ಸುದ್ದಿಗಳು

ಚಂದನವನಕ್ಕೆ ಮತ್ತೊಂದು ‘ಹುಲಿ’ಯ ಆಗಮನ

ಅಜಯ್ ರಾವ್ ನಟಿಸುತ್ತಿರುವ ‘ತಾಯಿಗೆ ತಕ್ಕ ಮಗ’ ಚಿತ್ರವು ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದ್ದು, ಸದ್ಯದಲ್ಲಿಯೇ ತೆರೆಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.

ಬೆಂಗಳೂರು, ಆ. 07: ಚಂದನವನದಲ್ಲಿ ಈಗಾಗಲೇ ಟೈಗರ್ (ಹುಲಿ) ಅಂತ ಪ್ರಭಾಕರ್ , ಮರಿ ಟೈಗರ್ ಅಂತ ವಿನೋದ್ ಪ್ರಭಾಕರ್ ಅವರನ್ನು ಕರೆಯುತ್ತಾರೆ. ಇದನ್ನು ಹೊರತು ಪಡಿಸಿದರೆ ಯಶ್ ‘ರಾಜಾ ಹುಲಿ’ ಆದರು, ಕಿಶೋರ್ ‘ಹುಲಿ’ ಆದರು, ನಿರ್ಮಾಪಕ ಕೆ. ಮಂಜು ಅವರ ಸುಪುತ್ರ ‘ಪಡ್ಡೆ ಹುಲಿ’ಯಾಗುತ್ತಿದ್ದಾರೆ. ಇವರ ಸಾಲಿನಲ್ಲಿ ಈಗ ಅಜಯ್ ರಾವ್ ಕೂಡ ಸೇರಿಕೊಂಡಿದ್ದಾರೆ.

ಒಳಗೂ ಹೊರಗೂ ಹುಲಿ

ನಟ ಅಜಯ್ ರಾವ್ ಅವರು ಹುಲಿಯ ಬಗ್ಗೆ ಸಿನಿಮಾ ಮಾಡುತ್ತಿಲ್ಲ. ಬದಲಿಗೆ ತಮ್ಮನ್ನು ತಾವೇ ಹುಲಿಗೆ ಹೋಲಿಸಿಕೊಂಡು, ದೊಡ್ಡ ಹುಲಿಯ ಪೋಟೋವೊಂದರ ಮುಂದೆ ಕುರ್ಚೆ ಮೇಲೆ ಕುಳಿತು, ಮೀಸೆ ತಿರುವುತ್ತಾ ಪೋಟೋ ತೆಗೆಸಿಕೊಂಡು ಅದನ್ನು ಪೇಸ್ ಬುಕ್ ನಲ್ಲಿ ಪ್ರಕಟಿಸಿದ್ದಾರೆ. “ಹುಲಿ ನನ್ನೊಳಗೂ ಇದೆ, ನನ್ನ ಹೊರಗೂ ಇದೆ. ಹುಲಿಯಂತೆ ಬದುಕಿ, ಹುಲಿಯಂತೆ ಹೋರಾಡಬೇಕು. ಸದ್ಯ ಈ ಹುಲಿ ಅಂದ್ರೆ ನಾನು..! ಇಷ್ಟರಲ್ಲಿಯೇ ನಾನೂ ದಾಳಿ ಮಾಡುತ್ತೀನಿ.. ನಾನು ಅಭಿನಯಿಸುತ್ತಿರುವ ‘ತಾಯಿಗೆ ತಕ್ಕ ಮಗ’ ಸದ್ಯದಲ್ಲಿಯೇ ತೆರೆಗೆ ಬರಲಿದೆ’ ಎಂದಿದ್ದಾರೆ.

ತಾಯಿಗೆ ತಕ್ಕ ಮಗ

ಶಶಾಂಕ್ ನಿರ್ದೇಶನದ ‘ತಾಯಿಗೆ ತಕ್ಕ ಮಗ’ ಚಿತ್ರದ ಚಿತ್ರೀಕರಣ ಕೊನೆಗೊಂಡಿದ್ದು, ಸದ್ಯ ಚಿತ್ರದ ಅಂತಿಮ ಕೆಲಸಗಳು ಬಿರುಸಿನಿಂದ ಸಾಗಿದೆ. ಇನ್ನು ಈ ಚಿತ್ರದಲ್ಲಿ ಅಜಯ್ ​ರಾವ್ ತಾಯಿ ಪಾತ್ರದಲ್ಲಿ ಸುಮಲತಾ ಅಂಬರೀಷ್ ಹಾಗೂ ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದಾರೆ. ಚಿತ್ರಕ್ಕೆ ‘ಚಮಕ್’ ಖ್ಯಾತಿಯ ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಎಲ್ಲವೂ ಅಂದುಕೊಂಡಂತಾದರೆ ಗಣೇಶ ಹಬಕ್ಕೆ ಚಿತ್ರವು ತೆರೆಗೆ ಬರಲಿದೆ.

Tags

Related Articles