ಸುದ್ದಿಗಳು

ಪ್ಲಾಪ್ ಚಿತ್ರ ನೀಡುತ್ತಿರುವ ‘ಐಶು’ ಗೆ ಕೋಟಿ ಸುರಿಯಲು ಹಿಂದೇಟು ಹಾಕುತ್ತಿದ್ದಾರಾ ನಿರ್ಮಾಪಕರು??!

ಮುಂಬೈ, ಸೆ.12: ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಬಚ್ಚನ್ ಆರಾಧ್ಯ ಬಚ್ಚನ್ ಗೆ ಜನ್ಮ ನೀಡಿದ ಬಳಿಕ ಆಕೆಯ ಕಮ್ ಬ್ಯಾಕ್ ಗಾಗಿ ಕಾತುರದಿಂದಕಾಯುತ್ತಿದ್ದ ಕೋಟ್ಯಾಂತರ ಅಭಿಮಾನಿಗಳಿಗೆ 2015ರಲ್ಲಿ ಐಶು ಮತ್ತೆ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಂಡು ರಂಜಿಸುವ ಯತ್ನ ಮಾಡಿದ್ದರು. ಸಂಜಯ್ ಗುಪ್ತಾ ಅವರ ‘ಜಝ್ಬಾ’ ಚಿತ್ರದ ಮೂಲಕ ಕಮ್ ಬ್ಯಾಕ್ ಆದರೂ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಮ್ಯಾಜಿಕ್ ಮಾಡುವಲ್ಲಿ ಸೋತು ಹೋಯಿತು. ಇದಾದ ಬಳಿಕ ಒಮುಂಗ್ ಕುಮಾರ್ ಅವರ ಸರ್ಬ್ಜಿತ್ ಚಿತ್ರದಲ್ಲಿ ನಟಿಸಿದರೂ ಇದು ಕೂಡ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸೋತು ಹೋಯಿತು.ಭಾರಿ ಸುದ್ದಿ ಮಾಡಿದ ‘ಫನ್ನೆ ಖಾನ್’ ಸಿನಿಮಾ ಕೂಡ ಪ್ರೇಕ್ಷಕನನ್ನು ಇಂಪ್ರೆಸ್ ಮಾಡುವಲ್ಲಿ ಎಡವಿತು. ಈ ನಡುವೆ ಐಶು “ಹೂ ಕೌನ್ ತಿ” ಚಿತ್ರದಲ್ಲಿ ನಟಿಸುವುದು ಬಹುತೇಕ ಖಚಿತವಾಗಿತ್ತು. ಆದರೆ ಸಾಲು ಸಾಲು ಸೋಲುಗಳನ್ನು ನೀಡುತ್ತಿರುವ ಐಶು ಬದಲಿಗೆ,  ಇದೀಗ ಬಿಪಾಷ ಬಸು ನಟಿಸುವುದು ಬಹುತೇಕ ಖಚಿತವಾಗಿದೆ.

ಐಶ್ವರ್ಯ ರೈ ಬಚ್ಚನ್ ಕಮ್ ಬ್ಯಾಕ್ ಚಿತ್ರಗಳು ಕೆಲಸ ಮಾಡುತ್ತಿಲ್ಲ

ಐಶ್ವರ್ಯ ರೈ ಬಚ್ಚನ್ ಸಂಭಾವನೆ ಕೋಟಿಯಲ್ಲಿದ್ದು, ಆಕೆ ನೀಡುವ ಪ್ಲಾಪ್ ಚಿತ್ರಗಳಿಗೆ ಅಷ್ಟೊಂದು ಪ್ರಮಾಣದ ದುಡ್ಡು ಸುರಿಯುವುದರಲ್ಲಿ ಅರ್ಥವಿಲ್ಲ ಎಂಬುದು ನಿರ್ಮಾಪಕರ ಅಂಬೋಣ ಎನ್ನಲಾಗುತ್ತಿದೆ. ಒಂದು ಮೂಲಗಳ ಪ್ರಕಾರ ಐಶ್ವರ್ಯ ರೈ ಬಚ್ಚನ್ ಕಮ್ ಬ್ಯಾಕ್ ಚಿತ್ರಗಳು ಕೆಲಸ ಮಾಡುತ್ತಿಲ್ಲ. ಆಕೆ ಮೊದಲಿನಂತೆ ಗ್ಲಾಮರ್ ಆಗಿ ಕಾಣಿಸದೇ ಇರುವುದು ಕೂಡ ಇದಕ್ಕೆ ಕಾರಣ ಎಂಬ ಮಾತುಗಳನ್ನು ಸಿನಿಪಂಡಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಫನ್ನೆ ಖಾನ್’ ಚಿತ್ರದಲ್ಲಿ ಆಕೆ ಏಕಾಂಗಿತನವನ್ನು ವ್ಯಕ್ತಪಡಿಸುವಲ್ಲಿ ವಿಫಲವಾಗಿದ್ದಾಳೆ. ಚಿತ್ರದಲ್ಲಿ ಭಾವನೆಗಳಿಗೆ ಹೆಚ್ಚು ಮೌಲ್ಯಗಳಿದ್ದರೂ ಐಶು ಅದನ್ನು ಪ್ರೇಕ್ಷಕನಿಗೆ ಉಣಬಡಿಸುವಲ್ಲಿ ವಿಫಲರಾಗಿದ್ದಾರೆ ಎನ್ನುವುದು ಸಿನಿಮಾ ವಿಮರ್ಶಕರ ಮಾತು.ಸದ್ಯಕ್ಕೆ ಐಶ್ವರ್ಯ ರೈ  ಬಚ್ಚನ್ ಅನುರಾಗ್ ಕಶ್ಯಪ್ ಅವರ ‘ಗುಲಾಬ್ ಜಾಮೂನ್’ ಚಿತ್ರದಲ್ಲಿ ನಟಿಸಲಿದ್ದು, ಅಭಿಶೇಕ್ ಬಚ್ಚನ್, ಐಶು ಗೆ ಜೋಡಿಯಾಗುತ್ತಿರುವುದು ಮತ್ತೊಂದು ವಿಶೇಷ.

Tags

Related Articles