ಸುದ್ದಿಗಳು

ಅಕ್ಷಯ್ ಕುಮಾರ್ ಫಿಟ್ನೆಸ್ ಸೀಕ್ರೇಟ್..!

ಸದ್ಯ ತೆರೆ ಕಾಣಲು ಸಿದ್ದವಾಗಿರುವ 2.0 ಚಿತ್ರದಲ್ಲಿ ಖಡಕ್ ಪಾತ್ರದಲ್ಲಿ ಅಕ್ಷಯ್

ಮುಂಬೈ, ನ.13: ಬಾಲಿವುಡ್ ಆ್ಯಕ್ಷನ್ ಹೀರೋ ಅಕ್ಷಯ್ ಕುಮಾರ್ ಸದಾ ಫಿಟ್ ಆಗಿರುವ ಸೆಲೆಬ್ರಿಟಿ. ಹಾಗೆಯೇ ಪರ್ಸನಲ್ ಮತ್ತು ಪ್ರೊಫೆಷನಲ್ ಲೈಫ್ ಅನ್ನು  ಪರ್ಫೆಟ್ ಆಗಿ ಬ್ಯಾಲನ್ಸ್ ಮಾಡಿಟ್ಟುಕೊಳ್ಳುವವರು. ಕೆಲಸಕ್ಕೆ ಎಷ್ಟು ಪ್ರಾಮುಖ್ಯತೆ ನೀಡಬೇಕೋ ಅಷ್ಟೇ ಪ್ರಾಮುಖ್ಯತೆಯನ್ನು ತಮ್ಮ ವೈಯಕ್ತಿಕ ಜೀವನಕ್ಕೂ ನೀಡುತ್ತಾರೆ.ವಿಡಿಯೋ ಶೇರ್ ಮಾಡಿದ ಅಕ್ಷಯ್

ಭಾನುವಾರ ಮುಂಜಾನೆ ತಮ್ಮ ಮಗಳಾದ ನೇತ್ರಾಳೊಂದಿಗೆ ನಟ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಸ್ವಿಮ್ಮಿಂಗ್ ಪೂಲ್ ನಲ್ಲಿ ಮಗಳೊಂದಿಗೆ ಸ್ವಲ್ಪ ವರ್ಕ್ಔಟ್ ಮಾಡಿದ ವಿಡಿಯೋ ವನ್ನು ಇನ್ಸ್ಟಾ ಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ಮಕ್ಕಳು ಸದಾ ಸದೃಡ ಆರೋಗ್ಯದಿಂದಿರಬೇಕು. ಇತರರಿಗೆ ಮಾದರಿಯಾಗಬೇಕು.. ಸದಾ ಆಕ್ಟಿವ್ ಆಗಿರಬೇಕು.. ಅಂತಾ ಟ್ಯಾಗ್ಲೈನ್ ಹಾಕಿದ್ದಾರೆ.

 

View this post on Instagram

 

Kids tend to pick up what they see…start early and try to set a good example. Great parenting. Active kids. #FitIndia

A post shared by Akshay Kumar (@akshaykumar) on

2.0 ಚಿತ್ರದ ಬಗ್ಗೆ

ಅಕ್ಷಯ್ ಕುಮಾರ್ ಮುಂದಿನ ಚಿತ್ರ ‘ರೋಬೋ 2.0’ ನಲ್ಲಿ  ವಿಚಿತ್ರ ವೇಷದಲ್ಲಿ ಹಾಗೂ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಪೋಸ್ಟರ್ ಗಳಲ್ಲಿ ರಜನಿ-ಅಕ್ಕಿ ಫೋಟೋಗಳು ಮಿಂಚುತ್ತಿದ್ದು, ಅಭಿಮಾನಿಗಳ ಕಾತುರ ಹೆಚ್ಚಿಸಿದೆ. ಈ ಹಿಂದೆಯೂ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಕ್ಷಯ್ ಮತ್ತೊಮ್ಮೆ ಮತ್ತೊಮ್ಮೆ ನೆಗೆಟಿವ್ ಪಾತ್ರವನ್ನು ಮಾಡಿದ್ದಾರೆ.

Tags

Related Articles