ಸುದ್ದಿಗಳು

ಪ್ರೈವೇಟ್ ಫೋಟೋ ಲೀಕ್: ಕಮಲ್ ಹಾಸನ್ ಪುತ್ರಿ ಅಕ್ಷರಾ ಹಾಸನ್ ಪುಲ್ ಗರಂ..!!!

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ಅಕ್ಷರಾ ಹಾಸನ್ ರ ಖಾಸಗಿ ಫೋಟೋಗಳು

ಚೆನೈ, ನ.9: ತಮಿಳಿನ ಖ್ಯಾತ ನಟ-ನಿರ್ದೇಶಕ ಕಮಲ್ ಹಾಸನ್ ರ ಎರಡನೇ ಪುತ್ರಿ ಅಕ್ಷರಾ ಹಾಸನ್, ತಮ್ಮ ಖಾಸಗಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿದ್ದರ ಕುರಿತು ಅಸಮಾಧಾನ ತೋಡಿಕೊಂಡಿದ್ದಾರೆ.ಟ್ವೀಟ್ ಮಾಡಿದ ಅಕ್ಷರಾ

ಈ ಫೋಟೋಗಳನ್ನ ಯಾರೂ ಲೀಕ್ ಮಾಡಿದರು, ಹೇಗೆ ಮಾಡಿದರು ಎಂಬುದು ನನಗೆ ಗೊತ್ತಿಲ್ಲ. ಆದರೆ ಈ ಬಗ್ಗೆ ಸ್ವತಃ ಅಕ್ಷರಾ ಹಾಸನ್ ಟ್ವೀಟ್ ಮಾಡಿದ್ದಾರೆ.

“ನನ್ನ ಖಾಸಗಿ ಫೋಟೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿದ್ದವು. ಅವುಗಳನ್ನು ಯಾರು ಲೀಕ್ ಮಾಡಿದ್ದಾರೆಂಬುದು ನನಗೆ ತಿಳಿದಿಲ್ಲ. ಆದರೆ ಒಂದು ಹುಡುಗಿಯನ್ನು ಈ ರೀತಿ ಬಳಸಿಕೊಂಡಿರುವುದು ನಿಜಕ್ಕೂ ಬೇಸರದ ಸಂಗತಿ. ಕೆಲ ವಿಕೃತ ಮನಸ್ಸುಗಳ ಆಟಕ್ಕೆ ಈ ರೀತಿ ಬಲಿಯಾಗಿರುವುದನ್ನು ನಾನು ಅರಗಿಸಿಕೊಳ್ಳಲು ಸಾಧ್ಯವೇ ಇಲ್ಲ” ಎಂದಿದ್ದಾರೆ.

ಈ ಬಗ್ಗೆ ದೂರು ನೀಡಿದ್ದೇನೆ

“ಇತ್ತಿಚಿನ ದಿನಗಳಲ್ಲಿ #ಮಿಟೂ ಅಭಿಯಾನ ನಡೆಯುತ್ತಿದೆ. ಈ ನಡುವೆ ನನ್ನ ಖಾಸಗಿ ಫೋಟೋಗಳನ್ನು ವೈರಲ್ ಮಾಡಿ, ಜನರ ಮುಂದೆ ತಮ್ಮ ನಡತೆಯನ್ನು ತೋರಿಸಿಕೊಂಡಿದ್ದಾರೆ. ಇದರಿಂದಾಗಿ ನನಗೆ ಬಹಳ ನೋವಾಗಿದೆ. ಈಗಾಗಲೇ ಈ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ. ಸೈಬರ್ ಕ್ರೈಂ ಪೊಲೀಸರನ್ನ ಕೂಡ ಭೇಟಿ ಮಾಡಿದ್ದೇನೆ. ಇದಕ್ಕೆ ಕಾರಣವಾದವರನ್ನ ಸುಮ್ಮನೆ ಬಿಡುವುದಿಲ್ಲ. ಈಗಾಗಲೇ ಇದರ ಬಗ್ಗೆ ಮುಂಬೈ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇನೆ” ಎಂದು ಅಕ್ಷರಾ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

 

View this post on Instagram

 

@mumbaipolice @cybercrime_cell

A post shared by Akshara Haasan (@aksharaa.haasan) on

ಹಾಗಾದರೆ ಮುಂದೇನು..?

ಕೆಲ ದಿನಗಳ ಹಿಂದೆ ಅಕ್ಷರಾ ಹಾಸನ್ ಪ್ರೈವೇಟ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅವರು ಇದೀಗ  ಇನ್ ಸ್ಟಾಗ್ರಾಮ್ ಮತ್ತು ಟ್ವಿಟರ್ ನಲ್ಲಿ ಬರೆದುಕೊಂಡಿರುವುದನ್ನು ಗಮನಿಸಿದರೆ, ಈ ಫೋಟೋಗಳು ಅವರದ್ದೇ ಎಂದು ಖಚಿತಪಡಿಸಿದಂತಿದೆ. ಈ ಬಗ್ಗೆ ತನಿಖೆ ಮಾಡುತ್ತಿರುವ ಸೈಬರ್ ಕ್ರೈಂ ಪೊಲೀಸರು ಈ ಫೋಟೋಗಳನ್ನು ಅಪ್‍ಲೋಡ್ ಮಾಡಿದ್ಯಾರು ಎಂಬುದನ್ನು ಪತ್ತೆ ಹಚ್ಚಬೇಕಿದೆ.

Tags