ಸುದ್ದಿಗಳು

‘ಅಂದವಾದ’ ಹಾಡಿಗೆ ಧ್ವನಿಯಾದ ಆಲಾ ಬಿ ಬಾಲಾ

ಚಿತ್ರರಂಗಕ್ಕೆ ದಿನದಿಂದ ದಿನಕ್ಕೆ ಹೊಸಬರು ಹೊಸ ಹೊಸ ಯೋಜನೆ, ಯೋಚನೆಗಳ ಮೂಲಕ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅದರಂತೆ ಇಲ್ಲೊಂದು ಹೊಸಬರ ತಂಡವೊಂದರ ಮುಖದಲ್ಲಿ ಮಂದಹಾಸ ಮೂಡಿದೆ. ಅದಕ್ಕೆ ಕಾರಣ ಚಿತ್ರದ ಹಾಡುಗಳಿಗೆ ಸಿಗುತ್ತಿರುವ ಪ್ರತಿಕ್ರಿಯೆ.

ನಾವೀಗ ಹೇಳುತ್ತಿರುವುದು ‘ಅಂದವಾದ’ ಚಿತ್ರದ ಕುರಿತಂತೆ, ಸದ್ಯ ಬಿಡುಗಡೆಯಾಗಿರುವ ಈ ಚಿತ್ರದ ರೊಮ್ಯಾಂಟಿಕ್ ಹಾಡಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಹಾಡಿನ ಮೂಲಕ ಬಾಲಿವುಡ್ ಸಿಂಗರ್ ಶ್ರೇಯಾ ಘೋಷಾಲ್ ಮಾದರಿಯ ಸಿಂಗರ್ ಎಂದು ಜನಪ್ರಿಯರಾಗಿರುವ ಆಲಾ ಬಿ ಬಾಲಾ ಸ್ಯಾಂಡಲ್ ವುಡ್ ಗೆ ಎಂಟ್ರಿಯಾಗಿದ್ದಾರೆ.


ಜಯಂತ್ ಕಾಯ್ಕಿಣಿ ಬರೆದಿರುವ ‘ಎಂದೂ ಆಗಿಲ್ಲ ಹೀಗೆ’ ಎಂಬ ಸಾಲಿನ ಹಾಡಿಗೆ ಆಲಾ ಬಿ ಬಾಲಾ ಧ್ವನಿಯಾಗಿದ್ದಾರೆ. ಕೇರಳ ಮೂಲದ ಇವರು ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಗಳಿಸಿದವರು. ಅಲ್ಲದೇ ಸಂಗೀತ ಮಾಂತ್ರಿಕ ರೆಹಮಾನ್ ಸ್ಟುಡಿಯೋದಲ್ಲಿ ಗಾಯಕಿಯಾಗಿ ಗುರುತಿಸಿಕೊಂಡವರು.

ಇನ್ನು ಚಿತ್ರಕ್ಕೆ ವಿಕ್ರಮ್ ವರ್ಮನ್ ಮ್ಯೂಸಿಕ್ ಕಂಪೋಸ್ ಮಾಡಿದ್ದು. ಆಲಾ ಬಿ ಬಾಲಾ ಅವರೊಂದಿಗೆ ವಿಜಯ್ ಪ್ರಕಾಶ್ ಕೂಡಾ ಹಾಡಿದ್ದಾರೆ. ಈ ಹಾಡಿನಲ್ಲಿ ನಾಯಕ-ನಾಯಕಿಯ ಜೋಡಿ ವರ್ಕೌಟ್ ಆಗಿದ್ದು, ಹಾಡಿನಲ್ಲಿನ ರಮಣೀಯ ಸ್ಥಳಗಳು ನೋಡುಗರಿಗೆ ಕಣ್ಣನ್ನು ತಂಪು ಮಾಡುತ್ತಿವೆ. ಚಿತ್ರವನ್ನು ಮಧು ಜಿ ರಾಜ್ ಮತ್ತು ಹೆಚ್.ಸಿ.ಜಯ ಕುಮಾರ್ ಜಂಟಿಯಾಗಿ ನಿರ್ಮಿಸಿದ್ದು, ಚಲ ನಿರ್ದೇಶನ ಮಾಡಿದ್ದಾರೆ.

ಕೊನೆಗೂ ‘ಸಾಹೋ’ ಗೆ ಸಿಕ್ತು ಹೊಸ ರಿಲೀಸ್ ಡೇಟ್!!

#alabbala #singing #andavada #song #balkaninews #kannadafilm, #kannadamovie, #kannadanews, #kannadanewmovie, #kannadacine, #latestkannadamovie, #sandalwoodmovies

Tags