ಸುದ್ದಿಗಳು

‘ಸಡಕ್ 2’ ಚಿತ್ರದಲ್ಲಿ ಮೇಕಪ್ ಇಲ್ಲದೇ ನಟಿಸಲಿರುವ ಬಾಲಿವುಡ್ ಬ್ಯೂಟಿ ಆಲಿಯಾ

ಸಿನಿಮಾ ನಟ – ನಟಿಯರು ಅಂದರೆ ಅವರದೇ ಆದ ಕೆಲವೊಂದು ವಿಚಾರಗಳು ಅವರಿಗೇ ಅಂತಾನೇ ಸೀಮಿತವಾಗಿರುತ್ತವೆ. ಅದರಲ್ಲಿ ಮೇಕಪ್ ಕೂಡ ಒಂದು. ಈ ಸೆಲಿಬ್ರಿಟಿಗಳು ಮೇಪಕ್ ಇಲ್ಲದೆ ಹೊರ ಬರೋದು ಕೊಂಚ ಕಷ್ಟವೇ. ಅದರಲ್ಲೂ ಸಿನಿಮಾ ಅಂತಾ ಬಂದ ಮೇಲೆ ಮೇಕಪ್ ಇದ್ದೇ ಇರುತ್ತೆ. ಇರಲೇ ಬೇಕು. ಕ್ಯಾಮರಾಗೇ ಬೇಕಾದಂತೆ ಜೊತೆಗೆ ಅಂದ ಚಂದವಾಗಿ ಕಾಣಲು ಮೇಕಪ್ ಮಾಡೋದು ಕಾಮನ್. ಸದ್ಯ ನಟಿ ಆಲಿಯಾ ಮುಂದಿನ ಸಿನಿಮಾದಲ್ಲಿ ಮೇಕಪ್ ಇಲ್ಲದೆ ನಟಿಸಲಿದ್ದಾರಂತೆ.

ಮೇಕಪ್ ಇಲ್ಲದೆ ಪಾತ್ರ ಪೋಷಣೆ

‘ಸಡಕ್’ ಸಿನಿಮಾ 28 ವರ್ಷಗಳ ಹಿಂದೆ ರಿಲೀಸ್ ಆಗಿ ಯಶಸ್ವಿಯಾಗಿತ್ತು. ಇದೀಗ ಅದೇ ಸೀಕ್ವೆಲ್ ಸಡಕ್ 2 ಬರಲಿದೆಯಂತೆ. ಸದ್ಯ ಈ ಸಿನಿಮಾದಲ್ಲಿ ಮುದ್ದು ಮುಖದ ಚೆಲುವೆ ಆಲಿಯಾ ಭಟ್ ನಟಿಸುತ್ತಿದ್ದಾರೆ. ಹೌದು, ಈ ಸಿನಿಮಾದಲ್ಲಿ ನಟಿ ಆಲಿಯಾ ಮೇಕಪ್ ಇಲ್ಲದೆ ನಟಿಸುತ್ತಿದ್ದಾರಂತೆ. ಹೀಗೆಂದು ಒಂದು ಸುದ್ದಿ ಬಾಲಿವುಡ್ ವಲಯದಲ್ಲಿ ಹೊರ ನಡೆಯುತ್ತಿದೆ.

ಸಹಜವಾಗಿ ಕಾಣಬೇಕು ಎಂಬ ನಿಟ್ಟಿನಲ್ಲಿ ಈ ನಟಿ ಮೇಕಪ್ ಇಲ್ಲದೇ ಸಿನಿಮಾದಲ್ಲಿ ನಟಿಸುತ್ತಿದ್ದಾರಂತೆ. ಈ ಮೂಲಕ ಆಲಿಯಾ ಮೇಕಪ್ ಇಲ್ಲದೆ ಕಾಣಿಸಲಿದ್ದಾರಂತೆ. ಸದ್ಯ ಈ ‘ಸಡಕ್ 2’ ಸಿನಿಮಾವನ್ನು ಮಹೇಶ್ ಭಟ್ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಇನ್ನೇನು ಈ ಸಿನಿಮಾದಲ್ಲಿನ ಆಲಿಯಾ ಅವರ ಲುಕ್ ರಿಲೀಸ್ ಮಾಡಲು ಚಿತ್ರತಂಡ ಸಿದ್ದವಾಗುತ್ತಿದೆಯಂತೆ.

ನಾಯಕಿಗಾಗಿ ಎಂಟ್ರಿ ಕೊಟ್ಟ ಕೊಡಗಿನ ಕುವರಿ ಸೌಮ್ಯ

#balkaninews #sadak2 #bollywoodmovies #withoutmakeup #aliabhatt #aliabhattmovies

Tags