ಸುದ್ದಿಗಳು

ಸಸಿಗಳನ್ನು ನೆಟ್ಟು ವಿಭಿನ್ನವಾಗಿ ಹುಟ್ಟು ಹಬ್ಬ ಆಚರಿಸಿಕೊಂಡ ಐಂದ್ರಿತಾ ರೈ

ಪತ್ನಿಗೆ ಸಾಥ್ ನೀಡಿದ ಪತಿ ದಿಗಂತ್

ಬೆಂಗಳೂರು.ಏ.16: ಚಂದನವನದ ನಟಿ ಐಂದ್ರಿತಾ ರೈ ರಿಗೆ ಇಂದು ಜನುಮದಿನದ ಸಂಭ್ರಮ. ಇಂದು 34 ನೇ ವಸಂತಕ್ಕೆ ಕಾಲಿಟ್ಟ ಅವರು, ಪತಿ ದಿಗಂತ್ ಜೊತೆ ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಹೌದು, ಇಂದು ಕಾಲೇಜು ಆವರಣದಲ್ಲಿ ಸಸಿಗಳನ್ನು ನೆಟ್ಟು ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಮೂಲಕ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ ಐಂದ್ರಿತಾ. ಹಾಗೆಯೇ ಸಸಿಗಳನ್ನು ನೆಡಲು ಪತ್ನಿಗೆ ಪತಿ ದಿಗಂತ್ ಸಾಥ್ ನೀಡಿದ್ದಾರೆ. ಸದ್ಯ ಈ ದಂಪತಿಗಳು ಸಸಿ ನೆಡುತ್ತಿರುವ ಪೋಟೋಗಳನ್ನು ಟ್ವಿಟರ್ ಖಾತೆಯಲ್ಲಿ ಫೋಸ್ಟ್ ಮಾಡಿದ್ದಾರೆ.

ಇನ್ನು ಪ್ರಾಣಿ, ಪಕ್ಷಿ ಮತ್ತು ಪರಿಸರದ ಬಗ್ಗೆ ಕಾಳಜಿ ಹೊಂದಿರುವ ಐಂದ್ರಿತಾ, ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರು ಇಡುವ ಮೂಲಕ ಪ್ರಾಣಿಗಳ ದಾಹ ತೀರಿಸುವ ಪ್ರಯತ್ನ ಮಾಡುತ್ತಾರೆ. ಇದೀಗ ಸಸಿಗಳನ್ನು ನೆಡುವ ಮೂಲಕ ಪರಿಸರದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

ಮದುವೆಯ ನಂತರ ಐಂದ್ರಿತಾ ನಟನೆಯಿಂದ ದೂರವಾಗಿದ್ದರು. ಇದೀಗ ಅವರ ನಟನೆಯ ‘ಗರುಡ’ ಸಿನಿಮಾ ರಿಲೀಸ್ ಆಗಬೇಕಿದೆ. ಕನ್ನಡದಂತೆಯೇ ಹಿಂದಿ ಚಿತ್ರರಂಗದಲ್ಲೂ ಬ್ಯೂಸಿಯಾಗಿರುವ ಈ ಪಾರಿಜಾತಳಿಗೆ ಜನ್ಮ ದಿನದ ಶುಭಾಶಯಗಳು.

ಕುಂದಾಪುರದ ಬೆಡಗಿಯ ಬಣ್ಣದ ಲೋಕ

#aindritharai-birthday-balkaninews #aindritharai- #birthday- #balkaninews #filmnews, #kannadasuddigalu, #birthday, #diganth

Tags