ಮಹಿಳೆಸಂಬಂಧಗಳುಸುದ್ದಿಗಳು

ಆಲಿಯಾ ಭಟ್ ಹೊಸ ಡೇಟಿಂಗ್..! ಯಾರು ಗೊತ್ತೇ ಆ ಯುವಕ..? ‘ಗಲ್ಲಿ ಬಾಯ್’..!!!

ನಟಿ ಸೋನಂ ಕಪೂರ್ ರಿಸೆಪ್ಷನ್ಗೆ ರಣಬೀರ್ ಕಪೂರ್ ಜೊತೆಯಾಗಿ ಬಂದಿದ್ದ ಆಲಿಯಾ

ಮುಂಬೈ, ಅ-29ಅಲಿಯಾ ಭಟ್ ಬಾಲಿವುಡ್ ನ ಅತ್ಯಂತ ಕಿರಿಯ ಹಾಗೂ ಯಶಸ್ವಿ ನಟಿ. ಬಾಲಿವುಡ್ ಗೆ ಬಂದಾಗ ಈಕೆ ಆರಂಭದಲ್ಲಿ ಸಕ್ಸಸ್ ಗಳಿಸಿದಳು‌. ಪರಿಣಾಮ ಈಕೆ ಇದೀಗ ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ.

‘ ಬ್ರಹ್ಮಾಸ್ತ್ರ’, ‘ಕಲಂಕ್’ ಮತ್ತು ‘ಗುಲ್ಲಿ ಬಾಯ್’ ಈಕೆಯ ಮುಂಬರುವ ಹೊಸ ಸಿನಿಮಾಗಳು. ಮುಂದಿನ ವರ್ಷ ಈ ಎಲ್ಲಾ ಚಿತ್ರಗಳು ರಿಲೀಸ್ ಆಗಲಿವೆ. ‘ಬ್ರಹ್ಮಾಸ್ತ್ರ’ದಲ್ಲಿ ಈಕೆ ರಣಬೀರ್ ಕಪೂರ್ ಮತ್ತು ಅಮಿತಾಬ್ ಬಚ್ಚನ್ ಜೊತೆಗೆ ಅಭಿನಯಿಸುತ್ತಿದ್ದಾರೆ. ಇನ್ನು ಕಲಂಕ್ ಚಿತ್ರದಲ್ಲಿ ಇವರು ವರುಣ್ ಧವನ್, ಸಂಜಯ್ ದತ್ ಮತ್ತು ಮಾಧುರಿ ದೀಕ್ಷಿತ್ ಜೊತೆಗೆ ಬೆಳ್ಳಿತೆರೆಯನ್ನು ಹಂಚಿಕೊಳ್ಳುತ್ತಾರೆ. ಹಾಗೆಯೇ ‘ಗಲ್ಲಿ ಬಾಯ್’ ಚಿತ್ರದಲ್ಲಿ ಇವರು ಮೊದಲ ಬಾರಿಗೆ ರಣವೀರ್ ಸಿಂಗ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಮೊದಲಿಗೆ ಇವರಿಬ್ಬರು ‘ಮೇಕ್ ಮೈ ಟ್ರಿಪ್’  ಟಿವಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.
ಇನ್ನು ‘ರಾಜಿ’ ಯಶಸ್ಸಿನ ನಂತರ ಆಲಿಯಾ ಭಟ್ ಫುಲ್ ಬ್ಯುಸಿಯಾಗಿದ್ದಾರೆ‌. ನಟಿ ಸೋನಂ ಕಪೂರ್ ರಿಸೆಪ್ಷನ್ ಕಾರ್ಯಕ್ರಮದಲ್ಲಿ ರಣಬೀರ್ ಕಪೂರ್ ಜೊತೆಗೆ ಆಲಿಯಾ ಭಟ್ ಜೊತೆಯಾಗಿ ಬಂದಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಆಲಿಯಾ ಭಟ್, ಆತ ಸ್ನೇಹಿತ ಎಂದು ಹೇಳಿ ಜಾರಿಕೊಂಡಿದ್ದಾರೆ‌.
Tags