ಸುದ್ದಿಗಳು

ಅಕ್ಷಯ್ ಕುಮಾರ್ ರ ಮಾಜಿ ಗೆಳತಿ ಎಲ್ಲಿದ್ದಾರೆ ಗೊತ್ತೆ…?

ಬಾಲಿವುಡ್ ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್

ಮುಂಬೈ, ನ.08: ನಟಿ ಆಯೀಶಾ ಜುಲ್ಕಾ 90 ರ ದಶಕದ ಖ್ಯಾತ ನಟಿ.‌ ಇವರು ನಟ ಅಮೀರ್ ಖಾನ್ ಅಭಿನಯದ ‘ಜೋ ಜೀತಾ ವೊಹಿ ಸಿಕಂದರ್’ ಚಿತ್ರದಲ್ಲಿ ಅಮೋಘವಾಗಿ ಅಭಿನಯಿಸಿದ್ದರು.

46 ವರ್ಷದ ನಟಿ ಆಯೀಷಾ ಒಂದೊಮ್ಮೆ ಅಕ್ಷಯ್ ಕುಮಾರ್ ರ ಗೆಳತಿಯಾಗಿದ್ದರು. ಮಾಧ್ಯಮದ ಮುಂದೆ ಅಷ್ಟಾಗಿ ಕಾಣಿಸಿಕೊಳ್ಳದ ನಟಿ ಆಯೀಶಾರ ಕೆಲವೊಂದು ಫೋಟೋಗಳು ಲೀಕ್ ಆಗಿವೆ.ಇನ್ನು ಈ ನಟಿ ಅಕ್ಷಯ್ ಕುಮಾರ್, ಅಮೀರ್ ಖಾನ್, ಅಜಯ್ ದೇವಗನ್ ಮತ್ತು ಸಲ್ಮಾನ್ ಖಾನ್ ಸೇರಿ ಹಲವಾರು ನಟರೊಂದಿಗೆ ನಟಿಸಿದ್ದಾರೆ. ‘ಪೇಹ್ಲ ನಶಾ’ ಖ್ಯಾತಿಯ ಈ ನಟಿ ಹಲವಾರು ವರ್ಷಗಳ ಹಿಂದೆ ನಟನೆಗೆ ಗುಡ್ ಬೈ ಹೇಳಿದ್ದರು. ಅದಾದ ನಂತರ ಹೊಸ ಹಿಂದಿ ಸಿನಿಮಾ ‘ಜೀನಿಯಸ್’ ಚಿತ್ರದಲ್ಲಿ ಇವರು ನಾಯಕಿ ತಾಯಿಯ ಪಾತ್ರದಲ್ಲಿ ನಟಿಸಿದ್ದರು. ಒಳ್ಳೆಯ ಸ್ಕ್ರಿಪ್ಟ್ ಇದ್ದರೆ ಮಾತ್ರ ಮುಂದೆ ಹೊಸ ಚಿತ್ರದಲ್ಲಿ ನಟಿಸುತ್ತೇನೆ ಎಂಬುದು ಈ ನಟಿಯ ಹೇಳಿಕೆ. ದೀರ್ಘಕಾಲದ ನಂತರ ನಟಿ ಆಯಿಶಾ ಜುಲ್ಕಾ ಮತ್ತೆ ಬಣ್ಣ ಹಚ್ಚಲು ಮನಸ್ಸು ಮಾಡಿದ್ದಾರೆ.

Tags