ಸುದ್ದಿಗಳು

ಟಾಲಿವುಡ್ ಗೆ ಜಿಗಿದ ನಿರ್ದೇಶಕ ಅಲೆಮಾರಿ ಸಂತೋಷ್!!

 

ಬೆಂಗಳೂರು,ಜ.17:

ಕನ್ನಡ ಚಿತ್ರ ನಿರ್ದೇಶಕರಾದ ಅಲೆಮಾರಿ ಸಂತೋಷ್,  ಈಗ ಟಾಲಿವುಡ್ ಹಾಗೂ ಕಾಲಿವುಡ್ ಗೆ ಜಿಗಿದಿದ್ದಾರೆ..  ಕಾಲೇಜ್ ಕುಮಾರ ಮತ್ತು ಇತ್ತೀಚಿನ ಚಿತ್ರವಾ, ವಿಕ್ಟರಿ ಸೀಕ್ವೆಲ್, ಟಾಲಿವುಡ್ ಗೆ ರಿಮೇಕ್ ಆಗಲಿದೆ. ಈ ಹಿಂದೆ ಕಾಲೇಜ್ ಕುಮಾರ ಚಿತ್ರಕ್ಕೆ ನಿರ್ಮಾಪಕರಾಗಿದ್ದ ಎಲ್ ಪದ್ಮನಾಭರೊಂದಿಗೆ ಕೈ ಜೋಡಿಸಲಿದ್ದಾರೆ.. ಇವರು ಹಿಂದೆ ಕಾಲೇಜ್ ಕುಮಾರದಲ್ಲಿ ಕೆಲಸ ಮಾಡಿದ್ದರು. ಇದೊಂದು ಯೂತ್ ಫುಲ್ ಕತೆಯಾಗಿದ್ದು ಸದ್ಯದಲ್ಲಿಯೇ ಸ್ಕ್ರಿಪ್ಟ್ ಕೆಲಸಗಳು ಆರಂಭವಾಗಲಿಯಂತೆ..

Image may contain: 1 person, smiling

ಕಾಲಿವುಡ್, ಟಾಲಿವುಡ್ ನಲ್ಲಿ ಸಂತೂ!!

 

ಇನ್ನು ಸ್ಯಾಂಡಲ್ ವುಡ್ ನಲ್ಲಿ ‘ಕಾಲೇಜ್ ಕುಮಾರನ’ ತಂದೆಯ ಪಾತ್ರದಲ್ಲಿ ರವಿಶಂಕರ್ ಮಿಂಚಿದ್ದರು.. ಇನ್ನು ಟಾಲಿವುಡ್ ನಲ್ಲಿ ಶ್ರೀಕಾಂತ್ ತಂದೆಯ ಪಾತ್ರಕ್ಕೆ ಜೀವ ತುಂಬಲಿದ್ದು, ಕಾಲೇಜ್ ಕುಮಾರ ಚಿತ್ರ ಕಾಲಿವುಡ್ ಗೂ ರಿಮೇಕ್ ಆಗಲಿದ್ದು ಶಿವಾಜಿ ಪ್ರಭು ತಂದೆಯ ಪಾತ್ರದಲ್ಲಿ ನಟಿಸಲಿದ್ದಾರೆ..

ಐತಿಹಾಸಿಕ ಚಿತ್ರವಾದ ‘ಬಿಚ್ಚುಗತ್ತಿ’ ಚಿತ್ರೀಕರಣ ಪೂರ್ಣಗೊಂಡ ಬಳಿಕ ನಿರ್ದೇಶಕ ಈ ಯೋಜನೆಯನ್ನು ಕೈಗೊಳ್ಳಲಿದ್ದಾರೆ. ಇನ್ನು ಪ್ರಮುಖ ನಟರಿಗಾಗಿ ಹುಡುಕಾಟ ನಡೆಸಲಾಗುತ್ತಿದ್ದು ಎಲ್ಲವೂ ಅಂದುಕೊಂಡಂತೆ ಆದರೆ ಆದಷ್ಟು ಬೇಗನೇ ‘ಕಾಲೇಜ್ ಕುಮಾರ’ ತೆರೆ ಮೇಲೆ ಬರಬಹುದು!!

Image result for college kumara kannada film@

#alemarisanthu #kollywodo #remake #collegekumara

Tags