ಸುದ್ದಿಗಳು

‘ಆರ್ ಆರ್ ಆರ್’ ಬ್ಯೂಟಿ ಆಲಿಯಾಗೆ ನೆಟ್ಟಿಗರಿಂದ ಟೀಕೆ

ಹೈದ್ರಾಬಾದ್, ಏ.22:

ರಾಜಮೌಳಿ ಅವರ ಬಹುನಿರೀಕ್ಷಿತ ‘ಆರ್ ಆರ್ ಆರ್’ ಚಿತ್ರದಲ್ಲಿ ಆಲಿಯಾ ಭಟ್ ನಟಿಸುತ್ತಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಬಾಲಿವುಡ್ ಈ ಬ್ಯೂಟಿ ಗೆ ಸದ್ಯಕ್ಕೆ ಬಿ-ಟೌನ್ ಮಾತ್ರವಲ್ಲ, ಟಾಲಿವುಡ್ ನಲ್ಲೂ ಅತೀ ಹೆಚ್ಚು ಬೇಡಿಕೆ. ಆಕೆ ನಟಿಸಿದ ಕೆಲವೊಂದು ಚಿತ್ರಗಳು ಸೂಪರ್ ಹಿಟ್ ಆದ ಬಳಿಕ ಎಲ್ಲರ ಕಣ್ಣು ಈ ಮುಗ್ದ ಸುಂದರಿಯ ಮೇಲೆ ಬಿದ್ದಿದೆ. ಸದ್ಯಕ್ಕೆ ಆಲಿಯಾ ಭಟ್ ಹೆಚ್ಚು ಸದ್ದಾಗುತ್ತಿರುವುದು ಮತ್ತು ಸುದ್ದಿಯಾಗುತ್ತಿರುವುದಕ್ಕೆ ಕಾರಣ ಆರ್ ಆರ್ ಆರ್ ಚಿತ್ರ. ರಾಮ್ ಚರಣ್ ಮತ್ತು ಎನ್ ಟಿಆರ್ ಅಭಿನಯದ ಆರ್ ಆರ್ ಆರ್ ಚಿತ್ರದಲ್ಲಿ ಆಲಿಯಾ ಭಟ್ ‘ಸೀತಾ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ವಾತಂತ್ರ್ಯಹೋರಾಟಗಾರ ಅಲ್ಲೂರಿ ರಾಮ ರಾಜು ಅವರ ಪತ್ನಿಯ ಪಾತ್ರ ಇದಾಗಿದ್ದು, ಅಲ್ಲೂರಿ ಪಾತ್ರವನ್ನು ರಾಮ್ ಚರಣ್ ನಿರ್ವಹಿಸುತ್ತಿದ್ದಾರೆ.

ಚಿತ್ರದಲ್ಲಿ ಅಜಯ್ ದೇವಗನ್ ಕೊಮರಾಮ್ ಭೀಮಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಪ್ರಭಾಸ್ ಕೂಡ ಚಿತ್ರದಲ್ಲಿ ಫವರ್ ಫುಲ್ ರೋಲ್ ಒಂದನ್ನು ನಿರ್ವಹಿಸಲಿದ್ದಾರಂತೆ.ಹೀಗಾಗಿ ಆಲಿಯಾ ಹಾಗೂ ರಾಮ್ ಚರಣ್ ಆನ್ ಸ್ಕ್ರೀನ್ ಫೇರ್ ಕುರಿತಂತೆ ಅಂತೆಕಂತೆಗಳು ಶುರವಾಗಿದ್ದು, ಈ ಜೋಡಿಯನ್ನು ತೆರೆ ಮೇಲೆ ನೋಡಲು ಪ್ರೇಕ್ಷಕರು ಕುತೂಹಲಗೊಂಡಿದ್ದಾರೆ.

ಪ್ರೇಕ್ಷಕರ ಮನಗೆಲ್ಲುವಲ್ಲಿ ಸೋತು ಹೋದ, ಕಳಂಕ್

ಇನ್ನೊಂದೆಡೆ ಬಹುನಿರೀಕ್ಷಿತ ಕಳಂಕ್ ಚಿತ್ರ ಬಿಡುಗಡೆಯಾಗಿದ್ದು, ಬಿಡುಗಡೆಗೆ ಮುನ್ನ ಇದ್ದ ಕುತೂಹಲ ಹುಸಿಯಾಗಿದೆ. ಇದೇ ಕಾರಣಕ್ಕಾಗಿ ನಟಿ ಆಲಿಯಾ ಭಟ್ ನೆಟ್ಟಿಗರ ಟೀಕೆಗೆ ಗುರಿಯಾಗಿದ್ದಾರೆ. ಆಲಿಯಾ ಭಟ್ ಅವರ ಕಳಂಕ್ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತಿದೆ. ಬಿಡುಗಡೆಗೆ ಮುನ್ನ ಸಖತ್ ನಿರೀಕ್ಷೆ ಹುಟ್ಟಿಸಿದ ಕಳಂಕ್ ಚಿತ್ರ ಪ್ರೇಕ್ಷಕರಿಗೆ ರುಚಿಸಿಲ್ಲ. ಹೀಗಾಗಿ ನೆಟ್ಟಿಗರು ಚಿತ್ರದ ಬಗ್ಗೆ ಟ್ರೋಲ್ ಮಾಡುತ್ತಿದ್ದಾರೆ. ಆಲಿಯಾ ಭಟ್ ಅವರನ್ನು ಟೀಕಿಸಿದ ‘Mujhe Ghar Jaana Hai’,’Tabaah Ho Gaye’ ಮೊದಲಾದ ಮಿಮ್ಸ್ ಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸುದ್ದಿಯಾಗುತ್ತಿದೆ. ಅಷ್ಟೇ ಅಲ್ಲದೆ ಶಾರೂಖ್ ಖಾನ್ ಅವರ ಜಿರೋ ಚಿತ್ರಕ್ಕೂ ಕಳಂಕ್ ಗೂ ಹೋಲಿಕೆ ಮಾಡುತ್ತಿದ್ದಾರೆ.

ಮಾಧುರಿ ದೀಕ್ಷಿತ್, ಸೋನಾಕ್ಷಿ ಸಿನ್ಹಾ, ವರುಣ್ ಧವನ್, ಆದಿತ್ಯಾ ರಾಯ್ ಕಾಪೂರ್ ಮತ್ತು ಸಂಜಯ್ ದತ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಅಭಿಷೇಕ್ ವರ್ಮನ್ ಅವರ ನಿರ್ದೇಶನದ ಈ ಚಿತ್ರ ಪ್ರೇಕ್ಷಕರಿಗೆ ರುಚಿಸಿಲ್ಲ. ಚಿತ್ರದಲ್ಲಿ ಕೈರಾ ಅದ್ವಾನಿ ಹಾಗೂ ಕೃತಿ ಸನೂನ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

Image result for alia bhatt in rrr movie

Image result for kalank

ಕಾರ್ಮಿಕರ ದಿನಾಚರಣೆ ದಿನದಂದು ಬರುತ್ತಿರುವ ‘99’ ಸಿನಿಮಾ

#balkaninews #bollywood #aliabhatt #instagram #aliabhattmovies #aliabhattinrrrmovie

Tags