ಸುದ್ದಿಗಳು

ದೀಪಿಕಾ ಪಡುಕೋಣೆ , ಅಜಯ್ ದೇವಗನ್ ಜೊತೆ ಯಾಕೆ ನಟಿಸುತ್ತಿಲ್ಲ, ಗೊತ್ತೇ..?

ಬಾಲಿವುಡ್ ಜನಪ್ರಿಯ ಕಲಾವಿದರು

ಮುಂಬೈ, ಡಿ.15: ಅಜಯ್ ದೇವಗನ್ ಪ್ರಸಿದ್ಧ ಬಾಲಿವುಡ್ ನಟ. ಇವರ ಜೊತೆಗೆ ನಟಿಸಿದ ನಟಿಯರು ಅನೇಕ. ಇನ್ನೂ ಅನೇಕ ನಟಿಯರು ಅಜಯ್ ದೇವಗನ್ ಜೊತೆಗೂಡಿ ನಟಿಸಬೇಕೆಂಬ ಗುರಿ ಇಟ್ಟುಕೊಂಡಿದ್ದಾರೆ. ಆದರೆ..?

ದೀಪಿಕಾ ಪಡುಕೋಣೆ ಸಹ ಬಾಲಿವುಡ್ ನ ಪ್ರಸಿದ್ಧ ನಟಿ. ಆದರೆ ದೀಪಿಕಾ, ಅಜಯ್ ದೇವಗನ್ ಜೊತೆಗೆ ಕೆಲಸ ಮಾಡಲು ಇಷ್ಟಪಡಲ್ಲ. ಒಂದು ಮೂಲಗಳ ಪ್ರಕಾರ ಬಾಲಿವುಡ್ ಚಲನಚಿತ್ರಗಳಲ್ಲಿ ದೀಪಿಕಾ ಪಡುಕೋಣೆ, ಅಜಯ್ ದೇವಗನ್ ಜೊತೆಗೆ ಕೆಲಸ ಮಾಡದಿರಲು ಒಂದು ಕಾರಣವಿದೆ. ಅಜಯ್ ದೇವಗನ್ ಆಕ್ಷನ್ ಹಾಗೂ ರೋಮ್ಯಾಂಟಿಕ್ ಸಿನಿಮಾಗಳಲ್ಲಿ ಎತ್ತಿದ ಕೈ. ಇವರು ಇಂತಹ ಚಲನಚಿತ್ರಗಳ ಮೂಲಕ ಹೆಚ್ಚಿನ ಪ್ರಶಂಸೆಯನ್ನು ಪಡೆಯುತ್ತಾರೆ. ಈ ವೇಳೆ ಇವರ ಜೊತೆಗೆ ನಟಿಸಿದ ನಟಿಗೆ ಅಜಯ್ ದೇವಗನ್ ಗೆ ಸಿಕ್ಕಿದ ಕ್ರೇಡಿಟ್ ಸಿಗಲ್ವಂತೆ. ಇದೇ ಕಾರಣಕ್ಕಾಗಿ ದೀಪಿಕಾ ಪಡುಕೋಣೆ, ಅಜಯ್ ದೇವಗನ್ ಅವರೊಂದಿಗೆ ಕೆಲಸ ಮಾಡಲು ಬಯಸುವುದಿಲ್ಲ. ದೀಪಿಕಾರ ಈ ಆಲೋಚನೆ ಸರಿಯೋ..? ತಪ್ಪೋ..? ಈ ವಿಷಯದ ಬಗ್ಗೆ ಸಿನಿ ವೀಕ್ಷಕರು ಹೇಳಬೇಕಷ್ಟೇ.

 

Tags