ಸುದ್ದಿಗಳು

ಅಜಯ್ ರಾವ್ ಎದೆಯ ಮೇಲೆ ಪುಟ್ಟ ಕಂದಮ್ಮ!!

ತಂದೆ ಹಾಗೂ ಮಗಳ ನಡುವೆ ಇರುವ ಬಾಂಧವ್ಯ ಅಷ್ಟಿಷ್ಟಲ್ಲ

ಬೆಂಗಳುರು,ಡಿ.6: ಚಂದನವನದ ಖ್ಯಾತ ನಟ ಅಜಯ್ ರಾವ್ ಅವರ ಪತ್ನಿ ಸ್ವಪ್ನ ರಾವ್ ಹೆಣ್ಣು ಮಗುವಿಗೆ ಕಳೆದ ತಿಂಗಳು ಜನ್ಮ ನೀಡಿದ್ದಾರೆ. ಇನ್ನು ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು..

ಕಂದಮ್ಮನ ಜೊತೆ ಕಾಲ ಕಳೆಯುತ್ತಿರುವ ಅಜಯ್

ಇತ್ತೀಚೆಗೆಯಷ್ಟೇ ತಮ್ಮ ಮುದ್ದು ಮಗಳಿಗೆ ‘ಚೆರಿಶ್ಮಾ’ ಎಂದು ನಾಮಕರಣ ಕೂಡ ಮಾಡಿದ್ದರು ಇದೀಗ ತಂದೆಯಾದ ಖುಷಿಯಲ್ಲಿರುವ  ಅಜಯ್ ರಾವ್ ಅವರು ತಮ್ಮ ಪುಟ್ಟ ಕಂದಮ್ಮನ ಜೊತೆ ಕಾಲ ಕಳೆಯುತ್ತಿದ್ದಾರೆ.. ಚೆರಿಶ್ಮಾಳಿಗೆ ಇನ್ನೂ ಒಂದು ತಿಂಗಳು ತುಂಬಿಲ್ಲ. ಸದ್ಯ ತಂದೆಯ ಎದೆಯ ಮೇಲೆ ಮುದ್ದು ಕಂದಮ್ಮ ಮಲಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ..

ಇದೊಂದು ಅದ್ಭುತ ಅನುಭವ

“ತಂದೆ ಹಾಗೂ ಮಗಳ ನಡುವೆ ಇರುವ ಬಾಂಧವ್ಯ ಅಷ್ಟಿಷ್ಟಲ್ಲ.. ಇನ್ನು ನನ್ನ ಮುದ್ದು ಮಗಳು ಬೆಡ್ ಮೇಲೆ ಮಗಿಸಿದರೆ ಅಳುತ್ತಾಳೆ.. ತಂದೆಯ ಎದೆಯ ಮೇಲೆ ಮಲಗಿಸಿದರೆ ಸುಖವಾಗಿ ಮಲಗುತ್ತಾಳೆ..ನಿಜವಾಗಿಯೂ ತಂದೆಯಾಗಿ ಇದೊಂದು ಅದ್ಭುತ ಅನುಭವ” ಎಂದು ಬರೆದುಕೊಂಡಿದ್ದಾರೆ

 

Tags