ಸುದ್ದಿಗಳು

ಅದ್ಬುತವಾಗಿದೆ ‘ಕಳಂಕ್’ ಚಿತ್ರದ ಈ ಹಾಡು

ಮುಂಬೈ, ಮಾ.18:

ಸದ್ಯ ಮಲ್ಟಿ ಸ್ಟಾರರ್ ಇರುವ ‘ಕಳಂಕ್’ ಸಿನಿಮಾ ಟೀಸರ್ ರಿಲೀಸ್ ಆಗಿತ್ತು. ಈ ಟೀಸರ್ ರಿಲೀಸ್ ಆದ ನಂತರ ಸಿನಿಮಾ ಮೇಲಿನ ನಿರೀಕ್ಷೆ ಕೂಡ ಹೆಚ್ಚಾಗಿತ್ತು. ಇದೀಗ ಈ ಸಿನಿಮಾದ ಹಾಡೊಂದು ಬಿಡುಗಡೆಯಾಗಿದ್ದು, ಎಲ್ಲೆಡೆ ಸಕ್ಕತ್ ಸೌಂಡ್ ಮಾಡ್ತಾ ಇದೆ.

‘ಕಳಂಕ್’ ಮೊದಲ ಹಾಡು ಬಿಡುಗಡೆ

ಸದ್ಯ ಬಾಲಿವುಡ್‌ ನ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ಸಿನಿಮಾ ‘ಕಳಂಕ್’ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಈ ಬೆನ್ನಲ್ಲೇ ಈ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದ್ದು, ಸಕ್ಕತ್ ಸೌಂಡ್ ಮಾಡ್ತಾ ಇದೆ. ಘರ್ ಮೋರ್ ಪರದೇಸಿಯಾ ಎನ್ನುವ ಸಾಂಗ್ ಇದೀಗ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ.

ಶ್ರೇಯಾ ಘೋಷಲ್ ಹಾಗೂ ವೈಶಾಲಿ ಮಾಡೆ ಹಾಡಿರುವ ಈ ಹಾಡಿಗೆ ಸಂಗೀತ ನೀಡಿದ್ದಾರೆ ಪ್ರೀತಮ್, ಇನ್ನೂ ಸಂಗೀತ ಸಂಯೋಜನೆ ಮಾಡಿದ್ದಾರೆ ಅಮಿತಾಬ್ ಭಟ್ಟಾಚಾರ್ಯ. ಈ ಹಾಡಿನಲ್ಲೂ ಮಲ್ಟಿ ಸ್ಟಾರ್‌ ಗಳನ್ನು ಕಾಣಬಹುದಾಗಿದೆ. ಅಷ್ಟೇ ಅಲ್ಲ ಇಬ್ಬರ ಈ ಹಾಡು ದೊಡ್ಡ ಅರಮನೆಯಲ್ಲಿ ಶೂಟ್ ಮಾಡಲಾಗಿದೆ.

ಬಹು ತಾರಾಗಣದ ಸಿನಿಮಾ

ಕರಣ್ ಜೋಹರ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾಗೆ ಅಭಿಷೇಕ್ ವರ್ಮಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ವರುಣ್ ಧವನ್, ಆಲಿಯಾ ಭಟ್, ಆದಿತ್ಯರಾಯ್ ಕಪೂರ್,ಸಂಜಯ್ ದತ್ , ಮಾಧುರಿ ದೀಕ್ಷಿತ್ ಹಾಗೂ ಸೋನಾಕ್ಷಿ ಸಿನ್ಹಾ ಕಳಂಕ್ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. 22ವರ್ಷದ ಬಳಿಕ ಸಂಜಯ್ ದತ್ ಹಾಗೂ ಮಾಧುರಿ ದೀಕ್ಷಿತ್ ಕಳಂಕ್ ಸಿನಿಮಾದ ಮೂಲಕ ಒಂದಾಗಿದ್ದಾರೆ. ಇದೇ ಎಪ್ರಿಲ್ 17ರಂದು ವಿಶ್ವಾದ್ಯಂತ ತೆರೆಗಪ್ಪಳಿಸಲಿದೆ.

ಆಧುನಿಕ ಜಗತ್ತಿನ ನೈಜ ಘಟನಾವಳಿಗಳ ಆವರಣ

#balkaninews #kalankhindimovie #aliabhattandmadhuridixit #bollywood #hindimovies

Tags