ಸುದ್ದಿಗಳು

ಪತ್ನಿ ವಿರುದ್ದ ಟ್ವಿಟರ್ ನಲ್ಲಿ ದೂರು ನೀಡಿದ ಅಭಿಶೇಕ್ ಬಚ್ಚನ್

ಬಾಲಿವುಡ್ ನ ಹಾಟ್ ಬ್ಯೂಟಿಫುಲ್ ಕಪಲ್  ಅಭಿಷೇಕ್ ಬಚ್ಚನ್ ಹಾಗೂ ಐಶೂ . ಒಂದು ಮಗುವಿನ ತಾಯಿಯಾದರೂ ಇನ್ನೂ ಅದೇ ಚಾರ್ಮ್ ಉಳಿಸಿಕೊಂಡಿದ್ದಾಳೆ ಐಶೂ. ಈಗ ಅಭಿಶೇಕ್ ಅವರು ತಮ್ಮ ಪತ್ನಿ ಐಶೂ ವಿರುದ್ದ  ಟ್ವಿಟರ್ ನಲ್ಲಿ ದೂರು ನೀಡಿದ್ದಾ ರಂತೆ ಅದು ಯಾಕಂತೀರಾ? ಅದು ಬ್ರೋಕೊಲಿ ಡಿಶ್ ಒಂದರ ಕುರಿತಾಗಿ ಟ್ವೀಟರ್ ನಲ್ಲಿ ಅಭಿಮಾನಿಗಳಿಗೆ ದೂರು ನೀಡಿದ್ದಾರೆ.

ಕೆಲ ದಿನಗಳ ಹಿಂದೆ ಬ್ರೋಕೊಲಿ ಡಿಶ್ ಬಗ್ಗೆ ಅಭಿಷೇಕ್  ಅವರು ಟ್ವೀಟ್ ಮಾಡಿ ಯಾಕೆ ಬ್ರೊಕೊಲಿ ಡಿಶ್ ತಯಾರಿಸಬೇಕು? ಅದನ್ನು ಯಾರು ಇಷ್ಟಪಡ್ತಾರೆ ? ಎಂದು ಹೇಳಿಕೊಂಡಿದ್ದರು. ಇದನ್ನು ನೋಡಿದ ನಟಿ ಐಶ್ವರ್ಯ ರೈ ಬಚ್ಚನ್ ಅವರು ಅಭಿಷೇಕ್ ಬಚ್ಚನ್  ಅವರಿಗೆ ಬ್ರೊಕೊಲಿ ಡಿಶ್ ಮಾಡಿ ತಿನ್ನಿಸಿದ್ದಾರಂತೆ.

ಅಭಿಷೇಕ್ ಬಚ್ಚನ್ ಅವರು ಟ್ವೀಟರ್ ನಲ್ಲಿ  ನನ್ನ ಹಳೆ ಪೋಸ್ಟ್ ನೋಡಿರುವ ಪತ್ನಿ ಸೇಡು ತೀರಿಸಿಕೊಂಡಿದ್ದಾರೆಂದು ಟ್ವಿಟ್ ಮಾಡಿ ಪತ್ನಿಯ ಬಗ್ಗೆ ಅಭಿಮಾನಿಗಳಲ್ಲಿ ದೂರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಭಿಮಾನಿಗಳು . ಪತ್ನಿ ಮಾಡಿದ್ದನ್ನು ಸುಮ್ಮನೆ ತಿನ್ನಿ ಎಂದು ಸಲಹೆ ನೀಡಿದ್ದಾರೆ. ಟ್ವಿಟರ್ ನಲ್ಲಿ ದೂರು ನೀಡಿದ ಅಭಿಮಾನಿಗಳ ಸಲಹೆಯನ್ನು ಕೇಳುವಂತಾಗಿದೆ .

Tags