಡುತ್ತಾರೆ. ಅಷ್ಟರ ಮಟ್ಟಿಗೆ ಸೀರಿಯಲ್ ಮೋಡಿ ಮಾಡಿದೆ.ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಹೊಸ ಕಥೆ ಆರಂಭವಾಗಿದೆ. ಏನದು ಅಂತೀರಾ ಇಲ್ಲಿದೆ ಮಾಹಿತಿ ಮುಂದೆ ಓದಿ..

ಈಗ ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಪ್ರಮುಖ ಆಕರ್ಷಣೆ ಅಂಜಲಿ.. ಅಂಜಲಿ ಹಾಗೂ ಆಕೆಯ ಸ್ನೇಹಿತರು ತನ್ನ ಸ್ನೇಹಿತೆಗೆ ಮದುವೆ ಮಾಡಿಸಲೆಂದು ಯಾರೂ ಇಲ್ಲದ ನಿರ್ಜನ ಪ್ರದೇಶಕ್ಕೆ ಬರುತ್ತಾರೆ.. ಅಲ್ಲಿಗೆ ಅಂಜಲಿ ಸ್ನೇಹಿತೆಯನ್ನು ಹುಡುಕಿಕೊಂಡು ಗೂಂಡಾಗಳು ಬರುವ ಸಂದರ್ಭ ..ಆ ಗೂಂಡಾಗಳು ಆ ಹುಡುಗಿ ಎಲ್ಲಿ ಎಂದು ಪ್ರಶ್ನಿಸುತ್ತಾರೆ.. ಇನ್ನು ಪ್ರೀತಿಸಿ ಮದುವೆಯಾಗಬೇಕಿದ್ದ ಹುಡುಗ-ಹುಡುಗಿ ಬಂದಿರುವುದಿಲ್ಲ. ಅವರ ಬದಲಾಗಿ ಅಂಜಲಿ ಹಾಗೂ ಮದುವೆಯಾಗಬೇಕಿದ್ದ ಹುಡುಗನ ಸ್ನೇಹಿತ ಹಸೆಮಣೆ ಏರಿ, ತಾಳಿ ಕಟ್ಟಿಸಿಕೊಳ್ಳುವ ಸನ್ನಿವೇಶ ಎದುರಾಗುತ್ತದೆ ..

ಇನ್ನು ಗೂಂಡಾಗಳು ಕುತಂತ್ರಿ ಚಂದ್ರಿಕನಾ ಕಡೆಯವರಾಗಿದ್ದು, ಇದು ಚಂದ್ರಿಕನ ಹೊಸ ತಂತ್ರವೇ ? ಅಂಜಲಿಗೆ ತೊಂದರೆ ಕೊಡುವ ಉದ್ದೇಶವೇ? ಅಂಜಲಿ ಮದುವೆಯಾಗಿರುವುದನ್ನು ಮನೆಯವರಿಗೆ ಹೇಗೆ ತಿಳಿಸುತ್ತಾಳೆ? ಇದೆಲ್ಲವೂ ತಿಳಿಯ ಬೇಕಾದರೆ ಮುಂದಿನ ಸಂಚಿಕೆಯಲ್ಲಿ ಅಗ್ನಿಸಾಕ್ಷಿ ಧಾರಾವಾಹಿ ನೋಡಲೇಬೇಕು..

ಟಾಲಿವುಡ್ ನಲ್ಲಿ ಶುರುವಾಯ್ತು ಪೂಜಾ ಹೆಗಡೆ ಹವಾ

#sandalwood #agnisakshi #agnisakshiserial #agnisakshicolorskannada

Tags