ಸುದ್ದಿಗಳು

ಐಶೂ ನೆಚ್ಚಿನ ನಟ ಯಾರು ಗೊತ್ತಾ?

ಐಶ್ವರ್ಯ ರೈ ಬಚ್ಚನ್ ಮತ್ತು ಮಗಳು ಆರಾಧ್ಯಾ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಏಂಜಲ್ ನಂತೆ ಫ್ರಾನ್ಸ್ ನಲ್ಲಿ ಕಂಗೊಳಿಸಿದರು. ಇಬ್ಬರೂ ಫ್ರಾನ್ಸ್ನಲ್ಲಿ ಎಲ್ಲರ ಗಮನವನ್ನು ಸೆಳೆದರು, ಅಷ್ಟೇ ಅಲ್ಲದೆ ಐಶೂ  ಇನ್ಸ್ಟಾಗ್ರಾಂ ಖಾತೆಯಲ್ಲಿ ಅಭಿಷೇಕ್ ಬಚ್ಚನ್ ಜೊತೆ ನಡೆದಾಡಿದ ಮೊದಲ ಕ್ಯಾನೆಸ್ ಮೆಮೊರಿಯನ್ನು  ಹಂಚಿಕೊಂಡರು, ದಂಪತಿಗಳು ರೆಡ್ ಕಾರ್ಪೆಟ್ ನಲ್ಲಿ  ಬಿಳಿ ಬಟ್ಟೆಯಲ್ಲಿ ಒಟ್ಟಿಗೆ ನಡೆದರು. ಅಭಿಷೇಕ್ ಐಶೂ ವಿವಾಹವಾಗಿ ದಶಕಗಳೇ ಕಳೆದಿವೆ. ‘ಗುರು’, ‘ಉಮ್ರಾವ್ ಜಾನ್’, ‘ರಾವನ್’ ಮತ್ತು ‘ಕುಚ್ ನಾ ಕಹೋ’ ನಂತಹ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಐಶ್ವರ್ಯಾ ತನ್ನ ಮಗಳಿಗೆ ಅಲಂಕಾರ ಮಾಡುವುದೆಂದರೆ ಇಷ್ಟವಂತೆ ಮತ್ತು ಮಾಜಿ ವಿಶ್ವ ಸುಂದರಿಗೆ ತನ್ನ ನೆಚ್ಚಿನ ನಟ ಯಾರು ಎಂದು ಕೇಳಿದಾಗ, ತನ್ನ ಹಬ್ಬಿ ಅಭಿಷೇಕ್ ಎಂದು ಉತ್ತರಿಸಿದ್ದಾರೆ. ಇದರಿಂದ ಐಶೂಗೆ ತಮ್ಮ ಪತಿಯ ಮೇಲೆ ಪ್ರೀತಿ ಎಷ್ಟಿದೆ ಎಂದು ತಿಳಿಯುತ್ತೆ.

 

Tags