ಸುದ್ದಿಗಳು

ದೇವರಕೊಂಡ ಜೊತೆ ನಟಿ ಲವ್..?

ಹೈದರಾಬಾದ್,ಮೇ.15: ವಿಜಯ್ ದೇವರಕೊಂಡ ಜೊತೆ ನಟಿ ಐಶ್ವರ್ಯ ರಾಜೇಶ್ ಲವ್ ನಲ್ಲಿ ಬಿದ್ದಿದ್ದಾರೆ ಎನ್ನಲಾಗಿತ್ತು. ಈ ವಿಚಾರವಾಗಿ ಇದೀಗ ನಟಿ ಸ್ಪಷ್ಟನೆ ನೀಡಿದ್ದಾರೆ..

ವಿಜಯ್ ದೇವರಕೊಂಡ ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ಸಕ್ಕತ್ ಸೌಂಡ್ ಮಾಡಿದ ನಟ. ರಾತ್ರೋ ರಾತ್ರಿ ಫ್ಯಾನ್ ಫಾಲೋಯಿಂಗ್ ಹೆಚ್ಚಿಸಿಕೊಂಡ ನಟ ವಿಜಯ್ ದೇವರಕೊಂಡ ಇಂದು ಸ್ಟಾರ್ ನಟರಲ್ಲಿ ಒಬ್ಬರಾಗಿದ್ದಾರೆ. ಸದ್ಯ ಈ ನಟನ ಜೊತೆ ಅನೇಕ ನಟಿಯರ ಹೆಸರು ತಳುಕಾಕಿಕೊಂಡಿದ್ದು ಇದೆ. ಇದೀಗ ನಟಿ ಐಶ್ವರ್ಯ ರಾಜೇಶ್ ಹೆಸರು ತಳುಕಾಕಿಕೊಂಡಿದೆ.

Related image

ನಟಿ ಸ್ಪಷ್ಟನೆ

ಹೌದು, ನಟ ವಿಜಯ್ ದೇವರ ಕೊಂಡ ಹಾಗೂ ಐಶ್ವರ್ಯ ರಾಜೇಶ್ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂತೆಲ್ಲಾ ಗಾಸಿಪ್ ಗಳು ಓಡಾಡಿದ್ದವು. ಈ ಗಾಸಿಪ್ ಗಳ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ ಈ ನಟ ನಟಿ. ಆದರೆ ಇದ್ಯಾವಾಗ ವಿಕೋಪಕ್ಕೆ ಹೋಯ್ತೋ ಅನಿವಾರ್ಯವಾಗಿ ಬಾಯಿ ಬಿಚ್ಚುವ ಪರಿಸ್ಥಿತಿ ಎದುರಾಗಿದೆ. ಸದ್ಯ ಈ ಬಗ್ಗೆ ನಟಿ ಐಶ್ವರ್ಯ ರಾಜೇಶ್ ಟ್ವಿಟ್ಟರ್ ಮೂಲಕ ಉತ್ತರಿಸಿದ್ದಾರೆ.

ಟ್ವಿಟ್ಟರ್ ನಲ್ಲಿ ಏನಿದೆ..?

ಈ ಬಗ್ಗೆ ನಟಿ ಐಶ್ವರ್ಯ ನಗು ಬರಿಸುವ ರೀತಿಯಲ್ಲಿ ರೂಮರ್ಸ್ ಹರಡುವವರಿಗೆ ಉತ್ತರ ನೀಡಿದ್ದಾರೆ. ನನ್ನ ಪ್ರೀತಿ ವಿಚಾರವಾಗಿ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಗಾಳಿಮಾತುಗಳು ಕೇಳಿಬರುತ್ತಿವೆ. ದಯವಿಟ್ಟು ಆ ಹುಡುಗ ಯಾರು ಅನ್ನೋದನ್ನು ನನಗೂ ತಿಳಿಸಿ. ಆತ ಯಾರು ಎಂದು ತಿಳಿದುಕೊಳ್ಳಬೇಕೆಂಬ ಉತ್ಸಾಹ ನನಗೂ ಇದೆ. ದಯವಿಟ್ಟು ಇಂತಹ ಗಾಳಿ ಮಾತು, ಸುಳ್ಳು ಸುದ್ದಿಗಳನ್ನು ಹರಡಬೇಡಿ. ಹಾಗೇನಾದರೂ ಪ್ರೀತಿ, ಮದುವೆ ವಿಚಾರ ಇದ್ದರೆ ನಾನೇ ಹೇಳುತ್ತೇನೆ. ಮದುವೆ ಅಥವಾ ಪ್ರೀತಿ ವಿಷಯವ್ನನು ತಿಳಿಸುವ ಮೊದಲ ವ್ಯಕ್ತಿ ನಾನೇ. ಒಂಟಿ ಜೀವನವನ್ನು ತುಂಬಾ ಸಂತೋಷವಾಗಿ ಕಳೆಯುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ ಐಶ್ವರ್ಯಾ

ಕನ್ನಡದ ಹಿರಿಯ ನಟ ಹಾಗೂ ವಿಲನ್ ಭರತ್ ರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ ಡಿ-ಬಾಸ್ ದರ್ಶನ್

#aishwaryarajesh #tollywood #vijaydeverkonda #rumours

Tags