ಸುದ್ದಿಗಳು

ಅಕ್ಷಯ್ ಕುಮಾರ್ ತನ್ನ ಪುತ್ರಿಯ ಮುಖವನ್ನು ಮರೆಮಾಚುವುದು ಯಾಕೆ..?

ಮುಂಬೈ, ಏ.23:

ಅಕ್ಷಯ್ ಕುಮಾರ್. ಬಾಲಿವುಡ್ ನ ‘ಕಿಲಾಡಿ’ ಖ್ಯಾತಿಯ ನಟ.‌ ಇವರು ಸಾರ್ವಜನಿಕ ಸಭೆ, ಸಮಾರಂಭ ಅಥವಾ ಇನ್ನಿತರ ಕಾರ್ಯಕ್ರಮಗಳಲ್ಲಿ ಪತ್ನಿ, ಪುತ್ರಿ ಜೊತೆಗೆ ಭಾಗವಹಿಸಿದಾಗ ಪುತ್ರಿಯ ಮುಖವನ್ನು ಮಾಧ್ಯಮದ ಮುಂದೆ ತೋರಿಸಲ್ಲ. ಕ್ಯಾಮರಾದಲ್ಲಿ ಪುತ್ರಿಯ ಮುಖ ಕಾಣದಂತೆ ತನ್ನ ಕೈಯನ್ನು ಪುತ್ರಿಯ ಮುಖಕ್ಕೆ ಅಡ್ಡ ಇಡುತ್ತಾರೆ. ಇದು ಯಾಕೆ ಅನ್ನುವುದು ಹೆಚ್ಚಿನವರ ಪ್ರಶ್ನೆ. ಇದಕ್ಕೂ ಒಂದು ಉತ್ತರ ಇದೆ.

ಹೌದು. ಬಾಲಿವುಡ್ ನಟ ಅಕ್ಷಯ್ ಕುಮಾರ್ ಪ್ರೀತಿಯ ಮಗಳ ಹೆಸರು ನಿತಾರಾ. ಈಕೆಯ ಭವಿಷ್ಯದ ಕುರಿತು ಅಕ್ಷಯ್ ಗೆ ಹೆಚ್ಚು ಕಾಳಜಿ‌‌. ಜೊತೆಗೆ ಅಕ್ಕಿ ತನ್ನ ಪುತ್ರಿಯನ್ನು ತನಗಿಂತ ಹೆಚ್ಚು ಪ್ರೀತಿಸುತ್ತಾರೆ. ತನ್ನ ಪುತ್ರಿಯ ಮೇಲೆ ಹೆಚ್ಚು ಪ್ರೀತಿ, ಕಾಳಜಿ ಇಟ್ಟುಕೊಂಡಿರುವ ಅಕ್ಕಿ ಸುಖಾಸುಮ್ಮನೇ ಮಗಳು ಮಾಧ್ಯಮಗಳಲ್ಲಿ ಟ್ರೋಲ್ ಆಗಲು ಇಷ್ಟಪಡಲ್ಲ. ಸದ್ಯ ಅಕ್ಷಯ್ ಕುಮಾರ್ ತನ್ನ ಪುತ್ರಿ ನಿತಾರಾಳ ಅಧ್ಯಯನದ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ. ಜೊತೆಗೆ ಆಕೆಯ ಮೇಲೆ ತಾನಿಟ್ಟ ಕನಸುಗಳನ್ನು ಪೂರೈಸಲು ಬಯಸಿದ್ದಾರೆ. ಅಕ್ಷಯ್ ಕುಮಾರ್ ತನ್ನ ಮಗಳ ಫೋಟೋಗಳನ್ನು ಮಾಧ್ಯಮ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಲು ಎಂದೂ ಬಯಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಕಾಳಜಿ, ಹಾರೈಕೆ ಹೀಗೆ ನಾನಾ ರಕ್ತ ಸಂಬಂಧಿ‌ ಕಾರಣಗಳಿಂದ ಅಕ್ಷಯ್ ಕುಮಾರ್ ತನ್ನ ಪುತ್ರಿ ನಿತಾರಾಳ ಮುಖವನ್ನು ಮಾಧ್ಯಮದ ಮುಂದೆ ತೋರಿಸುತ್ತಿಲ್ಲ. ಇದು ಅಚ್ಚರಿಯೂ ಹೌದು.

Image result for akshay kumar daughter

Image result for akshay kumar daughter nitara

ಚಿಂದಿ ಉಡಾಯಿಸಿದ ಸಲ್ಲು ಐದು ಅವತಾರಗಳನ್ನೊಳಗೊಂಡ ‘ಭಾರತ್’ ಟ್ರೇಲರ್

#balkaninews #nitaraakshaykumar #akshaykumardaughter #bollywood

Tags