ಸುದ್ದಿಗಳು

ಅವಾಂತರ ಸೃಷ್ಟಿ ಮಾಡಿದ ಅಜಿತ್ ಕಟೌಟ್

ಅಜಿತ್ ರ ಬಹು ದೊಡ್ಡ ಕಟೌಟ್ ನೆಲಕ್ಕುರುಳಿ ಅವಾಂತರ ಸೃಷ್ಟಿ ಮಾಡಿದೆ.

ಚೆನೈ, ಜ.11: ದೊಡ್ಡ ದೊಡ್ಡ ನಟರ ಸಿನಿಮಾಗಳು ಬಿಡುಗಡೆಯಾಗುತ್ತವೆ ಅಂದರೆ ಕಟೌಟ್‌ ಗಳ ಕಲರವ ಇದ್ದೇ ಇರುತ್ತದೆ. ಆಳೆತ್ತರದ ಕಟೌಟ್‌ ಗಳನ್ನು ಹಾಕಿ ಅದಕ್ಕೆ ಹಾರಾ ತುರಾಯಿ ಹಾಕಿ ಹಾಲಿನ ಅಭಿಷೇಕ ಮಾಡೋದು ಕೂಡ ಇಂದು ನಿನ್ನೆಯ ಸಂಪ್ರದಾಯವಲ್ಲ. ಬಹು ವರ್ಷಗಳಿಂದಲೂ ತಮ್ಮ ನೆಚ್ಚಿನ ನಟರಿಗೆ ಈ ರೀತಿ ಅಲಂಕಾರ ಮಾಡೋದು ಕೂಡ ಕಾಮನ್ ಆಗಿ ಬಿಟ್ಟಿದೆ. ಇದೀಗ ಇದೇ ರೀತಿ ಮಾಡಲು ಹೋಗಿ ಅವಾಂತರ ಸೃಷ್ಟಿಯಾಗಿದೆ.

ಬಿದ್ದ ಕಟೌಟ್

ನಿನ್ನೆ ನಟ ಅಜಿತ್ ರ ‘ವಿಶ್ವಾಸಂ’ ಸಿನಿಮಾ ಬಿಡುಗಡೆಯಾಗಿತ್ತು. ಸಾಮಾನ್ಯವಾಗಿ ಚಿತ್ರಮಂದಿರದ ಮುಂದೆ  ಅಭಿಮಾನಿಗಳ ದಂಡು ಕೂಡ ಹಾಗೇ ಇದೆ. ತಮಿಳುನಾಡಿನ ಥಿರಕೈಳೂರ್ ಪಟ್ಟಣದಲ್ಲಿದ ಥೀಯೇಟರ್‌ ನಲ್ಲಿ ಸಿನಿಮಾ ಬಿಡುಗಡೆಗೆ ಅಂತಾ ಆಳೆತ್ತರದ ಕಟೌಟ್ ಹಾಕಿ ಹೂವು ಹಾಲಿನ ಅಭಿಷೇಕ ನಡೆಯುತ್ತಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಈ ಕಟೌಟ್ ನೆಲಕ್ಕುರುಳಿದೆ.

ಐದಾರು ಮಂದಿಗೆ ಗಾಯ

ಇನ್ನು ಬಿದ್ದ ಕಟೌಟ್‌ ಗಳನ್ನು ಮೇಲೆತ್ತುವಾಗ ಮತ್ತೆ ನೆಲಕ್ಕೆ ಬಿದ್ದ ಕಟೌಟ್‌ ನಿಂದಾಗಿ ಐದಾರು ಅಭಿಮಾನಿಗಳಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಅಂತಾ ಮೂಲಗಳು ತಿಳಿಸಿವೆ.

#kollywood #kollywoodmovies #ajith #ajithmovies #balkaninews

Tags