ಸುದ್ದಿಗಳು

ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ ಅಕ್ಷಯ್ ಕುಮಾರ್

ಮುಂಬೈ, ಜ.31:

ಪ್ರಧಾನಿ ನರೇಂದ್ರ ಮೋದಿಯವರ ಪರೀಕ್ಷಾ ಪೇ ಚರ್ಚಾ 2.0 ಕಾರ್ಯಕ್ರಮವೊಂದನ್ನು ಮಾಡಿದ್ದರು. ಈ ಕಾರ್ಯಕ್ರಮ ಬಹಳಷ್ಟು ಮೆಚ್ಚುಗೆಯಿಂದ ಕೂಡಿತ್ತು. ನೋಡಿದವರೆಲ್ಲಾ ಇಂತಹದ್ದೊಂದು ಕಾರ್ಯಕ್ರಮ ಬೇಕಿತ್ತು ಅಂತಾ ಹೇಳುತ್ತಿದ್ದರು. ಇದೀಗ ಈ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ನಟ ಅಕ್ಷಯ್ ಕುಮಾರ್.

ಮೋದಿಗೆ ಅಕ್ಷಯ್ ಮೆಚ್ಚುಗೆ

ಹೌದು, ಪರೀಕ್ಷೆಯ ಬಗ್ಗೆ ಆಯ್ದ ವಿದ್ಯಾರ್ಥಿಗಳೊಂದಿಗೆ ಮೋದಿಯವರು ಚರ್ಚೆ ನಡೆಸಿದ್ದರು. ಅಷ್ಟೇ ಅಲ್ಲ ವಿದ್ಯಾರ್ಥಿಗಳೊಂದಿಗೆ ಹಲವಾರು ಜೀವನದ ಪಾಠಗಳನ್ನು ಹೇಳಿದ್ದರು. ಈ ವಿಡಿಯೋ ನೋಡಿದ ನಟ ಅಕ್ಷಯ್ ಕುಮಾರ್ ಮೆಚ್ಚುಗೆ ವ್ಯಕ್ತ ಪಡಿಸಿದ್ದು, ಈ ವಿಚಾರವಾಗಿ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಟ್ವಿಟ್ಟರ್ ನಲ್ಲಿ ಏನಿದೆ..?

ಹೌದು, ಮೋದಿಯವರು ಮಾತನಾಡುವ ವಿಡಿಯೋ ತುಣುಕೊಂದನ್ನು ಹಾಕಿಕೊಂಡಿರುವ ನಟ ಅಕ್ಷಯ್ ಕುಮಾರ್, ಈ ಚರ್ಚೆಯಲ್ಲಿ ಕೆಲವೊಂದು ವಿಚಾರಗಳು ನನಗೂ ಸಂಬಂಧಪಡುತ್ತವೆ. ನಾನು ಶೈಕ್ಷಣಿಕವಾಗಿ ಉತ್ತಮರಾಗಿರಲಿಲ್ಲ. ಆದರೆ ದೇವರ ಆಶೀರ್ವಾದ, ಹೆತ್ತವರ ಆಶಿರ್ವಾದದಿಂದಾಗಿ ಸುಂದರ ಹಾಗೂ ಉತ್ತಮ ಜೀವನ ನಡೆಸುತ್ತಿದ್ದೇನೆ. ನಾನು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಹೇಳುವುದಿಷ್ಟೆ, ಪರೀಕ್ಷೆಯೇ ಜೀವನ ಅಲ್ಲ. ಅದಕ್ಕೂ ಮಿಗಿಲಾದ ಜೀವನ ಇದೆ ಅಂತಾ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಅಕ್ಷಯ್ ಕುಮಾರ್ ಫಿಟ್ನೆಸ್ ಸೀಕ್ರೇಟ್..!

#narendramoditwitter #akshaykumartwitter #akshaykumarandnarendramodi #balkaninews

Tags