ಸುದ್ದಿಗಳು

ವಿಡಿಯೋ ಸಾಂಗ್ ರೂಪದಲ್ಲಿ ಅಕ್ಕಮಹಾದೇವಿಯವರ ವಚನ

ನೆನೆವೆನಯ್ಯ.. ವಚನದ ಸಾಲುಗಳು ಇದೀಗ ವಿಡಿಯೋ ರೂಪದಲ್ಲಿ

ಬೆಂಗಳೂರು,ಡಿ.9: ಇದೀಗ ಇಂಟರ್ ನೆಟ್ ಫ್ರೀ ಯಾಗಿ ಸಿಗುತ್ತಿರುವುದರಿಂದ ಯುವ ಜನತೆ ಮೊಬೈನ್ ನಲ್ಲಿ ಮುಳುಗಿ ಹೋಗಿರುತ್ತದೆ. ಹೀಗಾಗಿ ಈಗಿನ ಜನಾಂಗದವರನ್ನು ತಲುಪಲು ವಚನಗಳು ಡಿಜಿಟಿಲ್ ರೂಪವನ್ನು ಪಡೆಯುತ್ತಿವೆ. ಅವುಗಳ ಸಾಲಿಗೆ ‘ನೆನೆವೆನಯ್ಯ’ ವಚನ ಸೇರದೆ.

ಗಮನ ಸೆಳೆಯುವ ವಿಡಿಯೊ

ಅಕ್ಕ ಮಹಾದೇವಿ ರಚನೆಯ ‘ನೆನೆವೆನಯ್ಯ..’ ವಚನವು ಇದೀಗ ವಿಡಿಯೋ ಸಾಂಗ್ ರೂಪದಲ್ಲಿ ವಿಭಿನ್ನವಾಗಿ ಹೊರ ಬಂದಿದೆ. ಇತ್ತಿಚೆಗಷ್ಟೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಈ ಹಾಡು ಈಗಾಗಲೇ ಸಾವಿರಾರು ಜನರನ್ನು ತಲುಪಿದೆ.

ಸಮುದ್ರ ದಡದಲ್ಲಿ ಹೆಜ್ಜೆ ಹಾಕುವ ಯುವತಿ

ಪುಟ್ಟ ದಾರಿಯಿಂದ ಶುರುವಾಗುವ ಈ ವಿಡಿಯೋ ಹಾಡು ಸಮುದ್ರದ ದಡವನ್ನು ಸೇರುತ್ತದೆ. ಇಲ್ಲಿ ಕಾಡುಗಳ ನಡುವಿರುವ ಕಿರುದಾರಿಯಲ್ಲಿ ಯುವತಿಯೊಬ್ಬಳು ಹೆಜ್ಜೆ ಹಾಕುತ್ತಾ, ದೇಹವನ್ನು ಅಲಂಕರಿಸಿದ ಸರ, ಕಾಲ್ಗೆಜ್ಜೆಗಳನ್ನು ಕಳಚಿ ಕೊನೆಗೆ ನೆಮ್ಮದಿಯ ಹುಡುಕಾಟಕ್ಕಾಗಿ ಸಮುದ್ರ ತೀರ ಸೇರಿ ನೀರೊಳಗೆ ಒಂದಾಗುವಿಕೆ ಮತ್ತು ನೆಮ್ಮದಿಯ ತರಂಗಗಳನ್ನು ಹೊಮ್ಮುವುದು ಇಡೀ ವಿಡಿಯೋ ಸಾಂಗ್ ನ ಸಾರಾಂಶವಾಗಿದೆ.

ವಿಡಿಯೋ ಬಗ್ಗೆ

12 ನೇ ಶತಮಾನದ ಮಹಿಳಾ ವಚನಕಾರ್ತಿ ಅಕ್ಕ ಮಹಾದೇವಿಯವರು ತನ್ನ ಆರಾಧ್ಯ ದೈವ ಚೆನ್ನ ಮಲ್ಲಿಕಾರ್ಜುನಯ್ಯ ನವರನ್ನು ನೆನಪಿಸಿಕೊಂಡು ಈ ವಚನವನ್ನು ರಚಿಸಿದ್ದಾರೆ. ಈ ಸಾಲುಗಳಿಗೆ ರಾಮಕೃಷ್ಣ ಶಿಕಾರಿಪುರ ಎಂಬುವವರು ಸಂಗೀತ ನೀಡಿದ್ದು, ವಿನಯ್ ಭಾರಧ್ವಜ್ ಈ ವಿಡಿಯೋವನ್ನು ನಿರ್ದೇಶಿಸಿದ್ದಾರೆ. ಈ ಸಾಲುಗಳಿಗೆ ಇಂಚರಾ ರಾವ್ ಧ್ವನಿಯಾಗಿದ್ದಾರೆ.

ಇದೇ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ವಚನಗಳು ಡಿಜಿಟಲ್ ರೂಪವನ್ನು ಪಡೆಯಲಿವೆ. ಇದರಿಂದ ವಚನಗಳ ಸಾರ ಒಮ್ಮೆಲೆ ತಿಳಿಯುವುದಿಲ್ಲ ಎನ್ನುವವರಿಗೆ ಇಂತಹ ವಿಡಿಯೋಗಳು ಯುವ ಮನಸ್ಸುಗಳನ್ನು ಸೆಳೆಯುವುದರ ಜೊತೆಗೆ ಕನ್ನಡ ಸಾಹಿತ್ಯ ಎಷ್ಟು ಶ್ರೀಮಂತವಾಗಿದೆ ಎಂಬುದನ್ನು ತಿಳಿಸುತ್ತಾ ವಚನಗಳ ಸಾರವನ್ನು ತಿಳಿಸುತ್ತವೆ.

Tags